ನವದೆಹಲಿ: ಕೇಂದ್ರ ಸರ್ಕಾರದ ಕೊನೆಯ ಪೂರ್ಣಾವಧಿ ಬಜೆಟ್ ಅಧಿವೇಶನ ಆರಂಭವಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಸದನವನ್ನುದ್ದೇಶಿ ಭಾಷಣ ಮಾಡಿದರು. "2047 ರ ವೇಳೆಗೆ ನಾವು ಗತಕಾಲದ ಬುನಾದಿಯ ಮೇಲೆ ಆಧುನಿಕತೆಯ ಸುವರ್ಣ ಅಧ್ಯಾಯಗಳನ್ನು ಹೊಂದಿರುವ ಸಶಕ್ತ ರಾಷ್ಟ್ರವನ್ನಾಗಿ ನಿರ್ಮಿಸಬೇಕಾಗಿದೆ. ಆತ್ಮನಿರ್ಭರ್ ಮತ್ತು ಮಾನವೀಯ ನೆಲೆಯ ಮೇಲೆ ಸಮರ್ಥ ದೇಶವನ್ನು ಕಟ್ಟಬೇಕು" ಹೇಳಿದರು.
"ಬಡವರು, ಮಧ್ಯಮ ವರ್ಗ, ಯುವಕರು, ಮಹಿಳೆಯರೆನ್ನದೇ ಎಲ್ಲ ಸ್ತರದ ನಾಗರಿಕರು ಅಭಿವೃದ್ಧಿ ಹೊಂದಬೇಕು. ಯುವಕರು ಮತ್ತು ಮಹಿಳೆಯರು ಸಮಾಜಕ್ಕೆ ಮತ್ತು ದೇಶಕ್ಕೆ ದಾರಿ ತೋರಿಸುವ ಮುಂಚೂಣಿಯಲ್ಲಿರಬೇಕು. ಯುವಕರು ಅಭಿವೃದ್ಧಿಯ ವಿಷಯದಲ್ಲಿ ಎಲ್ಲರಿಗಿಂತಲೂ ಎರಡು ಹೆಜ್ಜೆ ಮುಂದೆ ಇರಬೇಕು" ಎಂದು ಹೇಳಿದರು.
"ಇಂದು, ದೇಶದಲ್ಲಿ ಸ್ಥಿರ, ನಿರ್ಭೀತ ಮತ್ತು ನಿರ್ಣಾಯಕ ಸರ್ಕಾರವಿದೆ. ಅದು ದೊಡ್ಡ ಕನಸುಗಳನ್ನು ನನಸಾಗಿಸಲು ಕೆಲಸ ಮಾಡುತ್ತಿದೆ. ದೇಶದ ಆತ್ಮಸ್ಥೈರ್ಯ ಅತ್ಯುನ್ನತ ಮಟ್ಟದಲ್ಲಿದೆ. ಜಗತ್ತು ನಮ್ಮನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುತ್ತಿದೆ. ಭಾರತವು ಜಗತ್ತಿಗೇ ಪರಿಹಾರಗಳನ್ನು ನೀಡುವಷ್ಟು ಸಶಕ್ತವಾಗಿದೆ" ಎಂದು ರಾಷ್ಟ್ರಪತಿ ಮೆಚ್ಚುಗೆ ವ್ಯಕ್ತಪಡಿಸಿದರು.
