ETV Bharat / bharat

ಪೊಲೀಸರಿಂದ ತಪ್ಪಿಸಿಕೊಳ್ಳಲು ಜಿಲ್ಲಾ ನ್ಯಾಯಾಲಯದ ಮಹಡಿಯಿಂದ ಕೆಳಗೆ ಜಿಗಿದ ಆರೋಪಿ! - ಹರಿಯಾಣ ಅಪರಾಧ ಸುದ್ದಿ

ಸೈಬರ್ ಸಿಟಿ ಗುರುಗ್ರಾಮ್‌ನ ಜಿಲ್ಲಾ ನ್ಯಾಯಾಲಯದಲ್ಲಿ ಖೈದಿಯೊಬ್ಬ ತಪ್ಪಿಸಿಕೊಳ್ಳಲು ಛಾವಣಿಯಿಂದ ಜಿಗಿದ ಘಟನೆ ಕಂಡು ಬಂತು.

Gurugram District Court  Prisoner jumped court roof in Gurugram  Haryana crime news  etv bharat Kannada news  ಗುರುಗ್ರಾಮ ಜಿಲ್ಲಾ ನ್ಯಾಯಾಲಯ ತಪ್ಪಿಸಿಕೊಳ್ಳಲು ಆರೋಪಿ ಯತ್ನ  ಹರಿಯಾಣದಲ್ಲಿ ಜಿಲ್ಲಾ ನ್ಯಾಯಾಲಯ ಮಹಡಿಯಿಂದ ಜಿಗಿದ ಆರೋಪಿ  ಹರಿಯಾಣ ಅಪರಾಧ ಸುದ್ದಿ  ಈಟಿವಿ ಭಾರತ ಕನ್ನಡ ಸುದ್ದಿ
ಪೊಲೀಸರಿಂದ ತಪ್ಪಿಸಿಕೊಳ್ಳಲು ಜಿಲ್ಲಾ ನ್ಯಾಯಾಲಯದ ಮಹಡಿಯಿಂದ ಕೆಳಗೆ ಜಿಗಿದ ಆರೋಪಿ
author img

By

Published : Aug 2, 2022, 1:21 PM IST

ಗುರುಗ್ರಾಮ(ಹರಿಯಾಣ): ಕಳ್ಳತನ ಪ್ರಕರಣದಲ್ಲಿ ಸೆರೆಯಾಗಿದ್ದ ಆರೋಪಿಯೊಬ್ಬ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಕೋರ್ಟ್​ನ ಮೊದಲ ಮಹಡಿಯಿಂದ ಕೆಳಗೆ ಜಿಗಿದಿದ್ದಾನೆ. ಈ ವೇಳೆ, ಆರೋಪಿ ಗಾಯಗೊಂಡಿದ್ದು, ತಲೆಗೂ ತೀವ್ರ ಪೆಟ್ಟಾಗಿತ್ತು. ಅಲ್ಲೇ ಇದ್ದ ವಕೀಲರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಗೊಂಡಿರುವ ಆರೋಪಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಎಲ್ಲ ಪ್ರಕರಣ ಸೋಮವಾರ ಗುರುಗ್ರಾಮ ಜಿಲ್ಲಾ ನ್ಯಾಯಾಲದಲ್ಲಿ ನಡೆದಿದೆ.

ನ್ಯಾಯಾಲಯದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯನ್ನು ಬಿಹಾರದ ದರ್ಭಾಂಗಾ ನಿವಾಸಿ ರಾಜು ಎಂದು ಗುರುತಿಸಲಾಗಿದೆ. ಸಿಕ್ಕಿರುವ ಮಾಹಿತಿಯ ಪ್ರಕಾರ 28 ವರ್ಷದ ರಾಜು ಗುರುಗ್ರಾಮದ ಸರಸ್ವತಿ ಎನ್‌ಕ್ಲೇವ್‌ನಲ್ಲಿ ವಾಸಿಸುತ್ತಿದ್ದ. ಗೋದಾಮಿನ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. ಆರೋಪಿ ರಾಜುವನ್ನು ಸೋಮವಾರ ತನಿಖಾಧಿಕಾರಿ ಜೆಎಂಐಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಲಯ ಆರೋಪಿಯನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು.

ನ್ಯಾಯಾಲಯದಿಂದ ಹೊರಬರುವಾಗ ಆರೋಪಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಮೊದಲನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾನೆ. ಆದರೆ, ಈ ವೇಳೆ ಆತನಿಗೆ ತಲೆಗೆ ಪೆಟ್ಟುಬಿದ್ದು ಗಂಭೀರವಾಗಿ ಗಾಯಗೊಂಡಿದ್ದನು. ಕೂಡಲೇ ಅಲ್ಲೇ ಇದ್ದ ವಕೀಲರು ಆರೋಪಿ ರಾಜವನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಬಳಿಕ ಆರೋಪಿ ರಾಜವನ್ನು ಪೊಲೀಸರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು.

ಕಂಪನಿಯಿಂದ ಬಟ್ಟೆಗಳನ್ನು ಕದ್ದಿದ್ದೇನೆ. ಆದರೆ ಲ್ಯಾಪ್‌ಟಾಪ್‌ಗಳನ್ನು ಕದ್ದಿದ್ದೇನೆ ಎಂದು ಕಂಪನಿ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದೆ. ಅಲ್ಲದೇ ನಾನು ಸಿಸಿಟಿವಿಗಳನ್ನು ಕಿತ್ತು ಹಾಕಿಲ್ಲ ಎಂದು ಆರೋಪಿ ರಾಜು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಪ್ರಕರಣದ ತನಿಖೆ ಚಾಲ್ತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಸತ್ಯಾಸತ್ಯತೆ ಹೊರ ಬೀಳಲಿದೆ.

ಓದಿ: ರೈಲು ಬರುತ್ತಿದ್ದ ವೇಳೆ ಹಳಿ ದಾಟಿದ ಮಹಿಳೆ.. ಕೂದಲೆಳೆ ಅಂತರದಲ್ಲಿ ಪಾರು - ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.