ETV Bharat / bharat

12ನೇ ಕ್ಲಾಸ್​ ವಿದ್ಯಾರ್ಥಿಯಿಂದ ಸಿದ್ಧವಾಯ್ತು 'ಮಿನಿ ಟ್ರ್ಯಾಕ್ಟರ್​'; ಖರ್ಚಾಗಿದ್ದು ಕೇವಲ ₹40 ಸಾವಿರ! - 12ನೇ ಕ್ಲಾಸ್​ ವಿದ್ಯಾರ್ಥಿ ಗುರ್ವಿಂದರ್ ಸಿಂಗ್

12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೋರ್ವ ಮಿನಿ ಟ್ರ್ಯಾಕ್ಟರ್ ಸಿದ್ಧಪಡಿಸಿದ್ದು, ಈತನ ಕೆಲಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Class 12 boy creates frugal tractor in Bathinda

author img

By

Published : May 21, 2022, 6:40 PM IST

Updated : May 21, 2022, 7:31 PM IST

ಬಟಿಂಡಾ(ಪಂಜಾಬ್​​​): ಚಿಕ್ಕ ವಯಸ್ಸಿನಲ್ಲೇ ಕಾರು, ಬೈಕ್​​ ಅಷ್ಟೇ ಏಕೆ ಹೆಲಿಕಾಪ್ಟರ್ ಸಹ ಸಿದ್ಧಪಡಿಸಿರುವ ಅನೇಕ ಸ್ಫೂರ್ತಿದಾಯಕ ಸ್ಟೋರಿ ನಮ್ಮ ಮುಂದೆ ನಡೆದಿವೆ. ಇದೀಗ ಆ ಸಾಲಿಗೆ ಮತ್ತೋರ್ವ ವಿದ್ಯಾರ್ಥಿ ಸೇರಿಕೊಂಡಿದ್ದು, ಕೇವಲ 12ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿರುವ ಯುವಕನೋರ್ವ ಮಿನಿ ಟ್ರ್ಯಾಕ್ಟರ್​​ ತಯಾರಿಸಿ ಎಲ್ಲರ ಗಮನ ಸೆಳೆದಿದ್ದಾನೆ.

12ನೇ ಕ್ಲಾಸ್​ ವಿದ್ಯಾರ್ಥಿಯಿಂದ ಸಿದ್ಧವಾಯ್ತು 'ಮಿನಿ ಟ್ರ್ಯಾಕ್ಟರ್​'

ಪಂಜಾಬ್​ನ ಬಟಿಂಡಾದಲ್ಲಿ 12ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಗುರ್ವಿಂದರ್ ಸಿಂಗ್​, ಕೇವಲ 40 ಸಾವಿರ ರೂಪಾಯಿ ವೆಚ್ಚದಲ್ಲಿ ಈ ಟ್ರ್ಯಾಕ್ಟರ್​ ಸಿದ್ಧಪಡಿಸಿದ್ದಾನೆ. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಎಲ್ಲೆಡೆ ಲಾಕ್​ಡೌನ್​ ಹೇರಿಕೆ ಮಾಡಿದ್ದ ಸಂದರ್ಭದಲ್ಲಿ ವಿದ್ಯಾರ್ಥಿ ಈ ಕೆಲಸ ಮಾಡಿದ್ದು, ಪ್ರತಿ ಲೀಟರ್​​ ಡಿಸೇಲ್​ಗೆ ಇದು 35 ಕಿಲೋ ಮೀಟರ್​​ ಮೈಲೇಜ್ ನೀಡಲಿದ್ದು. 4 ಕ್ವಿಂಟಲ್​​ ಭಾರ ಸಾಗಿಸುವ ಸಾಮರ್ಥ್ಯ ಹೊಂದಿದೆ.

ಗುರ್ವಿಂದರ್​ ಸಿಂಗ್​ ಚಿಕ್ಕವನಿದ್ದಾಗಿಂದಲೂ ಟ್ರ್ಯಾಕ್ಟರ್​ ತಯಾರಿಸುವ ಒಲವು ಹೊಂದಿದ್ದರು. ಅದರ ಪ್ರತಿಫಲವಾಗಿ ಇದೀಗ ಈ ಮಿನಿ ಟ್ರ್ಯಾಕ್ಟರ್​​ ಸಿದ್ಧಗೊಂಡಿದ್ದು, ಇದಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ ಎಂದು ಆತ ಹೇಳಿಕೊಂಡಿದ್ದಾನೆ. ಇದಕ್ಕೋಸ್ಕರ 40 ಸಾವಿರ ರೂಪಾಯಿ ಖರ್ಚು ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: ವಿವಿಧ ರಾಜ್ಯಗಳ ಪ್ರವಾಸದಲ್ಲಿ ಕೆಸಿಆರ್​: ಅಖಿಲೇಶ್​ ಯಾದವ್ ಭೇಟಿ, ಕೇಜ್ರಿವಾಲ್​, ಭಗವಂತ್ ಮಾನ್ ಜೊತೆ ಚರ್ಚೆ!

ಮಗನ ಸಾಧನೆಗೆ ತಂದೆ ಸಾಧು ಸಿಂಗ್​ ಸಂತಸ ವ್ಯಕ್ತಪಡಿಸಿದ್ದು, ಈ ಟ್ರ್ಯಾಕ್ಟರ್​ ಜಮೀನಿನಲ್ಲಿ ತಮ್ಮ ಕೆಲಸ ಮತ್ತಷ್ಟು ಸುಲಭಗೊಳಿಸಿದೆ ಎಂದಿದ್ದಾರೆ. ಜೊತೆಗೆ ಸದ್ಯದ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಿಂದ ಟ್ರ್ಯಾಕ್ಟರ್ ಖರೀದಿ ತುಂಬಾ ದುಬಾರಿ, ಇದೀಗ ಕೇವಲ 40 ಸಾವಿರ ರೂಪಾಯಿ ವೆಚ್ಚದಲ್ಲಿ ನಮ್ಮ ಮಗ ಟ್ರ್ಯಾಕ್ಟರ್ ತಯಾರಿಸಿ, ನಮಗೆ ಸಹಾಯ ಮಾಡಿದ್ದಾನೆಂದು ಹೇಳಿಕೊಂಡಿದ್ದಾರೆ.

Last Updated : May 21, 2022, 7:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.