-
That should be an India that will not have poverty, whose middle class will also be prosperous, an India whose youth and women will stand at the front to show a path to society & the country, an India whose youth stays two steps ahead of time: President Droupadi Murmu pic.twitter.com/MDYnHK22WG
— ANI (@ANI) January 31, 2023 " class="align-text-top noRightClick twitterSection" data="
">That should be an India that will not have poverty, whose middle class will also be prosperous, an India whose youth and women will stand at the front to show a path to society & the country, an India whose youth stays two steps ahead of time: President Droupadi Murmu pic.twitter.com/MDYnHK22WG
— ANI (@ANI) January 31, 2023That should be an India that will not have poverty, whose middle class will also be prosperous, an India whose youth and women will stand at the front to show a path to society & the country, an India whose youth stays two steps ahead of time: President Droupadi Murmu pic.twitter.com/MDYnHK22WG
— ANI (@ANI) January 31, 2023
ಆತ್ಮನಿರ್ಭರ ಭಾರತ ಗುರಿ ಸಾಧಿಸಿ: "ಭಾರತ ತನ್ನ 75 ವರ್ಷಗಳ ಸ್ವಾತಂತ್ರ್ಯದ ಅಮೃತ ಕಾಲ ಪ್ರವೇಶಿಸಿದೆ. ಈ ಸಮಯದಲ್ಲಿ ಜನರು ಆತ್ಮನಿರ್ಭರ್ (ಸ್ವಾವಲಂಬಿ) ಭಾರತವನ್ನು ನಿರ್ಮಿಸುವತ್ತ ಗಮನ ಕೇಂದ್ರೀಕರಿಸಬೇಕು. 2047 ರ ವೇಳೆಗೆ ದೇಶ ಎಲ್ಲ ಆಯಾಮಗಳಲ್ಲೂ ಅಭಿವೃದ್ಧಿ ಹೊಂದಿ ಸುವರ್ಣಯುಗ ಸ್ಥಾಪಿಸಬೇಕು. ಬಡತನವಿಲ್ಲದ ಮತ್ತು ಸಮೃದ್ಧಿಯಿಂದ ಕೂಡಿದ ಭಾರತ ನಮ್ಮದಾಗಬೇಕು" ಎಂದು ರಾಷ್ಟ್ರಪತಿ ಪ್ರತಿಪಾದಿಸಿದರು.
"ವಿಶ್ವ ವೇದಿಕೆಯಲ್ಲಿ ಭಾರತ ಬೆಳೆಯುತ್ತಿರುವ ಪರಿಯನ್ನು ಶ್ಲಾಘಿಸಿದ ರಾಷ್ಟ್ರಪತಿಗಳು, ಸರ್ಕಾರದ ಹೊಸ ನೀತಿಗಳಿಂದಾಗಿ ರಕ್ಷಣಾ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ. ಸಾಮಗ್ರಿಗಳ ರಫ್ತು 6 ಪಟ್ಟು ಹೆಚ್ಚಾಗಿದೆ. ಐಎನ್‌ಎಸ್ ವಿಕ್ರಾಂತ್ ರೂಪದಲ್ಲಿ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಕೂಡ ನೌಕಾಪಡೆಗೆ ಸೇರ್ಪಡೆಯಾಗಿದೆ. ಇದು ಹೆಮ್ಮೆಯ ಸಂಗತಿಯಾಗಿದೆ" ಎಂದು ಮುರ್ಮು ಅವರು ಹೇಳಿದರು.
