ಪಶ್ಚಿಮ ಚಂಪಾರಣ್: ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ವಿರುದ್ಧ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಟೀಕಾ ಪ್ರಹಾರ ನಡೆಸಿದ್ದಾರೆ. ತೇಜಸ್ವಿ ಯಾದವ್ ಕೇವಲ 9ನೇ ತರಗತಿ ಓದಿದ್ದಾರೆ. ಈ ವಿದ್ಯಾಹರ್ತೆಗೆ ಪ್ಯೂನ್ ಕೆಲಸ ಕೂಡಾ ಸಿಗುವುದಿಲ್ಲ. ಆದರೆ ಇವಾಗ ಅವರೇ ರಾಜ ಎಂದು ಲೇವಡಿ ಮಾಡಿದ್ದಾರೆ.
ಜನರೊಂದಿಗೆ ಮಾತನಾಡಿದ ಪ್ರಶಾಂತ್ ಕಿಶೋರ್, ಲಾಲು ಪ್ರಸಾದ್ ಯಾದವ್ ಅವರ ಮಗ 9 ನೇ ತರಗತಿ ಪಾಸಾಗಿ ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದಾರೆ. ನಿಮ್ಮ ಮಕ್ಕಳು 9ನೇ ತರಗತಿ ತೇರ್ಗಡೆಯಾಗಿದ್ದರೆ ಪ್ಯೂನ್ ಕೆಲಸ ಸಿಗುತ್ತದೆಯೇ? ಎಂದು ಪ್ರಶ್ನಿಸಿದ ಅವರು, ಇವತ್ತು ಮಂತ್ರಿ -ಶಾಸಕರ ಪುತ್ರರೇ ಆಡಳಿತ ನಡೆಸುತ್ತಾರೆ. ಅದನ್ನು ಮೊದಲು ಬದಲಾಯಿಸಬೇಕಾಗಿದೆ ಎಂದರು.
'ನಮ್ಮ ಮಕ್ಕಳಿಗೆ ಯಾರು ತಿನ್ನಿಸುತ್ತಾರೆ? ನಮ್ಮ ಹಳ್ಳಿಯಲ್ಲಿ ಶಾಲೆ ಕಟ್ಟುವವರು ಯಾರು? ನಮ್ಮ ಜಾತಿಯ ಜನರು ನಮಗಾಗಿ ಕೆಲಸ ಮಾಡುತ್ತಾರೆ ಎಂದು ನೀವು ಭಾವಿಸುತ್ತೀರಿ. ಆದರೆ, ಪರಿಸ್ಥಿತಿ ಹಾಗಿಲ್ಲ ಎಂದು ಎಚ್ಚರಿಸಿದ್ದಾರೆ.
ಓದಿ: ಬಿಹಾರದಲ್ಲಿ ಜೆಡಿಯು- ಬಿಜೆಪಿ ಸರ್ಕಾರದ ನಿದ್ದೆ ಕದಿಯಲಿದ್ದಾರೆ ಪಿಕೆ- ಲಾಲೂ