ETV Bharat / bharat

ನಿಜವಾದ ಶಿವಸೇನೆ: ಸ್ಪೀಕರ್ ತೀರ್ಪು ಯಾವೆಲ್ಲ ಅಂಶಗಳನ್ನು ಆಧರಿಸಿದೆ? ಇಲ್ಲಿದೆ ಮಾಹಿತಿ - ಅನರ್ಹ

ಮಹಾರಾಷ್ಟ್ರ ವಿಧಾನಸಭೆಯ ಶಿವಸೇನೆಯ ಉದ್ಧವ್ ಠಾಕ್ರೆ ಮತ್ತು ಶಿಂಧೆ ಗುಂಪುಗಳ ಶಾಸಕರ ಅನರ್ಹತೆಯ ಬಗ್ಗೆ ಸ್ಪೀಕರ್ ನೀಡಿದ ತೀರ್ಪಿನ ಬಗ್ಗೆ ರಾಜ್ಯಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ವಿವೇಕ್ ಕೆ. ಅಗ್ನಿಹೋತ್ರಿ ಅವರ ವಿಶ್ಲೇಷಣಾತ್ಮಕ ಲೇಖನ ಇಲ್ಲಿದೆ.

WHICH IS THE REAL ARMY OF SHIV SENA?
WHICH IS THE REAL ARMY OF SHIV SENA?
author img

By ETV Bharat Karnataka Team

Published : Jan 16, 2024, 6:47 PM IST

ಜನವರಿ 10, 2024 ರಂದು ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಶಿವಸೇನೆಯ ಉದ್ಧವ್ ಠಾಕ್ರೆ ಮತ್ತು ಶಿಂಧೆ ಗುಂಪುಗಳು ತಮ್ಮನ್ನು ತೊರೆದ ಅಥವಾ ತಮ್ಮೊಂದಿಗೆ ಸೇರದ ವಿಧಾನಸಭೆ ಸದಸ್ಯರನ್ನು ಅನರ್ಹಗೊಳಿಸುವಂತೆ ಪರಸ್ಪರರ ವಿರುದ್ಧ ಸಲ್ಲಿಸಿದ ಅರ್ಜಿ ಮತ್ತು ಪ್ರತಿ ಅರ್ಜಿಗಳ ಬಗ್ಗೆ ತೀರ್ಪು ನೀಡಿದರು.

ಸ್ಪೀಕರ್ ಎರಡೂ ಗುಂಪುಗಳ ಯಾವುದೇ ಸದಸ್ಯರನ್ನು ಅನರ್ಹಗೊಳಿಸಲಿಲ್ಲ, ಬದಲಿಗೆ ನಿಜವಾದ ಶಿವಸೇನೆ ಯಾವುದು ಎಂದು ನಿರ್ಧರಿಸಲು ಮುಂದಾದರು. ತಾವು ಪ್ರಮುಖವಾಗಿ ಮೂರು ಅಂಶಗಳನ್ನು ಆಧರಿಸಿ ತೀರ್ಪು ನೀಡಿದ್ದಾಗಿ ನಾರ್ವೇಕರ್ ತಿಳಿಸಿದ್ದಾರೆ. ಆ ಅಂಶಗಳು ಯಾವುವೆಂದರೆ; ಶಿವಸೇನೆ ಪಕ್ಷದ ಸಂವಿಧಾನ, ನಾಯಕತ್ವದ ರಚನೆ ಮತ್ತು ಅದರ ಶಾಸಕಾಂಗ ಬಹುಮತ.

