ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರವಧಿ ಜುಲೈ 24ರಂದು ಅಂತ್ಯಗೊಳ್ಳಲಿದ್ದು, ಹೀಗಾಗಿ ನೂತನ ರಾಷ್ಟ್ರಪತಿಗಳ ನೇಮಕ ಮಾಡಲು ಕೇಂದ್ರ ಚುನಾವಣಾ ಆಯೋಗದಿಂದ ಇಂದು ಮಧ್ಯಾಹ್ನ ಮೂರು ಗಂಟೆಗೆ ವೇಳಾಪಟ್ಟಿ ಪ್ರಕಟವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದು, ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ದಟ್ಟವಾಗಿದೆ.
-
Election Commission of India to announce the schedule for election for the next President of India at 1500 hours today.
— ANI (@ANI) June 9, 2022 " class="align-text-top noRightClick twitterSection" data="
">Election Commission of India to announce the schedule for election for the next President of India at 1500 hours today.
— ANI (@ANI) June 9, 2022Election Commission of India to announce the schedule for election for the next President of India at 1500 hours today.
— ANI (@ANI) June 9, 2022
ಸಂವಿಧಾನದ 62ನೇ ವಿಧಿ ಪ್ರಕಾರ ಮುಂದಿನ ರಾಷ್ಟ್ರಪತಿ ಜುಲೈ 25ರೊಳಗೆ ಪ್ರಮಾಣ ವಚನ ಸ್ವೀಕಾರ ಮಾಡಬೇಕಾಗಿದ್ದು, ಇಂದು ವೇಳಾಪಟ್ಟಿ ಪ್ರಕಟಗೊಳ್ಳಲಿದೆ. ರಾಷ್ಟ್ರಪತಿಗಳ ಆಯ್ಕೆಯಲ್ಲಿ ದೇಶದ 776 ಸಂಸದರು ಹಾಗೂ 4,120 ಶಾಸಕರು ವೋಟ್ ಮಾಡಲಿದ್ದಾರೆ. ಈ ಹಿಂದೆ 2017ರಲ್ಲಿ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ರಾಮನಾಥ್ ಕೋವಿಂದ್ ಅವರು ಶೇ. 65.35ರಷ್ಟು ವೋಟ್ಗಳಿಸಿ, ಭಾರತದ 14ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು.
ರಾಷ್ಟ್ರಪತಿಗಳ ಆಯ್ಕೆ ಯಾವ ರೀತಿ: ಲೋಕಸಭೆ ಮತ್ತು ರಾಜ್ಯಸಭೆಯ ಒಟ್ಟು 776 ಸಂಸದರು ಮತ್ತು ಎಲ್ಲ ರಾಜ್ಯಗಳ 4,120 ಶಾಸಕರು ಮತದಾರರಾಗಿರುತ್ತಾರೆ. ಒಟ್ಟು ಮತದಾರರ ಸಂಖ್ಯೆ 4,896. ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರೊಬ್ಬರ ಮತದ ಮೌಲ್ಯ 708. ರಾಜ್ಯದ ಜನಸಂಖ್ಯೆಯನ್ನ ಒಟ್ಟು ಶಾಸಕರ ಸಂಖ್ಯೆಯೊಂದಿಗೆ ಭಾಗಿಸಬೇಕು. ಬಳಿಕ ಬರುವ ಶೇಷವನ್ನ ಒಂದು ಸಾವಿರದೊಂದಿಗೆ ಗುಣಿಸಿದಾಗ ಶಾಸಕರ ಮತ ಮೌಲ್ಯ ಸಿಗುತ್ತದೆ.
ಆದರೆ, ವಿಧಾನಪರಿಷತ್ ಸದಸ್ಯರು, ನಾಮನಿರ್ದೇಶಿತ ಸಂಸದ ಮತ್ತು ಶಾಸಕರಿಗೆ ಮತದಾನದ ಹಕ್ಕು ಇರುವುದಿಲ್ಲ. ರಾಷ್ಟ್ರಪತಿ ಚುನಾವಣೆ ಸಂವಿಧಾನದ ವಿಧಿ 62ರ ಪ್ರಕಾರ ಚುನಾವಣೆ ನಡೆಯುತ್ತದೆ.
ಇದನ್ನು ಓದಿ:ಪಂಜಾಬ್ ರಾಜಕೀಯ ವಲಯದಲ್ಲಿ ಸಂಚಲನ.. ಮಾಜಿ ಸಚಿವ ಧರಂಸೋತ್ ಬಂಧನಕ್ಕೆ ಭಾರಿ ವಿರೋಧ!