ನವದೆಹಲಿ: ಲೋಕಸಭೆಯಲ್ಲಿ ಬುಧವಾರ ಅಂಗೀಕಾರ ಪಡೆದ ಬೆನ್ನಲ್ಲೇ ರಾಜ್ಯಸಭೆಯಲ್ಲೂ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿದೆ. ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ಎಲ್ಲ 215 ಸಂಸದರು ಕೂಡ 'ನಾರಿ ಶಕ್ತಿ ವಂದನ ಅಧಿನಿಯಮ' ಮಸೂದೆ ಪರವಾಗಿ ಮತ ಚಲಾವಣೆ ಮಾಡಿದ್ದು, ಯಾರೂ ಕೂಡ ವಿರುದ್ಧವಾಗಿ ಮತ ಚಲಾಯಿಸಿಲ್ಲ.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ಮಸೂದೆ-2023 ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುತ್ತದೆ. ಈ ಮಸೂದೆಯನ್ನು ಪರಿಗಣಿಸುವ ಪ್ರಸ್ತಾವನೆಯನ್ನು ರಾಜ್ಯಸಭೆಯು ಸರ್ವಾನುಮತದಿಂದ ಅಂಗೀಕರಿಸಿತು. ಸದನದಲ್ಲಿ ಹಾಜರಿದ್ದ ಎಲ್ಲ 215 ಸದಸ್ಯರು ಮಸೂದೆ ಅಂಗೀಕರಿಸುವ ನಿರ್ಣಯವನ್ನು ಬೆಂಬಲಿಸಿದರು. ಸ್ವಯಂಚಾಲಿತ ಮತದಾನ ತಂತ್ರಜ್ಞಾನವನ್ನು ಬಳಸಿಕೊಂಡು ಸಂಸದರು ಮಸೂದೆಯ ಪರವಾಗಿ ತಮ್ಮ ಮತ ಚಲಾಯಿಸಿದರು.
ಇದನ್ನೂ ಓದಿ: ಲೋಕಸಭೆಯಲ್ಲಿ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ.. 454 ಮತಗಳು ಪರ, 2 ಮತ ವಿರುದ್ಧ ಚಲಾವಣೆ
ಮತದಾನದ ನಂತರ ಸಭಾಪತಿ ಜಗದೀಪ್ ಧನಕರ್ ಅವರು ಮಸೂದೆ ಪರವಾಗಿ 'ಹೌದು' ಎನ್ನುವವರ ಸಂಖ್ಯೆ 215 ಹಾಗೂ 'ಇಲ್ಲ' ಎನ್ನುವವರ ಸಂಖ್ಯೆ ಶೂನ್ಯವಾಗಿದ್ದು, ನಿರ್ಣಯ ಅಂಗೀಕರಿಸಲಾಗಿದೆ. ಇದು ಐತಿಹಾಸಿಕ ಸಾಧನೆ.. ಅಭಿನಂದನೆಗಳು ಎಂದು ಪ್ರಕಟಿಸಿದರು. ಲೋಕಸಭೆಯಲ್ಲೂ ಬುಧವಾರ ಬಹುಮತದೊಂದಿಗೆ ಮಸೂದೆಯನ್ನು ಅಂಗೀಕರಿಸಲಾಗಿತ್ತು. 454 ಸಂಸದರು ಮಸೂದೆ ಪರವಾಗಿ ಮತ ಚಲಾವಣೆ ಮಾಡಿದ್ದು, ಕೇವಲ ಇಬ್ಬರು ಸದಸ್ಯರು ಮಸೂದೆ ವಿರುದ್ಧ ತಮ್ಮ ಮತ ಹಾಕಿದ್ದರು.
-
#WATCH | Women's Reservation Bill | Prime Minister Narendra Modi says, "This bill will lead to a new confidence in the people of the country. All members and political parties have played a significant role in empowering women and enhancing 'Nari Shakti'. Let us give the country… pic.twitter.com/PtvHsOCRPk
— ANI (@ANI) September 21, 2023 " class="align-text-top noRightClick twitterSection" data="
">#WATCH | Women's Reservation Bill | Prime Minister Narendra Modi says, "This bill will lead to a new confidence in the people of the country. All members and political parties have played a significant role in empowering women and enhancing 'Nari Shakti'. Let us give the country… pic.twitter.com/PtvHsOCRPk
— ANI (@ANI) September 21, 2023#WATCH | Women's Reservation Bill | Prime Minister Narendra Modi says, "This bill will lead to a new confidence in the people of the country. All members and political parties have played a significant role in empowering women and enhancing 'Nari Shakti'. Let us give the country… pic.twitter.com/PtvHsOCRPk
— ANI (@ANI) September 21, 2023
ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದ್ದಕ್ಕಾಗಿ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಅರ್ಪಿಸಿದರು. ಈ ಮಸೂದೆಯು ದೇಶದ ಜನರಲ್ಲಿ ಹೊಸ ವಿಶ್ವಾಸಕ್ಕೆ ಕಾರಣವಾಗಲಿದೆ. ಜೊತೆಗೆ ಇದು ಮಹಿಳಾ ಸಬಲೀಕರಣಕ್ಕೆ ಹೊಸ ಶಕ್ತಿ ನೀಡುವ ಎಲ್ಲ ರಾಜಕೀಯ ಪಕ್ಷಗಳ ಸಕಾರಾತ್ಮಕ ಚಿಂತನೆಯನ್ನು ತೋರಿಸುತ್ತದೆ ಎಂದು ಪ್ರಧಾನಿ ಹೇಳಿದರು.
