ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಡಿಸೆಂಬರ್ 18 ರಂದು ಅಮೇಥಿಯಿಂದ ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದು, ಪಕ್ಷದ ರಾಷ್ಟ್ರವ್ಯಾಪಿ ಕಾರ್ಯಕ್ರಮ ‘ಜನ್ ಜಾಗರಣ ಅಭಿಯಾನ’ದ ಭಾಗವಾಗಿ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
ಈ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಭಾಗಿಯಾಗಲಿದ್ದಾರೆ. ಕೇಂದ್ರದ ಆರ್ಥಿಕತೆಯ ದುರಾಡಳಿತವನ್ನು ಬಹಿರಂಗಪಡಿಸಲು ಕಾಂಗ್ರೆಸ್ ಪಕ್ಷವು ನವೆಂಬರ್ 14 ರಂದು ದೇಶಾದ್ಯಂತ ಆಂದೋಲನ ಕಾರ್ಯಕ್ರಮವಾದ 'ಜನ್ ಜಾಗರಣ ಅಭಿಯಾನ'ವನ್ನು ಪ್ರಾರಂಭಿಸಿತ್ತು.
ಇದನ್ನೂ ಓದಿ: ಸೂಪರ್‌ಸಾನಿಕ್ ಕ್ಷಿಪಣಿ ನೆರವಿನ ಟಾರ್ಪಿಡೊ ಸಿಸ್ಟಂ ಯಶಸ್ವಿ ಉಡ್ಡಯನ!
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾತನಾಡಿ, ಮೋದಿ ಸರ್ಕಾರದ ಆರ್ಥಿಕ ದುರುಪಯೋಗವನ್ನು ಬಯಲಿಗೆಳೆಯಲು ಮತ್ತು ಸರ್ಕಾರದ ಅಸೂಕ್ಷ್ಮತೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಪಕ್ಷವು ನವೆಂಬರ್ 14 ರಿಂದ ದೇಶಾದ್ಯಂತ 'ಜನ ಜಾಗರಣ ಅಭಿಯಾನ' ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಮಾಹಿತಿ ನೀಡಿದರು.