ಪಕ್ಷದೊಳಗಿನ ಭಿನ್ನಾಭಿಪ್ರಾಯ ಅಥವಾ ಅಶಿಸ್ತಿಗಾಗಿ ಯಾವುದೇ ಪಕ್ಷದ ನಾಯಕತ್ವವು ಭಾರತದ ಸಂವಿಧಾನದ ಹತ್ತನೇ ಅನುಸೂಚಿಯ (ಪಕ್ಷಾಂತರ ವಿರೋಧಿ ಕಾನೂನು ಎಂದೂ ಕರೆಯಲ್ಪಡುತ್ತದೆ) ನಿಬಂಧನೆಯನ್ನು ಬಳಸಲು ಸಾಧ್ಯವಿಲ್ಲ ಎಂದು ಸ್ಪೀಕರ್ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಸಂಪರ್ಕಕ್ಕೆ ಸಿಗದ ಶಿಂಧೆ ಬಣದ 16 ಶಾಸಕರನ್ನು ಅನರ್ಹಗೊಳಿಸಲು ಅವರಿಗೆ ಯಾವುದೇ ಸೂಕ್ತ ಆಧಾರ ಕಂಡುಬಂದಿಲ್ಲ.

ಠಾಕ್ರೆ ಗುಂಪಿನ 14 ಶಾಸಕರಿಗೆ ವೈಯಕ್ತಿಕವಾಗಿ ವಿಪ್ ಅನ್ನು ತಲುಪಿಸಲಾಗಿಲ್ಲದ ಕಾರಣದಿಂದ ಅವರನ್ನು ಅನರ್ಹಗೊಳಿಸುವ ಅರ್ಜಿಯನ್ನು ಕೂಡ ಅವರು ಈ ಸಂದರ್ಭದಲ್ಲಿ ತಿರಸ್ಕರಿಸಿದ್ದಾರೆ. ಈ ತೀರ್ಮಾನಕ್ಕೆ ಬರುವಾಗ, ಠಾಕ್ರೆ ಬಣಕ್ಕೆ ಸೇರಿದ ಸುನಿಲ್ ಪ್ರಭು ಅವರು 2022 ರ ಜೂನ್ 21 ರಿಂದ ವಿಪ್ ಹುದ್ದೆಯನ್ನು ತ್ಯಜಿಸಿದ್ದರು ಮತ್ತು ಅವರ ಸ್ಥಾನಕ್ಕೆ ಶಿಂಧೆ ಗುಂಪಿನ ಭರತ್ ಗೋಗವಾಲೆ ಅವರನ್ನು ನೇಮಿಸಲಾಗಿತ್ತು ಎಂಬ ಅಂಶವನ್ನು ಸ್ಪೀಕರ್ ಪರಿಗಣಿಸಿದ್ದಾರೆ.

ಮೇ 11, 2024 ರಂದು ಸುಪ್ರೀಂ ಕೋರ್ಟ್​ನ ಸಂವಿಧಾನ ಪೀಠವು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ವಿಶ್ವಾಸಮತ ಯಾಚನೆ ಮಾಡುವಂತೆ ರಾಜ್ಯಪಾಲರು ಸೂಚಿಸಿದ್ದು ತಪ್ಪು ಮತ್ತು ಸ್ಪೀಕರ್ ಕೂಡ ಶಿಂಧೆ ಬಣವನ್ನು ಪಕ್ಷದ ವಿಪ್ ಆಗಿ ಗುರುತಿಸುವಲ್ಲಿ ತಪ್ಪು ಮಾಡಿದ್ದಾರೆ ಎಂದು ತೀರ್ಪು ನೀಡಿತ್ತು. ಅನರ್ಹತೆಯ ಅರ್ಜಿಗಳ ಬಗ್ಗೆ ನಿರ್ಧರಿಸುವಂತೆ ಮತ್ತು ಇತರ ವಿಷಯಗಳ ಜೊತೆಗೆ, ಎರಡು ಬಣಗಳಲ್ಲಿ ಯಾವುದು ಪಕ್ಷದ ನಿಜವಾದ ರಾಜಕೀಯ ವಿಭಾಗ ಎಂದು ಮೇಲ್ನೋಟಕ್ಕೆ ನಿರ್ಧರಿಸುವಂತೆ ನ್ಯಾಯಾಲಯವು ಸ್ಪೀಕರ್​ಗೆ ಸೂಚಿಸಿತ್ತು.

