ರಾಯಪೂರ( ಛತ್ತೀಸ್‌ಗಢ): ಅಮರ್ ಜವಾನ್ ಜ್ಯೋತಿ' ಶಂಕುಸ್ಥಾಪನೆಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಛತ್ತೀಸ್‌ಗಢದ ರಾಯ್‌ಪುರಕ್ಕೆ ಭೇಟಿ ನೀಡಲಿದ್ದಾರೆ. ಇದಲ್ಲದೇ, ರಾಜೀವ್ ಗಾಂಧಿ ಗ್ರಾಮೀಣ ಭೂಮಿಹೀನ್ ಕೃಷಿ ಮಜ್ದೂರ್ ಯೋಜನೆಗೂ ಅವರು ಚಾಲನೆ ನೀಡಲಿದ್ದಾರೆ.
ಅಮರ್ ಜವಾನ್ ಜ್ಯೋತಿಯನ್ನು 4 ನೇ ಬೆಟಾಲಿಯನ್ ಆವರಣದಲ್ಲಿ ನಿರ್ಮಾಣ ಮಾಡಲು ನಿರ್ಧರಿಸಲಾಗಿದ್ದು, ಹುತಾತ್ಮರ ಗೌರವಾರ್ಥವಾಗಿ ಅಮರ್ ಜವಾನ್ ಜ್ಯೋತಿ ಬೆಳಗಿಸಲಾಗುವುದು ಎಂದು ಅಧಿಕೃತ ಮಾಹಿತಿಗಳಿಂದ ಗೊತ್ತಾಗಿದೆ.
ಈ ನಡುವೆ, ಕಾಂಗ್ರೆಸ್ ಪಕ್ಷವು ತ್ಯಾಗದ ಇತಿಹಾಸವನ್ನು ಹೊಂದಿದೆ ಮತ್ತು ದೇಶ ಸೇವೆಗಾಗಿ ಸರ್ವಸ್ವವನ್ನು ಅರ್ಪಿಸಿರುವ ಅನೇಕ ಮಹಾನ್ ನಾಯಕರನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಪಕ್ಷಕ್ಕೆ ತ್ಯಾಗವನ್ನು ಹೇಗೆ ಗೌರವಿಸಬೇಕು ಎಂದು ತಿಳಿದಿದೆ. ಹುತಾತ್ಮರನ್ನು ಗೌರವಿಸದ ಯಾವುದೇ ಸಮಾಜಕ್ಕೂ ಬೆಲೆ ಇರುವುದಿಲ್ಲ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೇಳಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಅಮರ ಜವಾನ್ ಸ್ಮಾರಕವು, ಸ್ಮಾರಕ ಗೋಪುರ, ಹುತಾತ್ಮರ ಹೆಸರಿನ ಗೋಡೆ, ವಿವಿಐಪಿ ವೇದಿಕೆಯನ್ನು ಹೊಂದಿರಲಿದೆ. ಎಲ್ಲ ಹುತಾತ್ಮರ ಸ್ಮರಣೆಗಾಗಿ ಕಂದು ಬಣ್ಣದ ಗೋಡೆ ನಿರ್ಮಾಣ ಮಾಡಿ ಮಾರ್ಬಲ್ನಲ್ಲಿ ಅವರ ಹೆಸರುಗಳನ್ನ ಕೆತ್ತಲಾಗುವುದು ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಇನ್ನು ಛತ್ತೀಸ್ಗಢಕ್ಕೆ ಭೇಟಿ ನೀಡುವ ರಾಹುಲ್ ಗಾಂಧಿ, ಛತ್ತೀಸ್‌ಗಢ ಸರ್ಕಾರದ ರಾಜೀವ್ ಗಾಂಧಿ ಗ್ರಾಮೀಣ ಭೂಮಿಹೀನ್ ಕೃಷಿ ಮಜ್ದೂರ್ ಯೋಜನೆಯನ್ನೂ ಉದ್ಘಾಟಿಸಲಿದ್ದಾರೆ. ಈ ಯೋಜನೆಯಡಿ ಛತ್ತೀಸ್‌ಗಢ ಸರ್ಕಾರವು ಗ್ರಾಮೀಣ ಭೂರಹಿತ ಕುಟುಂಬಗಳಿಗೆ ವಾರ್ಷಿಕ 6000 ರೂಪಾಯಿಗಳ ಆರ್ಥಿಕ ಸಹಾಯ ನೀಡುತ್ತದೆ. ಯೋಜನೆಯ ನೋಂದಣಿಯನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪ್ರಾರಂಭಿಸಲಾಗಿತ್ತು.
ಇದನ್ನೂ ಓದಿ:U19 World cup: ಆಸ್ಟ್ರೇಲಿಯಾ ಬಗ್ಗುಬಡಿದ ಟೀಂ ಇಂಡಿಯಾ ಫೈನಲ್ಗೆ ಎಂಟ್ರಿ