ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್ನಲ್ಲಿ ದುಷ್ಕೃತ್ಯವೊಂದು ಬೆಳಕಿಗೆ ಬಂದಿದೆ. ಮೇಡ್ಚಲ್ ಜಿಲ್ಲೆಯ ನೆರೆಡ್‌ಮೆಟ್‌ನಲ್ಲಿರುವ ಮಕ್ಕಳ ಮನೆಯಲ್ಲಿ ಆಶ್ರಯ ಪಡೆದಿದ್ದ ಇಬ್ಬರು ಅನಾಥ ಬಾಲಕಿಯರ ಮೇಲೆ ಆಶ್ರಯ ನೀಡಿದ ವ್ಯಕ್ತಿಯೇ ಅತ್ಯಾಚಾರವೆ ಎಸೆಗಿರುವ ಹೇಯ ಕೃತ್ಯ ಬೆಳಕಿಗೆ ಬಂದಿದೆ.
ಇದೇ 19ರಂದು ಬಾಲಕಿಯರು ಸಖಿ ಕೇಂದ್ರದ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ದೌರ್ಜನ್ಯ ಬೆಳಕಿಗೆ ಬಂದಿದೆ. ಸಂತ್ರಸ್ತರಿಂದ ದೂರು ಸ್ವೀಕರಿಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಮುರಳಿ ವಿರುದ್ಧ ಪೋಕ್ಸೊ, ಎಸ್‌ಸಿ ಮತ್ತು ಎಸ್‌ಟಿ ಅತ್ಯಾಚಾರ ಕಾಯ್ದೆಯಡಿ ದೂರು ದಾಖಲಾಗಿದೆ. ಎರಡನೇ ಆರೋಪಿ ವಿಕ್ಟರ್ ಮತ್ತು ಅತನ ಪತ್ನಿ ವಿರುದ್ಧ ಬಾಲನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಸರ್ಕಾರದ ಅನುಮತಿ ಇಲ್ಲದೇ ಈ ಮಕ್ಕಳ ಮನೆ ನಡೆಸುತ್ತಿರುವುದು ತಿಳಿದು ಬಂದಿದೆ.
ಬಾಲಕಿಯರು ಅನಾಥಾಶ್ರಮದಿಂದ ತಪ್ಪಿಸಿಕೊಂಡಾಗ ಬೆಳಕಿಗೆ ಬಂದ ಘಟನೆ: ಚಿಲ್ಡ್ರನ್ಸ್ ಹೋಮ್ ಹೆಸರಿನ ಖಾಸಗಿ ಸಂಸ್ಥೆಯು ಮೇಡ್ಚಲ್ ಜಿಲ್ಲೆಯ ನೆರೆದಮೆಟ್ ಕ್ರಾಸ್ ರಸ್ತೆ ಬಳಿ ಅನಾಥ ಬಾಲಕಿಯರು ಮತ್ತು ಯುವತಿಯರಿಗೆ ವಸತಿ ಕಲ್ಪಿಸುತ್ತಿದೆ. ಸುಮಾರು ಐದು ವರ್ಷಗಳಿಂದ ನಡೆಯುತ್ತಿರುವ ಆಶ್ರಮದಲ್ಲಿ 10 ರಿಂದ 25 ವರ್ಷದೊಳಗಿನ 36 ಮಂದಿ ಆಶ್ರಯ ಪಡೆಯುತ್ತಿದ್ದಾರೆ. ಈ ತಿಂಗಳ 19 ರಂದು ಒಬ್ಬ ಯುವತಿ ಸೇರಿ ಮೂವರು ಅಪ್ರಾಪ್ತರು ಮನೆಯಿಂದ ಓಡಿಹೋಗಿದ್ದರು.
