ETV Bharat / bharat

ಧಾರಾವಾಹಿ ಹಾಸ್ಯನಟ ಖಯಾಲಿ ಸಹರಾನ್ ವಿರುದ್ಧ ಅತ್ಯಾಚಾರ ಆರೋಪ..! - Manasarovar Police

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ಖ್ಯಾತ ಟಿವಿ ಹಾಸ್ಯನಟ ಖಯಾಲಿ ಸಹರಾನ್ ಮೇಲೆ ಅತ್ಯಾಚಾರದ ಆರೋಪ - ಖಯಾಲಿ ಸಹರಾನ್ ವಿರುದ್ಧ ಜೈಪುರದ ಮಾನಸ ಸರೋವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು.

comedian Khayali Saharan
ಖಯಾಲಿ ಸಹರಾನ್
author img

By

Published : Mar 16, 2023, 10:05 PM IST

ಜೈಪುರ (ರಾಜಸ್ಥಾನ): ರಾಜಸ್ಥಾನದ ಹನುಮಾನ್‌ಗಢ ಪ್ರದೇಶದ ಖ್ಯಾತ ಟಿವಿ ಹಾಸ್ಯನಟ ಖಯಾಲಿ ಸಹರಾನ್ ಅವರು ಅತ್ಯಾಚಾರದ ಆರೋಪ ಎದುರಿಸುತ್ತಿದ್ದಾರೆ. ಖಯಾಲಿ ಸಹರಾನ್ ವಿರುದ್ಧ ಜೈಪುರ ನಗರದ ಮಾನಸ ಸರೋವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉದ್ಯೋಗ ಕೊಡಿಸುವ ನೆಪದಲ್ಲಿ ಅತ್ಯಾಚಾರ- ಆರೋಪ: ರಾಜ್ಯದ ಹನುಮಂತನಗರ ಪ್ರದೇಶದ ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ''ಆರೋಪಿ ತನಗೆ ಚಿತ್ರರಂಗದಲ್ಲಿ ಉದ್ಯೋಗ ನೀಡುವ ಕುರಿತು ಮಾತುಕತೆ ನಡೆಸಲು ಹೋಟೆಲ್​ಯೊಂದರ ಕೊಠಡಿಗೆ ಬರುವಂತೆ ಹೇಳಿದ್ದರು. ನಾನು ಗೊತ್ತುಪಡಿಸಿದ ಸ್ಥಳಕ್ಕೆ ಹೋದಾಗ, ಆರೋಪಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ" ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಆರೋಪಿಯು ಪರಾರಿ- ಸಂತ್ರಸ್ತೆ ಆರೋಪ: "ಘಟನೆಯ ವಿರುದ್ಧ ಪ್ರತಿಭಟಿಸಿದಾಗ, ನೀನು ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ'' ಎಂದು ಬೆದರಿಕೆ ಹಾಕಲಾಗಿದೆ. ನಾನು ಆಕ್ರೋಶ ವ್ಯಕ್ತಪಡಿಸಿದ ನಂತರ, ಆರೋಪಿಯು ಪರಾರಿಯಾಗಿದ್ದಾನೆ'' ಎಂದು ಸಂತ್ರಸ್ತೆ ತಿಳಿಸಿದರು.

ಬಳಿಕ ರಾಜ್ಯದ ಹನುಮಾನ್‌ಗಢ ಜಿಲ್ಲೆಯ ಮಹಿಳೆಯೊಬ್ಬರು ಖ್ಯಾತ ಟಿವಿ ಧಾರಾವಾಹಿ ನಟ, ಹಾಸ್ಯನಟ ಮತ್ತು ನಿರ್ದೇಶಕ ಎಂದು ಹೇಳಲಾಗುವ ಖಯಾಲಿ ಸಹರಾನ್ ವಿರುದ್ಧ ಪೊಲೀಸರು ಪ್ರಕರಣದ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದ ಕುರಿತು ತನಿಖೆ ಪ್ರಾರಂಭವಾಗಿದೆ.

ಟಿವಿ ನಟ ಖಯಾಲಿ ಕೆಲವು ದಿನಗಳ ಹಿಂದೆ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆರೋಪಿಯು ತನಗೆ ಕಿರುಕುಳ ನೀಡಿದ್ದಾರೆ ಎಂದು ಮಹಿಳಾ ದೂರುದಾರರು ಗಂಭೀರ ಆರೋಪ ಮಾಡಿದ್ದಾರೆ. ಚಿತ್ರರಂಗದಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ಅವರು ದೂರಿದರು.

