ETV Bharat / bharat

ಮಾವೋವಾದಿಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಪ್ರಕರಣ: ಭದ್ರತಾ ಸಿಬ್ಬಂದಿ ಸೇರಿ 24 ಅಪರಾಧಿಗಳಿಗೆ 10 ವರ್ಷ ಜೈಲು

ಉತ್ತರ ಪ್ರದೇಶದ ರಾಂಪುರದಲ್ಲಿ ನಕ್ಸಲರಿಗೆ ಕಾಟ್ರಿಡ್ಜ್‌ಗಳ ಪೂರೈಕೆ ಪ್ರಕರಣದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಸೇರಿ 24 ಅಪರಾಧಿಗಳಿಗೆ ಕೋರ್ಟ್‌ 10 ವರ್ಷ ಜೈಲು ಹಾಗೂ ದಂಡ ವಿಧಿಸಿದೆ.

rampur-cartridge-case-24-accused-were-sentenced-10-years-each-court-announced-its-decision
ಮಾವೋವಾದಿಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಪ್ರಕರಣ: ಭದ್ರತಾ ಸಿಬ್ಬಂದಿ ಸೇರಿ 24 ಅಪರಾಧಿಗಳಿಗೆ 10 ವರ್ಷ ಜೈಲು
author img

By ETV Bharat Karnataka Team

Published : Oct 13, 2023, 8:20 PM IST

ರಾಂಪುರ (ಉತ್ತರ ಪ್ರದೇಶ): ಮಾವೋವಾದಿಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಪ್ರಕರಣದಲ್ಲಿ ಉತ್ತರ ಪ್ರದೇಶದ ರಾಂಪುರ ವಿಶೇಷ ನ್ಯಾಯಾಲಯವು 24 ಅಪರಾಧಿಗಳಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿತು. ಶಿಕ್ಷೆಗೆ ಒಳಗಾದವರ ಪೈಕಿ ಹೆಚ್ಚಿನವರು ಭದ್ರತಾ ಸಿಬ್ಬಂದಿಯಾಗಿದ್ದಾರೆ.

ಶಸ್ತ್ರಾಸ್ತ್ರ ಪೂರೈಕೆ ಪ್ರಕರಣವು ರಾಂಪುರ ಕಾರ್ಟ್ರಿಡ್ಜ್ ಹಗರಣ ಎಂದೇ ಕುಖ್ಯಾತಿ ಪಡೆದಿದೆ. ಈ ಪ್ರಕರಣದಲ್ಲಿ ಇಸಿ ಕಾಯ್ದೆಯ ವಿಶೇಷ ನ್ಯಾಯಾಲಯವು 24 ಆರೋಪಿಗಳನ್ನು ದೋಷಿ ಎಂದು ಗುರುವಾರ ತೀರ್ಪು ನೀಡಿತ್ತು. ಇಂದು ಎಲ್ಲರಿಗೂ ಶಿಕ್ಷೆ ಪ್ರಮಾಣ ಪ್ರಕಟಿಸಿರುವ ಕೋರ್ಟ್​, ತಲಾ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದಲ್ಲದೇ ತಲಾ 10 ಸಾವಿರ ರೂ.ಗಳ ದಂಡ ಹಾಕಿದೆ. ಇವರಲ್ಲಿ ಇಬ್ಬರು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಕಾನ್‌ಸ್ಟೆಬಲ್‌ಗಳೂ ಸೇರಿದ್ದಾರೆ. ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಪ್ರಮುಖ ಆರೋಪಿ ಮೃತಪಟ್ಟಿದ್ದಾನೆ.

