ETV Bharat / bharat

ಒಡಿಶಾದಲ್ಲಿ'ರಾಜಾ' ಹಬ್ಬದ ಸಂಭ್ರಮ.. ಏನಿದರ ವಿಶೇಷತೆ!?

ಇಂದು ಒಡಿಶಾ ಜನರಿಗೆ 'ರಾಜಾ' ಹಬ್ಬದ ಸಂಭ್ರಮ. ಹೆಣ್ತನವನ್ನು ಆಚರಿಸಲು, ಸಂಭ್ರಮಿಸಲು ಈ ಹಬ್ಬವನ್ನು ಆಚರಿಸಲಾಗುತ್ತದೆ..

Raja Festival in  odisha
ಒಡಿಶಾದಲ್ಲಿಂದು ' ರಾಜಾ' ಹಬ್ಬದ ಸಂಭ್ರಮ
author img

By

Published : Jun 15, 2022, 2:22 PM IST

Updated : Jun 15, 2022, 2:39 PM IST

ಭುವನೇಶ್ವರ್(ಒಡಿಶಾ) : ಒಡಿಶಾದಲ್ಲಿ'ರಾಜಾ' ಹಬ್ಬದ ಸಂಭ್ರಮ ಕಳೆಕಟ್ಟಿದೆ. ಒಡಿಶಾದಲ್ಲಿ ಮಾನ್ಸೂನ್ ಆರಂಭದಲ್ಲಿ ಆಚರಿಸಲಾಗುವ ಮೂರು ದಿನಗಳ ರಾಜಾ ಹಬ್ಬವು ಅತ್ಯಂತ ಜನಪ್ರಿಯ ಆಚರಣೆಯಾಗಿದೆ. ಹೆಣ್ತನವನ್ನು ಆಚರಿಸಲು, ಸಂಭ್ರಮಿಸಲು ಈ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ರಾಜಾ ಎಂಬುದು ರಜಾಸ್ವಾಲಾ (ಮುಟ್ಟಿನ ಮಹಿಳೆ ಎಂದರ್ಥ) ಪದದ ಸಂಕ್ಷಿಪ್ತ ಪದವಾಗಿದೆ. ಒಡಿಶಾ ಮತ್ತು ಸುತ್ತಮುತ್ತಲಿನ ಜನರು ಈ ಹಬ್ಬವನ್ನು ಆಚರಿಸುತ್ತಾರೆ. ಋತುಚಕ್ರ ಎಂಬುದು ನೈಸರ್ಗಿಕ ಪ್ರಕ್ರಿಯೆ. ಈ ಹಬ್ಬವು ಮಹಿಳೆಯಂತೆಯೇ ಭೂಮಿಯ ಋತುಚಕ್ರವನ್ನು ಸೂಚಿಸುತ್ತದೆ.

ಮಹಿಳೆಯರಂತೆಯೇ ಈ ದಿನಗಳಲ್ಲಿ ಭೂಮಿಯು ಸಹ ಸುಪ್ತ ಹಂತದಲ್ಲಿದೆ ಎಂದು ಪರಿಗಣಿಸಲಾಗುತ್ತದೆ. ಭೂತಾಯಿಗಿದು ವಿಶ್ರಾಂತಿಯ ಅವಧಿ. ಈ ದಿನಗಳಲ್ಲಿ ಎಲ್ಲ ಕೃಷಿ ಚಟುವಟಿಕೆಗಳನ್ನು ನಿಷೇಧಿಸಲಾಗುತ್ತದೆ.

ಒಡಿಶಾದಲ್ಲಿಂದು 'ರಾಜಾ' ಹಬ್ಬದ ಸಂಭ್ರಮ..

ಪಹಿಲಿ ರಾಜ ಎಂದು ಕರೆಯಲ್ಪಡುವ ಮೊದಲ ದಿನವನ್ನು ಜ್ಯೇಷ್ಠ ಮಾಸದ ಕೊನೆಯ ದಿನದಂದು ಆಚರಿಸಲಾಗುತ್ತದೆ. ಮತ್ತು ಎರಡನೇ ದಿನವು ಮಿಥುನ ಮಾಸದ ಮೊದಲ ದಿನವಾಗಿದೆ. ಇದು ಮಳೆಯ ಆಗಮನವನ್ನು ಸೂಚಿಸುತ್ತದೆ. ಮುಕ್ತಾಯದ ದಿನವನ್ನು ಸ್ಥಳೀಯ ಭಾಷೆಯಲ್ಲಿ ಭೂಯಿನ್ ದಹನ ಎಂದು ಹೆಸರಿಸಲಾಗಿದೆ. ಇದನ್ನು ಸೇಸ ರಾಜ (ಕೊನೆಯ ದಿನ) ಎಂದು ಕರೆಯಲಾಗುತ್ತದೆ.

ಈ ಹಬ್ಬದಲ್ಲಿ ಎಲ್ಲರೂ ಜೊತೆಗೂಡಿ ಸಮಭ್ರಮಿಸುತ್ತಾರೆ. ವಿಶೇಷವಾಗಿ, ಹೆಣ್ಣು ಮಕ್ಕಳು, ಮಹಿಳೆಯರು ಈ ಹಬ್ಬದ ಮೆರುಗು ಹೆಚ್ಚಿಸುತ್ತಾರೆ. ಮನೆಯನ್ನು ರಂಗೋಲಿ, ಹೂಗಳಿಂದ ಶೃಂಗರಿಸುತ್ತಾರೆ ಜೊತೆಗೆ ತಾವೂ ಶೃಂಗಾರಗೊಳ್ಳುತ್ತಾರೆ. ಹೆಣ್ತನದ, ಭೂತಾಯಿಯ ಮಹತ್ವ ಆಚರಿಸಲೆಂದೇ ಈ ಹಬ್ಬ ಮೀಸಲಾಗಿದೆ. ಮನೆ, ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ವಿಶೇಷ ತಿನಿಸನ್ನು ಸವಿಯುತ್ತಾರೆ.

ಇದನ್ನೂ ಓದಿ: ಸಿಎಂ ಎದುರೇ ಧೈರ್ಯವಾಗಿ ಉನ್ನತ ಶಿಕ್ಷಣದ ಬಗ್ಗೆ ಮಾತನಾಡಿದ ಬಾಲಕ.. ವ್ಯಾಸಂಗದ ಖರ್ಚೆಲ್ಲ ನನ್ನದೆಂದ ​ ಸಂಸ್ಥೆ!

ಒಟ್ಟಾರೆ ಒಡಿಶಾದ ಪ್ರತಿ ಮನೆಗಳಲ್ಲಿ ಇದು ಅತ್ಯಂತ ಪ್ರೀತಿಯ ಮತ್ತು ವಿಶೇಷ ಹಬ್ಬಗಳಲ್ಲಿ ಒಂದಾಗಿದೆ. ಪ್ರಕೃತಿ ಮಾತೆಯ ಕೊಡುಗೆಗಾಗಿ ಕೃತಜ್ಞತೆ ಸಲ್ಲಿಸುವುದೇ ಈ ಹಬ್ಬದ ಉದ್ದೇಶ.

Last Updated : Jun 15, 2022, 2:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.