ನವದೆಹಲಿ: ದೇಶದ ಪ್ರಮುಖ ನಗರಗಳ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿ ಅನೇಕ ರೋಗಿಗಳು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಆಕ್ಸಿಜನ್ ಪೂರೈಕೆ ಮಾಡಲು ಅನೇಕರು ತಮ್ಮ ಕೈಲಾದ ಸಹಾಯ ಮಾಡ್ತಿದ್ದು, ಇವರ ಸಾಲಿಗೆ ಇದೀಗ ಉದ್ಯಮಿ ಪ್ಯಾರೆ ಖಾನ್ ಸೇರ್ಪಡೆಯಾಗಿದ್ದಾರೆ.
ಮಹಾರಾಷ್ಟ್ರದ ನಾಗ್ಪುರ ಮೂಲದ ಉದ್ಯಮಿ ಪ್ಯಾರೆ ಖಾನ್ 32 ಟನ್ ಆಮ್ಲಜನಕ ಖರೀದಿ ಮಾಡಿ ಕೋವಿಡ್ ರೋಗಿಗಳಿಗೆ ನೀಡಿದ್ದಾರೆ. ಅದಕ್ಕಾಗಿ 1 ಕೋಟಿ ರೂ. ಖರ್ಚು ಮಾಡಿರುವ ಅವರು, ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೋವಿಡ್ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿರುವ ನಾಗ್ಪುರದ ಸರ್ಕಾರಿ ವೈದ್ಯಕೀಯ ಕಾಲೇಜ್ಗೆ ಈ ಆಕ್ಸಿಜನ್ ಟ್ಯಾಂಕರ್ ಸರಬರಾಜು ಮಾಡಿದ್ದಾರೆ.
ಕಳೆದ ವಾರ ಛತ್ತೀಸ್ಗಢದ ಭಿಲೈಯಿಂದ 16 ಟನ್ ಆಮ್ಲಜನಕ ಹೊತ್ತ ಟ್ಯಾಂಕರ್ವೊಂದನ್ನ ನಾಗ್ಪುರ್ ವೈದ್ಯಕೀಯ ಕಾಲೇಜ್ಗೆ ಕಳುಹಿಸಿದ್ದರು. ಇದೀಗ ಮತ್ತೊಮ್ಮೆ ಆಮ್ಲಜನಕ ಹೊತ್ತ ಮತ್ತೊಂದು ಟ್ಯಾಂಕರ್ನ್ನ ಆಸ್ಪತ್ರೆಗೆ ರವಾನಿಸಿದ್ದಾರೆ. ಇದಕ್ಕಾಗಿ ಅವರು ಬರೋಬ್ಬರಿ 1 ಕೋಟಿ ರೂ. ಖರ್ಚು ಮಾಡಿದ್ದಾರೆ.
ದೇಶದಲ್ಲಿ ಎರಡನೇ ಹಂತದ ಕೋವಿಡ್ ಹಾವಳಿ ಹೆಚ್ಚಾಗಿರುವ ಕಾರಣ ಮಹಾರಾಷ್ಟ್ರ, ದೆಹಲಿ, ಪಂಜಾಬ್, ಹರಿಯಾಣ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಆಮ್ಲಜನಕದ ಕೊರತೆ ಉಂಟಾಗಿದೆ. ಇದೇ ಕಾರಣಕ್ಕಾಗಿ ಅನೇಕ ಕೋವಿಡ್ ರೋಗಿಗಳು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.