ETV Bharat / bharat

ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಪುಣೆಯಲ್ಲಿ ಕರ್ಫ್ಯೂ: ಹೋಂ ಡೆಲಿವರಿಗೆ ಮಾತ್ರ ಅವಕಾಶ - ಕೋವಿಡ್​-19

ಕೊರೊನಾ ವೈರಸ್​ ಅಬ್ಬರ ಜೋರಾಗಿರುವ ಕಾರಣ ಮಹಾರಾಷ್ಟ್ರದ ಪುಣೆಯಲ್ಲಿ ಒಂದು ವಾರಗಳ ಕಾಲ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಲಾಗಿದೆ.

Pune curfew
Pune curfew
author img

By

Published : Apr 2, 2021, 3:05 PM IST

ಪುಣೆ: ಕೋವಿಡ್ ಎರಡನೇ ಅಲೆ ಮಹಾರಾಷ್ಟ್ರದಲ್ಲಿ ನಿಯಂತ್ರಣಕ್ಕೆ ಸಿಗದ ಕಾರಣ ಇದೀಗ ಅಲ್ಲಿನ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ನಾಳೆಯಿಂದ ಪುಣೆಯಲ್ಲಿ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರಗೆ ಕರ್ಫ್ಯೂ ವಿಧಿಸಲಾಗಿದೆ.

ಯಾವುದಕ್ಕೆಲ್ಲಾ ನಿರ್ಬಂಧ?

ಒಂದು ವಾರಗಳ ಕಾಲ ಈ ಕರ್ಫ್ಯೂ ಜಾರಿಯಲ್ಲಿರಲಿದೆ. ಧಾರ್ಮಿಕ ಸ್ಥಳಗಳು, ಹೋಟೆಲ್​, ಶಾಪಿಂಗ್​ ಮಾಲ್​, ಸಿನಿಮಾ ಮಂದಿರ ಹಾಗೂ ಬಾರ್​ಗಳು ಸಂಪೂರ್ಣವಾಗಿ ಬಂದ್​ ಇರಲಿವೆ. ಹೋಂ ಡೆಲಿವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಪ್ರಮುಖವಾಗಿ ಆಹಾರ, ಔಷಧಿ ಹಾಗೂ ಇತರೆ ಅವಶ್ಯಕ ವಸ್ತುಗಳ ಸಾಗಾಣಿಕೆ ಮಾಡಲು ಅವಕಾಶವಿದೆ. ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು 20 ಜನರಿಗೆ ಅವಕಾಶ ನೀಡಲಾಗಿದೆ. ಮದುವೆ ಕಾರ್ಯಕ್ರಮಗಳಲ್ಲಿ 50 ಜನರು ಭಾಗಿಯಾಗಬಹುದಾಗಿದೆ.

ಪುಣೆಯಲ್ಲಿ ಕಳೆದ ಕೆಲ ದಿನಗಳಿಂದ ಅತಿ ಹೆಚ್ಚು ಕೋವಿಡ್​ ಸೋಂಕಿತ ಪ್ರಕರಣ ಪತ್ತೆಯಾಗುತ್ತಿದೆ. ನಿನ್ನೆ ಒಂದೇ ದಿನ 8,011 ಸೋಂಕಿತ ಪ್ರಕರಣ ವರದಿಯಾಗಿದೆ. ಮುಂಬೈ, ನಾಗ್ಪುರ​ದಲ್ಲೂ ಕೋವಿಡ್‌ ಅಬ್ಬರ ಜೋರಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಅತ್ಯಧಿಕ 43,183 ಕೋವಿಡ್ ಕೇಸ್​; ಮುಂಬೈನಲ್ಲೇ 8,646 ಪ್ರಕರಣ!

ರಾಜ್ಯದಲ್ಲಿ ನಿನ್ನೆ ಒಂದೇ ದಿನ 43,183 ಕೋವಿಡ್​ ಪ್ರಕರಣ ದಾಖಲಾಗಿದೆ. ಮುಂಬೈಯಲ್ಲೇ ದಾಖಲೆಯ 8,646 ಪ್ರಕರಣಗಳು ಕಾಣಿಸಿಕೊಂಡಿವೆ.

ಈಗಾಗಲೇ ನಾಗ್ಪುರ​, ಅಮರಾವತಿ ಸೇರಿದಂತೆ ಕೆಲವು ಪ್ರಮುಖ ನಗರಗಳಲ್ಲಿ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.