ಪುಣೆ (ಮಹಾರಾಷ್ಟ್ರ): ಮುಸ್ಲಿಮರ ಪ್ರಮುಖ ಬಕ್ರೀದ್ ಸಮೀಪಿಸುತ್ತಿದ್ದು, ಮೇಕೆಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಮಹಾರಾಷ್ಟ್ರದ ಪುಣೆಯ ಲಕ್ಷ್ಮಿ ಬಜಾರ್‌ನಲ್ಲಿ 'ರ‍್ಯಾಂಬೋ' ಎಂಬ ಮೇಕೆ ಜನರ ಗಮನ ಸೆಳೆಯುತ್ತಿದೆ.
ರಾಜಸ್ಥಾನದಿಂದ ತಂದಿರುವ ಈ 'ರ‍್ಯಾಂಬೋ' ಮೇಕೆಯನ್ನು ನೋಡಲು ಜನರು ಕಿಕ್ಕಿರಿದು ಸೇರುತ್ತಿದ್ದಾರೆ. ಈ ಮೇಕೆ 7 ಅಡಿ ಎತ್ತರವಿದ್ದು, ಇದು ಕುದುರೆಯಂತೆಯೇ ಕಾಣುತ್ತಿದೆ ಎಂದೇ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಇದರ ಬೆಲೆ 60 ಸಾವಿರ ರೂಪಾಯಿ ಎಂದು ಮಾಲೀಕರು ಹೇಳಿದ್ದಾರೆ.
ಲಕ್ಷ್ಮಿ ಬಜಾರ್‌ನಲ್ಲಿ ಔರಂಗಾಬಾದ್, ಜಲ್ನಾ, ಬೀಡ್, ಅಹಮದ್‌ನಗರ, ಪರ್ಭಾನಿ, ಮುಂಬೈ, ಕಲ್ಯಾಣ್ ಮತ್ತು ಥಾಣೆಯಿಂದಲೂ ಮೇಕೆಗಳನ್ನು ತರಲಾಗುತ್ತಿದೆ. ಉಸ್ಮಾನಾಬಾದಿ ಗವರನ್ ಬೊಕ್ಡಾ ಎಂಬ ಮೇಕೆಗೂ ಹೆಚ್ಚಿನ ಬೇಡಿಕೆ ಇದೆ. ಇಲ್ಲಿ 10 ಸಾವಿರ, 12 ಸಾವಿರ, 25 ಸಾವಿರ, 60 ಸಾವಿರ ರೂ. ಹಾಗೂ 1 ಲಕ್ಷ ಮೌಲ್ಯದ ಮೇಕೆಗಳೂ ಮಾರುಕಟ್ಟೆಗೆ ಬಂದಿವೆ.
ಇದನ್ನೂ ಓದಿ: ಸರ್ಕಾರ ಭದ್ರಪಡಿಸಿಕೊಳ್ಳಲು ಶಿಂದೆ ಭರಪೂರ ಅನುದಾನ.. ಬಂಡಾಯ ಶಾಸಕರ ಮನತಣಿಸಲು ಜಾಣ ನಡೆ