ಸಕ್ಕರೆ ಕಾರ್ಖಾನೆಯಲ್ಲಿ ರಾತ್ರಿ ಕಾವಲುಗಾರನಾಗಿದ್ದ ನಟ: ಖಯಾಲಿ ರಾಜಸ್ಥಾನದ ಹನುಮಾನ್‌ಗಢ್ ಜಿಲ್ಲೆಯ ಹಳ್ಳಿಯೊಂದರ ನಿವಾಸಿ. ಈ ಹಿಂದೆ ಖಯಾಲಿ ಸಕ್ಕರೆ ಕಾರ್ಖಾನೆಯಲ್ಲಿ ರಾತ್ರಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ. ಅವರ ಹೋರಾಟದ ದಿನಗಳಲ್ಲಿ, ಸಾಮಾನ್ಯ ಜನರರೊಂದಿಗೆ ಕಾಲ ಕಳೆಯುತ್ತಿದ್ದರು. ಆದರೆ, ಲಾಫ್ಟರ್ ಚಾಂಪಿಯನ್‌ಶಿಪ್ ಗೆದ್ದ ನಂತರ ಅವರ ಭವಿಷ್ಯವೇ ಬದಲಾಯಿತು.

ಬಾಲಕಿಯ ಮೇಲೆ ನಡೆದಿತ್ತು ಸಾಮೂಹಿಕ ಅತ್ಯಾಚಾರ: ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಮಾರ್ಚ್ 11 ರಂದು ಬಾಲಕಿಯ ಮೇಲೆ ಇಬ್ಬರು ಬಾಲಕರು ಸಾಮೂಹಿಕ ಅತ್ಯಾಚಾರ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಪೊಲೀಸ್ ಮೂಲಗಳ ಪ್ರಕಾರ, ಮಾರ್ಚ್ 9 ರಂದು ಜಿಲ್ಲೆಯ ಜುನ್ವಾಯ್ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಘಟನೆಯ ಬಗ್ಗೆ ಪೊಲೀಸರು ಪ್ರಕರಣ ದಾಖಲು ಮಾಡಿದ್ದರು.

''ಮಾರ್ಚ್ 9 ರಂದು 6 ನೇ ತರಗತಿ ಓದುತ್ತಿದ್ದ ಎಂಟು ವರ್ಷದ ಬಾಲಕಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಳು. ಈ ಸಮಯದಲ್ಲಿ ಸುಮಾರು 12 ವರ್ಷ ವಯಸ್ಸಿನ ಇಬ್ಬರು ಹದಿಹರೆಯದವರು ಅವಳ ಬಳಿಗೆ ಬಂದು ಆಟವಾಡುವ ನೆಪದಲ್ಲಿ ಮಾತನಾಡಲು ಪ್ರಾರಂಭಿಸಿದ್ದಾರೆ. ನಂತರ ಇಬ್ಬರು ಆರೋಪಿಗಳು ಹುಡುಗಿಯನ್ನು ತಮ್ಮೊಂದಿಗೆ ಬರುವಂತೆ ಮನವೊಲಿಸಿದ್ದಾರೆ. ಅನಂತರ ಅವಳನ್ನು ಕೃಷಿ ಭೂಮಿಗೆ ಕರೆದೊಯ್ದಿದ್ದಾರೆ. ಅಲ್ಲಿಗೆ ತಲುಪಿದ ನಂತರ ಇಬ್ಬರು ಆರೋಪಿಗಳು ಅವಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಜುನ್ವಾಯಿ ಪೊಲೀಸ್ ಠಾಣೆಯ ಉಸ್ತುವಾರಿ ಪುಷ್ಕರ್ ಸಿಂಗ್ ಮೆಹ್ರಾ ತಿಳಿಸಿದ್ದರು.

ಇದನ್ನೂ ಓದಿ: ಸ್ನೂಪಿಂಗ್ ಕೇಸ್: ಮನೀಶ್ ಸಿಸೋಡಿಯಾಗೆ ಮತ್ತೊಂದು ಸಂಕಷ್ಟ, ಎಫ್‌ಐಆರ್ ದಾಖಲಿಸಿದ ಸಿಬಿಐ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.