ETV Bharat / bharat

ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ ವಿಚಾರ: ಕೋರ್ಟ್​ ಹಸ್ತಕ್ಷೇಪ ಮಾಡುವಂತಿಲ್ಲ ಎಂದ ಚುನಾವಣಾ ಆಯೋಗ - plea to be considered on Monday

ಕೇರಳದ ಬಿಜೆಪಿ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡ ಹಿನ್ನೆಲೆ ಅವರು ಹೈಕೋರ್ಟ್​ ಮೊರೆ ಹೋಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗ, ಈ ವಿಷಯದಲ್ಲಿ ಕೋರ್ಟ್​ ಮಧ್ಯಪ್ರವೇಶಿಸಲು ಆಗುವುದಿಲ್ಲ ಎಂದಿದೆ.

ಕೇರಳ ಹೈಕೋರ್ಟ್​
ಕೇರಳ ಹೈಕೋರ್ಟ್​
author img

By

Published : Mar 21, 2021, 9:09 PM IST

ಎರ್ನಾಕುಲಂ: ಗುರುವಾಯೂರ್ ಮತ್ತು ತಲಶೇರಿಯಲ್ಲಿನ ಎನ್‌ಡಿಎ ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರವನ್ನು ತಿರಸ್ಕರಿಸುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆಯನ್ನು ಕೋರ್ಟ್​ ಭಾನುವಾರ ನಡೆಸಿ, ಸೋಮವಾರಕ್ಕೆ ಮುಂದೂಡಿದೆ.

ಅಭ್ಯರ್ಥಿಗಳ ಮನವಿಗೆ ಸಂಬಂಧಿಸಿರುವ ಕೋರ್ಟ್, ಚುನಾವಣಾ ಆಯೋಗಕ್ಕೆ ಅಫಿಡವಿಟ್ ಸಲ್ಲಿಸುವಂತೆ ನಿರ್ದೇಶನ ನೀಡಿದೆ. ಆಯೋಗದ ನಿಲುವನ್ನು ಪರಿಗಣಿಸಿದ ನಂತರ ಅರ್ಜಿಯ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ.

ಓದಿ:ಕೇರಳದಲ್ಲಿ ಬಿಜೆಪಿಯ ಮೂರು ನಾಮಪತ್ರ ತಿರಸ್ಕೃತ: ಕಾರಣ?

ನ್ಯಾಯಾಲಯವು ಭಾನುವಾರ ಅರ್ಜಿಯ ವಿಚಾರಣೆ ನಡೆಸಿತು. ಈ ನಡುವೆ ಚುನಾವಣಾ ಆಯೋಗ ಈ ವಿಷಯದಲ್ಲಿ ಕೋರ್ಟ್​ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಫಲಿತಾಂಶ ಪ್ರಕಟಣೆಯ ನಂತರವೇ ನ್ಯಾಯಾಲಯ ಮಧ್ಯಪ್ರವೇಶಿಸಬಹುದು ಎಂದು ಹೇಳಿದೆ.

ತಲಶೇರಿ, ಗುರುವಾಯೂರ್ ಮತ್ತು ದೇವಿಕುಲಂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ನಾಮಪತ್ರವನ್ನು ಶನಿವಾರ ತಿರಸ್ಕರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.