ಇದನ್ನೂ ಓದಿ: ಮಹಿಳಾ ಮೀಸಲು ಮಸೂದೆ ವಿರೋಧಿಸಿದ ಇಬ್ಬರು ಸಂಸದರು ಯಾರು ಗೊತ್ತೇ?: ಕಾರಣ ಹೀಗಿದೆ..
ಸೆಪ್ಟೆಂಬರ್ 18ರಂದು ಹಳೆ ಸಂಸತ್ತು ಭವನದಲ್ಲಿ ವಿಶೇಷ ಅಧಿವೇಶನ ಆರಂಭವಾಗಿದೆ. 2ನೇ ದಿನವಾದ ಮಂಗಳವಾರ ಹೊಸ ಸಂಸತ್ ಭವನಕ್ಕೆ ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪಗಳ ಸ್ಥಳಾಂತರಗೊಂಡಿವೆ. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮಸೂದೆಯನ್ನು ಮಂಡಿಸಿದ್ದರು. ನೂತನ ಸಂಸತ್ ಭವನದಲ್ಲಿ ಎರಡು ಕಲಾಪಗಳ ಮಂಡನೆ ಹಾಗೂ ಅಂಗೀಕಾರ ಮೊದಲ ಮಸೂದೆ ಇದಾಗಿದೆ.
-
#WATCH | On Women's Reservation Bill, Rajya Sabha LoP Mallikarjun Kharge says, "This govt must also give a definite date for implementation. Their members have said that they do not lack commitment. 'Aagar commitment hain toh aap bataiye kab implement hoga, nahi toh yeh sirf… pic.twitter.com/wgFljOZtPZ
— ANI (@ANI) September 21, 2023 " class="align-text-top noRightClick twitterSection" data="
">#WATCH | On Women's Reservation Bill, Rajya Sabha LoP Mallikarjun Kharge says, "This govt must also give a definite date for implementation. Their members have said that they do not lack commitment. 'Aagar commitment hain toh aap bataiye kab implement hoga, nahi toh yeh sirf… pic.twitter.com/wgFljOZtPZ
— ANI (@ANI) September 21, 2023#WATCH | On Women's Reservation Bill, Rajya Sabha LoP Mallikarjun Kharge says, "This govt must also give a definite date for implementation. Their members have said that they do not lack commitment. 'Aagar commitment hain toh aap bataiye kab implement hoga, nahi toh yeh sirf… pic.twitter.com/wgFljOZtPZ
— ANI (@ANI) September 21, 2023
ಆದರೆ, ಮಸೂದೆಯು ಕಾನೂನಾಗಿ 2029ರಲ್ಲಿ ಜಾರಿಗೆ ಬರುವ ಸಾಧ್ಯತೆ. ಜನಗಣತಿ ಪ್ರಕ್ರಿಯೆ ಹಾಗೂ ಕ್ಷೇತ್ರಗಳ ಪುನರ್ ವಿಂಗಡಣೆ ಕಾರ್ಯ ನಡೆಯಬೇಕಿದೆ. ಇದರ ಬಳಿಕ ಮಹಿಳಾ ಮೀಸಲಾತಿ ಅನುಷ್ಠಾನವಾಗಲಿದೆ ಎಂದು ಸರ್ಕಾರ ಹೇಳಿದೆ. ಮಸೂದೆಯನ್ನು ಬೆಂಬಲಿಸಿರುವ ರಾಜ್ಯಸಭೆಯ ಪ್ರತಿಪಕ್ಷ ನಾಯಕ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಸೂದೆ ಅನುಷ್ಠಾನಕ್ಕೆ ಖಚಿತ ಸರ್ಕಾರ ದಿನಾಂಕ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: 2024ರ ಲೋಕಸಭೆ ಚುನಾವಣೆ ಮುಗಿದ ತಕ್ಷಣವೇ ಜನಗಣತಿ, ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ: ಅಮಿತ್ ಶಾ