ETV Bharat / bharat

ಸಚಿನ್​ ಪೈಲಟ್ ವಿರುದ್ಧದ ಎಸ್​ಎಲ್​ಪಿ ಹಿಂಪಡೆಯಲು ಮುಂದಾದ ಕಾಂಗ್ರೆಸ್​ ಚೀಫ್​​ ವಿಪ್

ಸಚಿನ್​ ಪೈಲಟ್​ ಹಾಗೂ ಅವರ 18 ಕಾಂಗ್ರೆಸ್​ ಶಾಸಕರ ವಿರುದ್ಧ ಹಾಕಿದ್ದ ವಿಶೇಷ ಅರ್ಜಿ ಹಿಂಪಡೆಯಲು ಕಾಂಗ್ರೆಸ್ ಪಕ್ಷದ ಮುಖ್ಯ ವಿಪ್​ ಮುಂದಾಗಿದ್ದಾರೆ.

author img

By

Published : Feb 23, 2021, 12:29 PM IST

Congress chief whip to withdraw SLP against rebels
ಸಚಿನ್​ ಪೈಲಟ್ ವಿರುದ್ಧದ ಎಸ್​ಎಲ್​ಪಿ ಹಿಂಪಡೆಯಲು ಮುಂದಾದ ಕಾಂಗ್ರೆಸ್​ ಚೀಫ್​​ ವಿಪ್

​​​ಜೈಪುರ: ಕಳೆದ ವರ್ಷ ರಾಜಸ್ಥಾನ ಕಾಂಗ್ರೆಸ್​ ಸರ್ಕಾರದ ವಿರುದ್ಧ ದಂಗೆ ಎದ್ದಿದ್ದ ಸಚಿನ್​ ಪೈಲಟ್​ ಹಾಗೂ ಅವರ 18 ಕಾಂಗ್ರೆಸ್​ ಶಾಸಕರ ವಿರುದ್ಧ ಹಾಕಿದ್ದ ಕೇಸ್​ ವಾಪಸ್​ ಪಡೆಯಲು ಪಕ್ಷದ ಮುಖ್ಯ ವಿಪ್​ ಮುಂದಾಗಿದ್ದಾರೆ.

ಕಳೆದ ವರ್ಷ ಮಹೇಶ್ ಜೋಶಿ ಅವರು ಸುಪ್ರೀಂಕೋರ್ಟ್‌ನಲ್ಲಿ ಎಸ್‌ಎಲ್‌ಪಿ (ವಿಶೇಷ ರಜೆ ಅರ್ಜಿಗಳು) ಸಲ್ಲಿಸಿದ್ದರು. ಮೂಲಗಳ ಪ್ರಕಾರ, ಎಸ್‌ಎಲ್‌ಪಿ ಹಿಂಪಡೆಯುವ ಅರ್ಜಿಯನ್ನು ಇಂದು ಸುಪ್ರೀಂಕೋರ್ಟ್​ಗೆ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.

ಕೆಲವು ದಿನಗಳ ಹಿಂದೆ ಮುಖ್ಯ ವಿಪ್‌ನ ಎಸ್‌ಎಲ್‌ಪಿ ವಿಚಾರಣೆ ನಡೆಸುತ್ತಿದ್ದಾಗ, ಸುಪ್ರೀಂಕೋರ್ಟ್ ಮಾಜಿ ಡಿಸಿಎಂ ಸಚಿನ್ ಪೈಲಟ್, ಇತರ ಶಾಸಕರು ಮತ್ತು ಕೇಂದ್ರ ಸರ್ಕಾರಕ್ಕೆ ಈ ಕುರಿತು ಉತ್ತರಿಸುವಂತೆ ನೋಟಿಸ್​ ಜಾರಿಗೊಳಿಸಿತ್ತು.

ಇದನ್ನೂ ಓದಿ: ಕೆಂಪು ಕೋಟೆ ಹಿಂಸಾಚಾರ: ರೈತ ಮುಖಂಡ ಸೇರಿ ಇಬ್ಬರು 'ಸಂಚುಕೋರರು' ಅರೆಸ್ಟ್​

ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಬಣ ಹಾಗೂ ಸಚಿನ್​ ಪೈಲಟ್ ಬಣದ ನಡುವೆ ತೀವ್ರ ಸಂಘರ್ಷ ನಡೆದಿತ್ತು. ಈ ಹಿನ್ನೆಲೆಯಲ್ಲಿ ಬಂಡಾಯ ಎದ್ದಿದ್ದ ಶಾಸಕರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್​ ವಿಪ್​ ಮಹೇಶ್​ ಜೋಶಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು.

ಆ ಬಳಿಕ ಎರಡೂ ಬಣಗಳ ನಡುವೆ ರಾಹುಲ್​ ಹಾಗೂ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಸಂಧಾನ ನಡೆದಿತ್ತು. ಹೀಗಾಗಿ ಈ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನ ಅಲ್ಲಿನ ಸರ್ಕಾರ ಹಿಂಪಡೆಯಲು ನಿರ್ಧರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.