ಸ್ಪೀಕರ್ ಅವರ ತೀರ್ಪು ಸುಪ್ರೀಂ ಕೋರ್ಟ್ ಆದೇಶದ ಕೆಲ ಅಂಶಗಳನ್ನು ಆಧರಿಸಿದೆ ಮತ್ತು ಶಿವಸೇನೆಯ ಸಂವಿಧಾನದ ವಿವರಗಳನ್ನು ಪರಿಶೀಲಿಸಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ 1999 ರ ದಾಖಲೆಯು ಮಾನ್ಯವಾಗಿದೆ ಎಂದು ಅಭಿಪ್ರಾಯಪಟ್ಟಿತು. 2013 ಮತ್ತು 2018 ರಲ್ಲಿ ಯಾವುದೇ ಸಾಂಸ್ಥಿಕ ಚುನಾವಣೆಗಳು ನಡೆಯದ ಕಾರಣ, 2018 ರ ತಿದ್ದುಪಡಿ ಮಾಡಿದ ಸಂವಿಧಾನವನ್ನು ಅವಲಂಬಿಸಬೇಕು ಎಂಬ ಠಾಕ್ರೆ ಗುಂಪಿನ ವಾದವನ್ನು ಅವರು ತಿರಸ್ಕರಿಸಿದರು.

ಪಕ್ಷದ ಸಂವಿಧಾನದ 1999 ರ ಆವೃತ್ತಿಯನ್ನು ಮಾತ್ರ ದಾಖಲಿಸಲಾಗಿದೆ ಎಂಬ ಆಧಾರದ ಮೇಲೆ ಚುನಾವಣಾ ಆಯೋಗವು ಶಿಂಧೆ ಬಣಕ್ಕೆ ಪಕ್ಷದ ಚಿಹ್ನೆಯನ್ನು ನೀಡಿತ್ತು. ಪಕ್ಷದ ಸಂವಿಧಾನದ 2018 ರ ತಿದ್ದುಪಡಿ ಆವೃತ್ತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿಲ್ಲ. ಚುನಾವಣಾ ಆಯೋಗವು ತನ್ನ ತೀರ್ಪಿನಲ್ಲಿ ಸಾಂಸ್ಥಿಕ ವಿಭಾಗದ ಬಲವನ್ನು ಪರಿಗಣಿಸಲಿಲ್ಲ ಮತ್ತು 2018 ರ ಪಕ್ಷದ ಸಂವಿಧಾನದ ಪ್ರಜಾಪ್ರಭುತ್ವ ವಿರೋಧಿ ಸ್ವರೂಪದಿಂದಾಗಿ ಶಾಸಕಾಂಗ ವಿಭಾಗದ ಬಲವನ್ನು ಅವಲಂಬಿಸಿ ತೀರ್ಪು ನೀಡಿತ್ತು.

ಅನರ್ಹತೆಗೆ ಸಮರ್ಥನೆಯನ್ನು ರೂಪಿಸಲಾಗಿದೆಯೇ ಎಂಬುದನ್ನು ನಿರ್ಧರಿಸಲು ಪ್ರತಿ ಬಣದಲ್ಲಿನ ವಿಧಾನಸಭೆಯ ಸದಸ್ಯರ ಶೇಕಡಾವಾರು ಅಪ್ರಸ್ತುತವಾಗಿದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ ಎಂಬುದು ಇಲ್ಲಿ ಪ್ರಮುಖವಾಗುತ್ತದೆ. ಆದಾಗ್ಯೂ, ಪಕ್ಷಾಂತರದ ಪ್ರಶ್ನೆಯನ್ನು ನಿರ್ಣಯಿಸುವಾಗ ಯಾವ ಬಣವು ನಿಜವಾದ ಪಕ್ಷ ಎಂದು ಸ್ಪೀಕರ್ ನಿರ್ಧರಿಸಬೇಕಾಗಬಹುದು ಎಂದು ನ್ಯಾಯಾಲಯ ಒಪ್ಪಿಕೊಂಡಿತ್ತು. ಪ್ರತಿಸ್ಪರ್ಧಿ ಗುಂಪುಗಳು ಸೃಷ್ಟಿಯಾಗುವ ಮೊದಲು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪಕ್ಷದ ಸಂವಿಧಾನ ಮತ್ತು ನಾಯಕತ್ವ ರಚನೆಯ ಆವೃತ್ತಿಯನ್ನು ಅವಲಂಬಿಸಲು ಅದು ಒಲವು ತೋರಿತ್ತು. ಈ ಅವಲೋಕನಗಳನ್ನು ಯಾವ ಗುಂಪು ನಿಜವಾದ ಪಕ್ಷ ಎಂಬುದನ್ನು ನಿರ್ಧರಿಸಲು ಸ್ಪೀಕರ್ ಬಳಸಿಕೊಂಡರು.