ಇದನ್ನೂ ಓದಿ: ಚರ್ಚ್ ಲೈಟ್ ಆಫ್ ಮಾಡಲು ಹೋಗಿದ್ದ ಮಹಿಳೆ ಮೇಲೆ ಅತ್ಯಾಚಾರ ಯತ್ನ; ಕಾಮುಕನ ಬಂಧನ
ಯುವತಿ ಸಂಗಾರೆಡ್ಡಿ ಜಿಲ್ಲೆಗೆ ಹೋಗಿದ್ದಾಳೆ. ಅಲ್ಲಿ ಪರಿಚಯಸ್ಥರೊಬ್ಬರ ಮನೆಯಲ್ಲಿ ಆಶ್ರಯ ಪಡೆದದ್ದು, ತನ್ನ ಜೊತೆ ಬಂದಿದ್ದ ಇಬ್ಬರು ಹುಡುಗಿಯರನ್ನು ಸಿಕಂದರಾಬಾದ್ ನಲ್ಲಿ ಬಿಟ್ಟು ಹೋಗಿದ್ದಾಳೆ. ಚಿಕ್ಕ ಹುಡುಗಿಯರಿಗೆ ಎಲ್ಲಿಗೆ ಹೋಗಬೇಕೆಂದು ತಿಳಿಯದೇ ಕೆಲವು ಗಂಟೆಗಳ ನಂತರ, ಅವರು ವಾಪಸ್ ಮಕ್ಕಳ ಮನೆಗೆ ಮರಳಿದ್ದಾರೆ.
ವಿಷಯ ತಿಳಿದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಸಖಿ ಕೇಂದ್ರದ ಅಧಿಕಾರಿಗಳು ಬಾಲಕಿಯರೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಈ ಕೌನ್ಸೆಲಿಂಗ್ ಮಾಡಿ ಓಡಿ ಹೋಗಲು ಕಾರಣಗಳನ್ನು ಕಂಡುಹಿಡಿದ್ದಾರೆ. ಕೌನ್ಸೆಲಿಂಗ್ನಲ್ಲಿ ಇಬ್ಬರೂ ಬಾಲಕಿಯರು ತಮ್ಮ ಮೇಲೆ ಅತ್ಯಾಚಾರವೆಸಗಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಯುಪಿಯಲ್ಲಿ ನಿರ್ಭಯಾ ಮಾದರಿ ಕೇಸ್: ವಿದ್ಯಾರ್ಥಿನಿ ಮೇಲೆ ಕಾಮುಕರಿಂದ ರೇಪ್, ಬೆತ್ತಲೆಗೊಳಿಸಿ ಥಳಿತ
ಹುಡುಗಿಯರಿಂದ ಮಸಾಜ್?: ಬಾಲಕಿಯರ ಹೇಳಿಕೆ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ. ತನಿಖೆಯ ಭಾಗವಾಗಿ ಇನ್ನಷ್ಟು ಸಂಗತಿಗಳು ಬೆಳಕಿಗೆ ಬಂದಿವೆ. ಪ್ರಮುಖ ಆರೋಪಿ ಮುರಳಿ ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದನಂತೆ. ಅವರಿಗೆ ಲೈಂಗಿಕ ಕಿರುಕುಳ ನೀಡಿ, ಮಸಾಜ್ ಮಾಡಿಸಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬಿಸಿನೆಸ್ ಮಾತುಕತೆ ನಡೆಸುವ ಸೋಗಿನಲ್ಲಿ ಪರಿಚಯಸ್ಥ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಕಾಮುಕ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ತನಿಖೆ: ಘಟನೆ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತನಿಖೆ ನಡೆಸುತ್ತಿದೆ. ಜೊತೆಗೆ ನೆರೆಡ್‌ಮೆಟ್ ಹೋಮ್‌ನಲ್ಲಿದ್ದ ಬಾಲಕಿಯರನ್ನು ನಿಂಬೋಲಿಯದ್ದಾದಲ್ಲಿರುವ ಸರ್ಕಾರಿ ಕಲ್ಯಾಣ ನಿಲಯಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.