ರಾಜಸಮಂದ್(ರಾಜಸ್ತಾನ): ಸಂಪ್ರದಾಯವನ್ನು ಬದಿಗಿರಿಸಿ, ತಾಯಿಯ ಮೃತದೇಹದ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ಹೆಣ್ಣುಮಕ್ಕಳೇ ನೆರವೇರಿಸಿರುವ ಘಟನೆ ರಾಜಸಮಂದ್ ಜಿಲ್ಲೆಯ ಶಂಕರಪುರ ಎಂಬಲ್ಲಿ ನಡೆದಿದೆ.
![Rajasthan: Daughters perform final rites of their mother](https://etvbharatimages.akamaized.net/etvbharat/prod-images/r-rj-0104-rsmd-05-beti-mukhagni-av-rj10042_01042021231559_0104f_1617299159_920.jpg)
ಹಿಂದೂ ಸಂಪ್ರದಾಯದಂತೆ ಗಂಡುಮಕ್ಕಳು ಅಂತಿಮ ವಿಧಿವಿಧಾನ ನೆರವೇರಿಸೋದು ಸಾಮಾನ್ಯ. ಈ ಸಂಪ್ರದಾಯಕ್ಕೆ ಮೂವರು ಹೆಣ್ಣುಮಕ್ಕಳು ಸೆಡ್ಡು ಹೊಡೆದಿದ್ದು ಹೆತ್ತವ್ವನ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಮನೀಷಾ, ಕೃಷ್ಣಾ, ಸೆಜಾಲ್ ದಿಟ್ಟ ನಿರ್ಧಾರ ಕೈಗೊಂಡ ಹೆಣ್ಣುಮಕ್ಕಳು. ಸಮಾಜದಲ್ಲಿ ಪರಂಪರಾನುಗತವಾಗಿ ಬಂದ ಲಿಂಗತಾರತಮ್ಯದ ವಿರುದ್ಧ ಸವಾಲೆಸೆಯಲು ಈ ಜವಾಬ್ದಾರಿ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.
![Rajasthan: Daughters perform final rites of their mother](https://etvbharatimages.akamaized.net/etvbharat/prod-images/r-rj-0104-rsmd-05-beti-mukhagni-av-rj10042_01042021231559_0104f_1617299159_646.jpg)
ಕೆಲವೆಡೆ ಇಂಥ ಘಟನೆಗಳು ನಡೆದರೂ, ಸಮಾಜ ಈವರೆಗೂ ಹೆಣ್ಣುಮಕ್ಕಳಿಗೆ ಅಂತಿಮ ವಿಧಿವಿಧಾನ ನೆರವೇರಿಸುವ ಹಕ್ಕು ನೀಡಿಲ್ಲ. ಈ ಹೆಣ್ಣುಮಕ್ಕಳು ದಿಟ್ಟ ನಡೆಗೆ ಹಲವು ಪ್ರಗತಿಪರದಿಂದ ಮೆಚ್ಚುಗೆ ವ್ಯಕ್ತವಾಗಿದೆ.