-
Wherever there is political instability anywhere in the world, those countries are surrounded by a massive crisis. But due to the decisions my govt took in the national interest, India is in a better position as compared to other countries: President Draupadi Murmu pic.twitter.com/UlpcZXqC2m
— ANI (@ANI) January 31, 2023 " class="align-text-top noRightClick twitterSection" data="
">Wherever there is political instability anywhere in the world, those countries are surrounded by a massive crisis. But due to the decisions my govt took in the national interest, India is in a better position as compared to other countries: President Draupadi Murmu pic.twitter.com/UlpcZXqC2m
— ANI (@ANI) January 31, 2023Wherever there is political instability anywhere in the world, those countries are surrounded by a massive crisis. But due to the decisions my govt took in the national interest, India is in a better position as compared to other countries: President Draupadi Murmu pic.twitter.com/UlpcZXqC2m
— ANI (@ANI) January 31, 2023
ಸರ್ಕಾರದಿಂದ ನಿರ್ಣಾಯಕ ಕ್ರಮಗಳು: "ಸರ್ಕಾರಕ್ಕೆ ದೇಶದ ಹಿತಾಸಕ್ತಿಯೇ ಪ್ರಮುಖವಾಗಿದೆ. ಅದರ ಹಳೆಯ ನೀತಿ, ತಂತ್ರವನ್ನು ಸಂಪೂರ್ಣವಾಗಿ ಬದಲಾಯಿಸುವ ಇಚ್ಛೆಯನ್ನು ತೋರಿಸಿದೆ. ಸರ್ಜಿಕಲ್ ಸ್ಟ್ರೈಕ್‌ಗಳಿಂದ ಭಯೋತ್ಪಾದನೆ ವಿರುದ್ಧದ ಕಠಿಣ ನಿಗ್ರಹದವರೆಗೆ, ಎಲ್‌ಒಸಿಯಿಂದ ಎಲ್‌ಎಸಿವರೆಗೆ, ಆರ್ಟಿಕಲ್ 370 ರ ರದ್ದತಿಯಿಂದ ತ್ರಿವಳಿ ತಲಾಖ್‌ವರೆಗೆ, ಸರ್ಕಾರ ನಿರ್ಣಾಯಕ ಕ್ರಮಗಳನ್ನು ಕೈಗೊಂಡಿರುವುದು ಹೆಗ್ಗುರುತಾಗಿದೆ" ಎಂದು ಬಣ್ಣಿಸಿದರು.
-
#BudgetSession | President Droupadi Murmu and Vice President Jagdeep Dhankhar greet PM Narendra Modi, Congress Parliamentary Party Chairperson Sonia Gandhi and other MPs after concluding the President's Address to the joint sitting of the Parliament. pic.twitter.com/CdnWvaTik3
— ANI (@ANI) January 31, 2023 " class="align-text-top noRightClick twitterSection" data="
">#BudgetSession | President Droupadi Murmu and Vice President Jagdeep Dhankhar greet PM Narendra Modi, Congress Parliamentary Party Chairperson Sonia Gandhi and other MPs after concluding the President's Address to the joint sitting of the Parliament. pic.twitter.com/CdnWvaTik3
— ANI (@ANI) January 31, 2023#BudgetSession | President Droupadi Murmu and Vice President Jagdeep Dhankhar greet PM Narendra Modi, Congress Parliamentary Party Chairperson Sonia Gandhi and other MPs after concluding the President's Address to the joint sitting of the Parliament. pic.twitter.com/CdnWvaTik3
— ANI (@ANI) January 31, 2023
ಜಗತ್ತಿನ ಯಾವ ದೇಶದಲ್ಲಿ ರಾಜಕೀಯ ಅಸ್ಥಿರತೆ ಇದೆಯೋ, ಆ ದೇಶಗಳು ಬಿಕ್ಕಟ್ಟಿನಿಂದ ಕೂಡಿರುತ್ತವೆ. ರಾಷ್ಟ್ರೀಯ ಹಿತಾಸಕ್ತಿ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರಗಳಿಂದಾಗಿ ಇತರ ದೇಶಗಳಿಗೆ ಹೋಲಿಸಿದರೆ ಭಾರತ ಉತ್ತಮ ಸ್ಥಾನದಲ್ಲಿದೆ ಎಂದು ಮುರ್ಮು ಹೇಳಿದರು.
ಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ಭಾಗ ಇಂದಿನಿಂದ ಫೆಬ್ರವರಿ 10 ರವರೆಗೆ ನಡೆಯಲಿದೆ. ಎರಡನೇ ಕಂತು ಮಾರ್ಚ್ 12 ರಿಂದ ಏಪ್ರಿಲ್ 6 ರವರೆಗೆ ನಡೆಯಲಿದೆ.
ಇದನ್ನೂ ಓದಿ: ಇಂದಿನಿಂದ ಸಂಸತ್ತಿನ ಬಜೆಟ್ ಅಧಿವೇಶನ: ರಾಷ್ಟ್ರಪತಿ ಭಾಷಣ, ಆರ್ಥಿಕ ಸಮೀಕ್ಷೆ ವರದಿ ಮಂಡನೆ