ಆದಾಗ್ಯೂ, ಅನರ್ಹತೆಯ ಪ್ರಶ್ನೆಯನ್ನು ನಿರ್ಧರಿಸಲು ವಿಫಲವಾದ ಕಾರಣ ಸ್ಪೀಕರ್ ತೀರ್ಪು ಸುಪ್ರೀಂ ಕೋರ್ಟ್​ನ ನಿರ್ದೇಶನಕ್ಕೆ ಅನುಗುಣವಾಗಿಲ್ಲ ಎಂಬ ಆಧಾರದ ಮೇಲೆ ಠಾಕ್ರೆ ಗುಂಪು ಸುಪ್ರೀಂ ಕೋರ್ಟ್​ಗೆ ಹೋಗಬಹುದಾಗಿರುವುದರಿಂದ ಈ ವಿಷಯವು ಇಲ್ಲಿಗೇ ಮುಗಿಯಲಾರದು. ಸ್ಪೀಕರ್ ಅವರ ನಿರ್ಧಾರವು ರಾಜಕೀಯ ಪ್ರೇರಿತವಾಗಿದೆ ಮತ್ತು ಅದು ಕಾನೂನುಬದ್ಧವಾಗಿಲ್ಲ ಎಂದು ಆರೋಪಿಸಬಹುದು. ಪಕ್ಷಾಂತರ ವಿವಾದಗಳು ಸ್ಪೀಕರ್​ಗಳ ಕೈಯಲ್ಲಿರುವವರೆಗೆ, ಯಾವುದೇ ಸ್ವತಂತ್ರ ಪ್ರಾಧಿಕಾರದಲ್ಲಿ ಇರದಿರುವವರೆಗೆ, ರಾಜಕೀಯ ಪರಿಗಣನೆಗಳು ನಿಸ್ಸಂದೇಹವಾಗಿ ಅಂಥ ತೀರ್ಪುಗಳ ಮೇಲೆ ಪರಿಣಾಮ ಬೀರುತ್ತವೆ.

2019 ರ ವಿಧಾನಸಭಾ ಚುನಾವಣೆಯ ನಂತರ ಮಹಾರಾಷ್ಟ್ರದಲ್ಲಿ ರಾಜಕೀಯ ಪ್ರಕ್ಷುಬ್ಧತೆ ಮುಂದುವರೆದಿದೆ. ಏತನ್ಮಧ್ಯೆ 2024 ರ ಜನವರಿ 31 ರೊಳಗೆ ಸ್ಪೀಕರ್ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ವಿವಾದವನ್ನು ಕೂಡ ಪರಿಹರಿಸಬೇಕಿದೆ.

(ಲೇಖನ : ವಿವೇಕ್ ಕೆ. ಅಗ್ನಿಹೋತ್ರಿ, ಮಾಜಿ ಪ್ರಧಾನ ಕಾರ್ಯದರ್ಶಿ, ರಾಜ್ಯಸಭೆ, ಭಾರತದ ಸಂಸತ್ತು)

ಇದನ್ನೂ ಓದಿ : ಕೃಷ್ಣ ಜನ್ಮಭೂಮಿ ವಿವಾದ: ಶಾಹಿ ಈದ್ಗಾ ಮಸೀದಿ ಪರಿಶೀಲನೆ ಸಂಬಂಧದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.