ETV Bharat / bharat

ಪುರೋಹಿತರ ಗಲಾಟೆ ವಿಡಿಯೋ ವೈರಲ್​: ಠಾಣೆ ಮೆಟ್ಟಿಲೇರಿದ ಅರ್ಚಕರ ಜಗಳ - ಉತ್ತರಪ್ರದೇಶ ದೇವಾಲಯ

ದೇವಸ್ಥಾನಕ್ಕೆ ಆಗಮಿಸಿದ್ದ ಪುರೋಹಿತರ ಮೇಲೆ, ಮತ್ತೊಂದು ಪುರೋಹಿತರ ತಂಡ ಹಲ್ಲೆ ನಡೆಸಿದ್ದು, ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ಉತ್ತರಪ್ರದೇಶದಲ್ಲಿ ನಡೆದ ಈ ಘಟನೆ ವಿಡಿಯೋ ವೈರಲ್​ ಆಗಿದೆ.

mirzapur
ಗಲಾಟೆ ವಿಡಿಯೋ ವೈರಲ್​
author img

By

Published : Jul 21, 2021, 6:44 AM IST

ಮಿರ್ಜಾಪುರ: ಉತ್ತರ ಪ್ರದೇಶದ ವಿಂದ್ಯಾಚಲ ದೇವಸ್ಥಾನಕ್ಕೆ ಆಗಮಿಸಿದ್ದ ಪುರೋಹಿತರ ಮೇಲೆ, ಮತ್ತೊಂದು ಪುರೋಹಿತರ ತಂಡ ಹಲ್ಲೆ ನಡೆಸಿದೆ. ದೇವಾಲಯಕ್ಕೆ ಆಗಮಿಸಿದ್ದ ವೇಳೆ ಇಬ್ಬರು ಪುರೋಹಿತರ ನಡುವೆ ವಾಗ್ವಾದ ನಡೆದಿದ್ದು, ಈ ಸಂದರ್ಭದಲ್ಲಿ ಹಲ್ಲೆ ನಡೆಸಲಾಗಿದೆ. ಘಟನೆಯ ವಿಡಿಯೋ ವೈರಲ್​ ಆಗಿದೆ.

ಇನ್ನು ಘಟನೆಯಲ್ಲಿ ಗಾಯಗೊಂಡಿರುವ ಪುರೋಹಿತರೊಬ್ಬರು ವಿಂಧ್ಯಾಚಲ್ ಕೊಟ್ವಾಲಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನು, ಭಿಗು, ನಿತ್ಯಾನಂದ್ ಮತ್ತು ಶಿವಾನಂದ್ ವಿರುದ್ಧ ಹಲ್ಲೆ ಸೇರಿದಂತೆ ಇತರ ವಿಭಾಗಗಳ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಗಲಾಟೆ ವಿಡಿಯೋ ವೈರಲ್​

ಘಟನೆ ಬಗ್ಗೆ ಹಲ್ಲೆಗೊಳಗಾದ ಪುರೋಹಿತ ಮಾತನಾಡಿದ್ದು, "ಇದು ನನ್ನ ಮೇಲೆ ನಡೆದ ಮಾರಣಾಂತಿಕ ದಾಳಿ ಇರಬಹುದು. ಈ ಮೊದಲು ಜೂನ್ 28 ರಂದು ಸಹ ಹಲ್ಲೆ ನಡೆಸಲಾಗಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ" ಎಂದರು.

ಇದಕ್ಕೂ ಮೊದಲು ಜೂನ್ ತಿಂಗಳಲ್ಲಿ ಮಾ ವಿಂಧ್ಯಾವಾಸಿನಿ ದೇವಾಲಯದ ಆವರಣದಲ್ಲಿ ಕೆಲವು ಪೊಲೀಸರು ಮತ್ತು ಅರ್ಚಕರೊಂದಿಗೆ ವಿವಾದ ನಡೆದಿತ್ತು. ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಯಾತ್ರಾ ಪುರೋಹಿತನನ್ನು ತೀವ್ರವಾಗಿ ಥಳಿಸಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಪೊಲೀಸ್ ಅಧೀಕ್ಷಕರು ಮೂವರು ಪೊಲೀಸರನ್ನು ಅಮಾನತುಗೊಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.