ETV Bharat / bharat

ಗುಜರಾತ್: ಎಣ್ಣೆ ಪಾರ್ಟಿಯಲ್ಲಿ ತೊಡಗಿದ್ದ ಪೊಲೀಸರು ಅರೆಸ್ಟ್! - police arrested

ಎಣ್ಣೆ ಪಾರ್ಟಿಯಲ್ಲಿ ತೊಡಗಿದ್ದ ಒಬ್ಬ ಪಿಎಸ್‌ಐ, ಮೂವರು ಕಾನ್ಸ್​ಟೇಬಲ್‌ಗಳು ಸೇರಿದಂತೆ 19 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ.

PSI and constables arrested during liquor party in Gujarat
ಗುಜರಾತ್: ಎಣ್ಣೆ ಪಾರ್ಟಿಯಲ್ಲಿ ತೊಡಗಿದ್ದ ಪೊಲೀಸರು ಅರೆಸ್ಟ್
author img

By

Published : Jul 27, 2022, 6:25 PM IST

Updated : Jul 27, 2022, 6:56 PM IST

ವಲ್ಸಾದ್‌ (ಗುಜರಾತ್): ​ ಪಾರ್ಟಿಯೊಂದರಲ್ಲಿ ಮದ್ಯ ಸೇವಿಸುತ್ತಿದ್ದ ಪೊಲೀಸರನ್ನು ವಲ್ಸಾದ್‌ ಪೊಲೀಸರು ಬಂಧಿಸಿದ್ದಾರೆ. ವಲ್ಸಾದ್‌ನ ಅತುಲ್ ಗ್ರಾಮದ ಯುವಕನ ಹುಟ್ಟುಹಬ್ಬದ ಪಾರ್ಟಿ ನಡೆಯುತ್ತಿತ್ತು. ಈ ವೇಳೆ ಓರ್ವ ಪಿಎಸ್‌ಐ, ಮೂವರು ಕಾನ್ಸ್​ಟೇಬಲ್‌ಗಳು ಸೇರಿದಂತೆ 19 ಮಂದಿ ಮದ್ಯ ಸೇವಿಸಿ ಸಿಕ್ಕಿಬಿದ್ದಿದ್ದಾರೆ.

ಶಾನಿ ಬಾವಿಸ್ಕರ್ ಎಂಬ ಯುವಕ ಅತುಲ್‌ನ ಮುಕುಂದ್ ಪ್ರದೇಶದ ಬಂಗಲೆಯಲ್ಲಿ ಹುಟ್ಟುಹಬ್ಬದ ಪಾರ್ಟಿ ನಡೆಸಿದ್ದಾನೆ. ನಾನಾಪೋದ ಪೊಲೀಸ್ ಠಾಣೆಯ ಪಿಎಸ್​ಐ, 3 ಕಾನ್ಸ್​ಟೇಬಲ್ ಸೇರಿ 19 ಮಂದಿ ಮದ್ಯ ಸೇವಿಸುತ್ತಿದ್ದರು. ಮಾಹಿತಿ ಆಧರಿಸಿ ವಲ್ಸಾದ್‌ ಎಸ್ಪಿ ರಾಜದೀಪ್ ಸಿಂಗ್ ಝಾಲಾ ಇಲ್ಲಿ ದಾಳಿ ನಡೆಸಿ, ಪೊಲೀಸರು ಸೇರಿ ಎಲ್ಲರನ್ನೂ ಬಂಧಿಸಲಾಯಿತು.

ಎಣ್ಣೆ ಪಾರ್ಟಿಯಲ್ಲಿ ತೊಡಗಿದ್ದ ಪೊಲೀಸರು ಅರೆಸ್ಟ್!

ವಿಶೇಷ ಎಂದರೆ ಗುಜರಾತ್​ನಲ್ಲಿ ಮದ್ಯಪಾನ ನಿಷೇಧ ಇದೆ. ಆದರೂ ಕಾನೂನು ಕಾಪಾಡಬೇಕಾದ ಪೊಲೀಸರೇ ಇಂತಹ ಕೃತ್ಯದಲ್ಲಿ ಭಾಗಿಯಾಗಿರುವುದು ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಉಮೇಶ್ ಕೊಲ್ಹೆ ಹತ್ಯೆ ಪ್ರಕರಣ: ಜೈಲಿನಲ್ಲಿ ಆರೋಪಿ ಪಠಾಣ್‌ಗೆ ಥಳಿಸಿದ ಕೈದಿಗಳು!

Last Updated : Jul 27, 2022, 6:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.