ನವದೆಹಲಿ : ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸಿದ ಪ್ರತಿಭಟನೆಯಲ್ಲಿ ಸುಮಾರು 700 ರೈತರು ಸಾವನ್ನಪ್ಪಿದ್ದಾರೆ. ಪ್ರಧಾನಿಯವರು ದೇಶದ ರೈತರಲ್ಲಿ ಕ್ಷಮೆಯಾಚಿಸಿದ್ದಾರೆ. ತಾನು ತಪ್ಪು ಮಾಡಿದೆ ಎಂದು ಒಪ್ಪಿಕೊಂಡಿದ್ದಾರೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಮೃತ ರೈತರಿಗೆ ಪರಿಹಾರ ನೀಡಲ್ಲ ಎಂಬ ಸರ್ಕಾರದ ಹೇಳಿಕೆಯನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ನವೆಂಬರ್ 30ರಂದು ಕೃಷಿ ಸಚಿವರು ಮಾತನಾಡಿ ಪ್ರತಿಭಟನೆಯಲ್ಲಿ ಎಷ್ಟು ರೈತರು ಸತ್ತರು? ನಮ್ಮ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಪಂಜಾಬ್ ಸರ್ಕಾರವು ಸುಮಾರು 400 ರೈತರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಿರುವುದನ್ನು ನೋಡಿದ್ದೇವೆ. ಇದರಲ್ಲಿ 152 ಮಂದಿಯ ಕುಟುಂಬಗಳಿಗೆ ಉದ್ಯೋಗ ನೀಡಿದೆ. ನನ್ನ ಬಳಿ ಪಟ್ಟಿ ಇದೆ ಎಂದಿದ್ದಾರೆ.
ನಾವು ಹರಿಯಾಣದ 70 ರೈತರ ಮತ್ತೊಂದು ಪಟ್ಟಿಯನ್ನು ಮಾಡಿದ್ದೇವೆ. ಆದರೆ, ನೀವು ಮೃತ ರೈತರ ಮಾಹಿತಿ ಇಲ್ಲ ಎನ್ನುತ್ತಿದ್ದೀರಿ. ರೈತರಿಗೆ ಅವರ ಹಕ್ಕುಗಳನ್ನು ನೀಡಬೇಕು. ಅವರಿಗೆ ಪರಿಹಾರದ ಜೊತೆಗೆ ಅವರ ಕುಟುಂಬಗಳಿಗೆ ಉದ್ಯೋಗ ನೀಡಬೇಕು ಎಂದು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ನೀವೇ ಬದಲಾಗಿ, ಇಲ್ಲವೇ ಬದಲಾವಣೆಗೆ ಸಿದ್ಧರಾಗಿ: ಅಧಿವೇಶನಕ್ಕೆ ಗೈರಾಗುವ ಸಂಸದರಿಗೆ ಮೋದಿ ಎಚ್ಚರಿಕೆ