ETV Bharat / bharat

ಅತ್ಯಾಚಾರ ಪ್ರಕರಣ: ಜೀವಾವಧಿ ಶಿಕ್ಷೆ ಅಮಾನತುಗೊಳಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಅಸಾರಾಂ ಬಾಪು

ಗುಜರಾತ್ ಹೈಕೋರ್ಟ್‌ಗೆ ಅತ್ಯಾಚಾರ ಆರೋಪಿ ಅಸಾರಾಂ ಬಾಪು ಅರ್ಜಿ ಸಲ್ಲಿಸಿದ್ದಾರೆ

ಗುಜರಾತ್ ಹೈಕೋರ್ಟ್‌
ಗುಜರಾತ್ ಹೈಕೋರ್ಟ್‌
author img

By

Published : Jul 19, 2023, 7:26 PM IST

ಅಹಮದಾಬಾದ್ (ಗುಜರಾತ್​​) : ಅತ್ಯಾಚಾರ ಆರೋಪಿ ಅಸಾರಾಂ ಬಾಪು ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಗುಜರಾತ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಗಾಂಧಿನಗರ ಸೆಷನ್ಸ್ ಕೋರ್ಟ್ ಅಸಾರಾಂಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಶಿಕ್ಷೆಯ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಬಳಿಕ ಇದೀಗ ಗುಜರಾತ್ ಹೈಕೋರ್ಟ್‌ನಲ್ಲಿ ಅಸಾರಾಂ ಪರವಾಗಿ ಮತ್ತೊಂದು ಅರ್ಜಿ ಸಲ್ಲಿಸಲಾಗಿದ್ದು, ಶಿಕ್ಷೆಯನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ. ಈ ಅರ್ಜಿಯಲ್ಲಿ ಈಗಾಗಲೇ ಅಪರಾಧದ ಶಿಕ್ಷೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ. ಈ ಮೇಲ್ಮನವಿಯ ವಿಚಾರಣೆಗೆ ಸಮಯ ಹಿಡಿಯಬಹುದು. ಆದರೇ ಅವರ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಬೇಕು ಎಂದು ಅಸಾರಾಂ ಪರ ವಕೀಲ ನಿತಿನ್ ಗಾಂಧಿ ಕೋರ್ಟ್​ಗೆ ಮನವಿ ಮಾಡಿದ್ದಾರೆ.

ಅಸಾರಾಂ ವಿರುದ್ಧದ ಪ್ರಕರಣ ಸಂಪೂರ್ಣ ಕಾಲ್ಪನಿಕವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ದೂರುದಾರರು ಮತ್ತು ಸಾಕ್ಷಿದಾರರು ಅಸಾರಾಂ ಮತ್ತು ಅವರ ಆಶ್ರಮಕ್ಕೆ ಹಾನಿ ಮಾಡುವ ಯೋಜಿತ ಸಂಚು ಇದಾಗಿದೆ. ಹಣಕಾಸಿನ ಲಾಭಕ್ಕಾಗಿ ದೂರುದಾರರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ವಿಚಾರಣಾ ನ್ಯಾಯಾಲಯವು ನೀಡುವ ಯಾವುದೇ ನಿರ್ಧಾರವು ದೋಷದಿಂದ ನಾಶವಾಗುತ್ತದೆ.

ಈಗಾಗಲೇ ಅಸಾರಾಂ ಅವರಿಗೆ 84 ವರ್ಷ ವಯಸಾಗಿದ್ದು, ವಿವಿಧ ವಯೋ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಹಾಗೂ ದೀರ್ಘಕಾಲದಿಂದ ಜೈಲಿನಲ್ಲಿ ಇದ್ದಾರೆ ಎಂದು ಸಹ ಅರ್ಜಿಯಲ್ಲಿ ಉಲ್ಲೇಖಿಸಿ ಸಲ್ಲಿಸಲಾಗಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 17 ರಂದು ನ್ಯಾಯಮೂರ್ತಿಗಳಾದ ವೈ ಕೊಗ್ಜೆ ಮತ್ತು ಹಸ್ಮುಖ್ ಸುತಾರ್ ಅವರ ವಿಭಾಗೀಯ ಪೀಠದಲ್ಲಿ ನಡೆಸಲಾಗುವುದು.

ಪ್ರಕರಣ ಹಿನ್ನೆಲೆ ಏನು? : 2013 ರಲ್ಲಿ ಸ್ವಯಂ ಘೋಷಿತ ದೇವಮಾನವ ಅಸಾರಾಂ​ ಬಾಪುರನ್ನು ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. 2001 ರಿಂದ 2006ರ ನಡುವೆ ಗುಜರಾತ್​ನ ಅಹಮದಾಬಾದ್ ಬಳಿಯ ಮೊಟೆರಾದಲ್ಲಿರುವ ಅಸಾರಾಂ ಬಾಪು ಆಶ್ರಮದಲ್ಲಿ ವಾಸಿಸುತ್ತಿದ್ದ ಸೂರತ್‌ ಮೂಲದ ಶಿಷ್ಯೆಯ ಮೇಲೆ ಹಲವಾರು ಬಾರಿ ಅತ್ಯಾಚಾರವೆಸಗಿದ ಆರೋಪವು ಅಸಾರಾಂ ಮೇಲಿತ್ತು. ಈ ಕುರಿತಂತೆ 2013ರಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಗುಜರಾತ್​ನ ಗಾಂಧಿನಗರದ ಸೆಷನ್ಸ್ ಕೋರ್ಟ್ಅಸಾರಾಂ ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು. ಅಲ್ಲದೇ ಜೀವಾವಧಿ ಶಿಕ್ಷೆಯನ್ನು ಸಹ ವಿಧಿಸಿತ್ತು. ಭಾರತೀಯ ದಂಡ ಸಂಹಿತೆ 376 - 2 (ಸಿ) (ಅತ್ಯಾಚಾರ), 377 (ಅಸ್ವಾಭಾವಿಕ ಅಪರಾಧಗಳು), 342 (ಕಾನೂನುಬಾಹಿರ ಬಂಧನ), 354 (ಕೆರಳಿಸುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಪ್ರಹಾರ), 357 (ಹಲ್ಲೆ) ಮತ್ತು ಮತ್ತು 506 (ಬೆದರಿಕೆ) ಅಡಿಯಲ್ಲಿ ಅಸಾರಾಂ ಅವರನ್ನು ನ್ಯಾಯಾಲಯವು ದೋಷಿ ಎಂದು ತೀರ್ಪು ಪ್ರಕಟಿಸಿತ್ತು.

ಇದನ್ನೂ ಓದಿ : ಉನ್ನಾವೋ: ಅತ್ಯಾಚಾರ ಸಂತ್ರಸ್ತೆಯ ಮನೆ ಮುಂದೆ ಗುಂಡು ಹಾರಿಸಿದ ಆರೋಪಿಗಳು- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.