ಆಂಧ್ರಪ್ರದೇಶ: ನೆಲ್ಲೂರು ಮೆಡಿಕೋವರ್ ಆಸ್ಪತ್ರೆಯ ವೈದ್ಯರು ಅಪರೂಪದ 'ಡೆಕ್ಸ್ಟ್ರೋಕಾರ್ಡಿಯಾ' ಹೃದ್ರೋಗ ಹೊಂದಿರುವ ರೋಗಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ನೆಲ್ಲೂರಿನ ತಿರುಪತಿ ರೆಡ್ಡಿ(47) ಎಂಬುವವರು ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅಗತ್ಯ ಪರೀಕ್ಷೆಗಳನ್ನು ನಡೆಸಿದಾಗ ಬಲಭಾಗದಲ್ಲಿ ಇರಬೇಕಾದ ಅಂಗಗಳು ಎಡಭಾಗದಲ್ಲಿ ಮತ್ತು ಎಡಭಾಗದಲ್ಲಿ ಇರಬೇಕಾದ ಅಂಗಗಳು ಬಲಭಾಗದಲ್ಲಿರುವುದು ಗಮನಕ್ಕೆ ಬಂದಿತು ಎಂದು ಡಾ.ತ್ರಿಲೋಕ್ ಹೇಳಿದ್ದಾರೆ.
ವಿಶ್ವದಲ್ಲಿ ಇದು 38ನೇ ಮತ್ತು ದೇಶದಲ್ಲಿ 5ನೇ ಶಸ್ತ್ರಚಿಕಿತ್ಸೆಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಅನುಭವಿ ವೈದ್ಯರ ತಂಡದಿಂದ ಸುಮಾರು 6-7 ಗಂಟೆಗಳ ಕಾಲ ಈ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ ಎಂದು ಆಸ್ಪತ್ರೆ ಉಪಾಧ್ಯಕ್ಷ ಮಹೇಶ್ವರ ರೆಡ್ಡಿ ಹಾಗೂ ಕೇಂದ್ರದ ಮುಖ್ಯಸ್ಥ ಗಣೇಶ್ ತಿಳಿಸಿದ್ದಾರೆ.
ಡೆಕ್ಸ್ಟ್ರೋಕಾರ್ಡಿಯಾದ ಸಂಭವ 10 ಸಾವಿರದಲ್ಲಿ ಒಂದು. ಈ ರೋಗಿಗಳಿಗೆ ಸಿಎಬಿಜಿ ಶಸ್ತ್ರಚಿಕಿತ್ಸೆ ಅಗತ್ಯವಿರುತ್ತದೆ. ವಿಶ್ವಾದ್ಯಂತ ಡೆಕ್ಸ್ಟ್ರೋಕಾರ್ಡಿಯಾ ರೋಗಿಗಳಲ್ಲಿ ಕೇವಲ 37 ಸಿಎಬಿಜಿ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ. ಭಾರತದಲ್ಲಿ ಈವರೆಗೆ 4 ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದ್ದು, ತಿರುಪತಿ ರೆಡ್ಡಿ ಶಸ್ತ್ರಚಿಕಿತ್ಸೆ ಸೇರಿ ವಿಶ್ವದಲ್ಲಿ 38ನೇ ಮತ್ತು ಭಾರತದಲ್ಲಿ 5ನೇ ಪ್ರಕರಣವಾಗಿದೆ.
ಇದನ್ನೂ ಓದಿ: ಇತಿಹಾಸ ಪರೀಕ್ಷೆಯಲ್ಲಿ ಜಾತಿ ಸೂಚಕ ಪ್ರಶ್ನೆ ಕೇಳಿ ವಿವಾದಕ್ಕೀಡಾದ ತಮಿಳುನಾಡು ವಿವಿ