ಪ್ರಕರಣದ ಹಿನ್ನೆಲೆ: ರಾಂಪುರದ ಕಾರ್ಟ್ರಿಡ್ಜ್ ಕಮಿಷನರ್ ಸ್ಟೋರ್‌ನಿಂದ (ಸಿಡಬ್ಲ್ಯೂಎಸ್) 2010ರಲ್ಲಿ ಕಾರ್ಟ್ರಿಡ್ಜ್‌ಗಳನ್ನು ಅಕ್ರಮವಾಗಿ ಹೊರಗೆ ಸಾಗಿಸುತ್ತಿರುವ ವಿಷಯ ಬೆಳಕಿಗೆ ಬಂದಿತ್ತು. ಪ್ರಕರಣದಲ್ಲಿ ಮೊದಲ ಬಾರಿಗೆ ಮೂವರು ಆರೋಪಿಗಳನ್ನು ಎಸ್‌ಟಿಎಫ್ ತಂಡ ಬಂಧಿಸಿತ್ತು. ನಂತರ ಹಲವು ಆರೋಪಿಗಳು ಪರಸ್ಪರ ಇತರರ ಹೆಸರಗಳನ್ನು ಬಹಿರಂಗಪಡಿಸಿದ್ದರು.

ಆರಂಭದಲ್ಲಿ ನಿವೃತ್ತ ಇನ್ಸ್‌ಪೆಕ್ಟರ್​ ಯಶೋದಾ ನಂದ್ ಅವರನ್ನು ಬಂಧಿಸಲಾಗಿತ್ತು. ಇದಲ್ಲದೆ, ಸಿಆರ್‌ಪಿಎಫ್‌ನಲ್ಲಿ ನಿಯೋಜನೆಗೊಂಡಿದ್ದ ವಿನೋದ್ ಪಾಸ್ವಾನ್ ಮತ್ತು ವಿನೇಶ್ ಕುಮಾರ್ ಕೂಡ ಸಿಕ್ಕಿಬಿದ್ದಿದ್ದರು. ಈ ಮೂವರು ಆರೋಪಿಗಳಿಂದ ಇನ್ಸಾಸ್ ರೈಫಲ್, ಎರಡೂವರೆ ಕ್ವಿಂಟಲ್ ಕಿಯೋಸ್ಕ್ ಹಾಗೂ 1.76 ಲಕ್ಷ ರೂ. ವಶಕ್ಕೆ ಪಡೆಯಲಾಗಿತ್ತು. ಈ ಆರೋಪಿಗಳು ನಕ್ಸಲರಿಗೆ ಕಾಟ್ರಿಡ್ಜ್‌ಗಳನ್ನು ಪೂರೈಸುತ್ತಿದ್ದರು ಎಂದು ತನಿಖೆಯಲ್ಲಿ ಬಯಲಾಗಿತ್ತು.

ಈ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಮೊರಾದಾಬಾದ್, ಬಸ್ತಿ, ಗೊಂಡಾ, ವಾರಣಾಸಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇತರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೇ, ದಾಂತೇವಾಡದಲ್ಲಿ ನಡೆದ ದಾಳಿಗೆ ರಾಂಪುರದ ಸಿಡಬ್ಲ್ಯೂಎಸ್​ನಿಂದ ನಕ್ಸಲೀಯರಿಗೆ ಕಾಟ್ರಿಡ್ಜ್‌ಗಳನ್ನು ಸರಬರಾಜು ಮಾಡಿದ್ದರು. ಕಾರ್ಟ್ರಿಡ್ಜ್ ಪೂರೈಕೆಗಾಗಿ ಹಣ ವಹಿವಾಟುಗಳನ್ನು ಬ್ಯಾಂಕುಗಳ ಮೂಲಕ ಮಾಡಲಾಗುತ್ತಿತ್ತು ಖಚಿತವಾಗಿತ್ತು. ಈ ಕುರಿತು ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಲಾಗಿತ್ತು. ಇದೀಗ 13 ವರ್ಷಗಳ ನಂತರ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಿದೆ. ಶಿಕ್ಷೆಗೆ ಗುರಿಯಾಗುತ್ತಿದ್ದಂತೆ ಎಲ್ಲ ಅಪರಾಧಿಗಳು ನ್ಯಾಯಾಲಯದ ಆವರಣದಿಂದ ತಮ್ಮ ಮುಖ ಮುಚ್ಚಿಕೊಂಡು ಹೊರಬರುವುದು ಕಂಡುಬಂತು.

ಇದನ್ನೂ ಓದಿ: 49 ವರ್ಷದ ಹಿಂದಿನ ಕೊಲೆ ಪ್ರಕರಣ: 80 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.