ETV Bharat / bharat

ಜನಸಂಖ್ಯಾ ನಿಯಂತ್ರಣಕ್ಕೆ ಮುಂದಾದ ಯೋಗಿ ಸರ್ಕಾರ.. ಒಂದೇ ಮಗು ಹೊಂದುವವರಿಗೆ ಬಂಪರ್​ ಆಫರ್! - ಉತ್ತರಪ್ರದೇಶದಲ್ಲಿ ಜನಸಂಖ್ಯಾ ನಿಯಂತ್ರಣ

ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರಪ್ರದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಯೋಗಿ ಆದಿತ್ಯಾನಾಥ್​ ಸರ್ಕಾರ ಮುಂದಾಗಿದೆ. ಇದರ ಭಾಗವಾಗಿ ಜನತೆಗೆ ಹಲವು ಆಫರ್​ಗಳನ್ನು ಸಹ ನೀಡಿದೆ.

ಜನಸಂಖ್ಯಾ ನೀತಿ ಜಾರಿಗೆ ಮುಂದಾದ ಯೋಗಿ ಸರ್ಕಾರ
ಜನಸಂಖ್ಯಾ ನೀತಿ ಜಾರಿಗೆ ಮುಂದಾದ ಯೋಗಿ ಸರ್ಕಾರ
author img

By

Published : Jul 10, 2021, 1:52 PM IST

ಲಖನೌ: ಉತ್ತರಪ್ರದೇಶದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದ್ದು, ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಇದರ ಭಾಗವಾಗಿ ಸರ್ಕಾರ ಸಾರ್ವಜನಿಕರ ಅಭಿಪ್ರಾಯ ಪಡೆಯಲು ನಿರ್ಧರಿಸಿದೆ.

ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎ.ಎನ್. ಮಿತ್ತಲ್​, ಜನರ ಅಭಿಪ್ರಾಯ ಕೋರಿ ಕರಡು ಮಸೂದೆಯನ್ನು ಆಯೋಗದ ಅಧಿಕೃತ ವೆಬ್​ಸೈಟ್​ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಸಲಹೆ ನೀಡಲು ಜುಲೈ 19, 2021 ರವರೆಗೆ ಅವಕಾಶವಿರುತ್ತದೆ.

ಎ.ಎನ್. ಮಿತ್ತಲ್
ಎ.ಎನ್. ಮಿತ್ತಲ್

ಈ ಕಾಯ್ದೆಯನುಸಾರ ಇನ್ಮುಂದೆ ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದುವವರಿಗೆ ಸರ್ಕಾರಿ ಯೋಜನೆಗಳು ಸಿಗುವುದಿಲ್ಲ, ಸ್ಥಳೀಯ ಚುನಾವಣೆಗಳಿಗೆ ಸ್ಪರ್ಧಿಸುವುದು, ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಅವಕಾಶವಿರುವುದಿಲ್ಲ. ಎರಡು ಮಕ್ಕಳನ್ನು ಪಡೆಯುವ ಪೋಷಕರು ಮನೆ ಖರೀದಿಸಲು ಸಬ್ಸಿಡಿ, ಶುಲ್ಕಗಳ ಮೇಲಿನ ರಿಯಾಯಿತಿ, ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಇಪಿಎಫ್‌ನಲ್ಲಿ 3% ಹೆಚ್ಚಳ ಮುಂತಾದ ಪ್ರೋತ್ಸಾಹಗಳಿಗೆ ಅರ್ಹರಾಗಿರುತ್ತಾರೆ. ಕೇವಲ ಒಂದು ಮಗು ಹೊಂದುವ ದಂಪತಿಗೆ ಈ ಯೋಜನೆಗಳ ಜತೆ ಹಲವು ವಿಶೇಷ ಪ್ರೋತ್ಸಾಹಗಳನ್ನೂ ನೀಡಲಾಗುವುದು ಎಂದು ಮಿತ್ತಲ್ ಹೇಳಿದ್ದಾರೆ. ಆಗಸ್ಟ್​ ವೇಳೆಗೆ ಜನಸಂಖ್ಯಾ ನೀತಿ ಮಸೂದೆ ಜಾರಿಗೆ ಬರಲಿದೆ ಎಂದು ಮಿತ್ತಲ್ ಸ್ಪಷ್ಟಪಡಿಸಿದ್ದಾರೆ.

ಜನಸಂಖ್ಯೆಯನ್ನು ನಿಯಂತ್ರಿಸದಿದ್ದರೆ ನಿರುದ್ಯೋಗ, ಹಸಿವು, ಬಡತನ ಸೇರಿ ಇತರೆ ಸಮಸ್ಯೆಗಳು ಉದ್ಭವವಾಗುತ್ತವೆ. ಜನಸಂಖ್ಯಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಸ್ಸೋಂ, ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳಿಗೆ ಅನ್ವಯವಾಗುವ ಕಾನೂನುಗಳನ್ನು ಅಧ್ಯಯನ ಮಾಡಿದ್ದೇವೆ. ಸರ್ಕಾರಿ ಯೋಜನೆಗಳ ಲಾಭ ಪಡೆದುಕೊಳ್ಳಬೇಕಾದವರು ಈ ಕಾನೂನನ್ನು ಅನುಸರಿಸಲೇಬೇಕು ಎಂದರು.

ಜನ ನಿಯಂತ್ರಣ ನೀತಿ ಅನುಸರಿಸದಿದ್ದರೆ, ಪಡಿತರ ಚೀಟಿಯನ್ನು ರದ್ದುಗೊಳಿಸುವುದನ್ನೂ ಈ ಕರಡಿನಲ್ಲಿ ಸೇರಿಸಲಾಗಿದೆ. 2011 ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ ಸುಮಾರು 20 ಕೋಟಿಗಳಷ್ಟು ಜನಸಂಖ್ಯೆ ಇತ್ತು. ಪ್ರಸ್ತುತ ಸುಮಾರು 24 ಕೋಟಿ ಜನಸಂಖ್ಯೆಯಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ:PMGKAY ಅಡಿ ಮೇ- ಜೂನ್​ ತಿಂಗಳಲ್ಲಿ ಪಡಿತರ ಪಡೆದ ಫಲಾನುಭವಿಗಳೆಷ್ಟು?

2011 ರಲ್ಲಿ ಉತ್ತರಪ್ರದೇಶದಲ್ಲಿ ಹಿಂದೂಗಳ ಜನಸಂಖ್ಯೆ ಸುಮಾರು 16 ಕೋಟಿಗಳಷ್ಟಿತ್ತು. ಇದು ಒಟ್ಟು ಜನಸಂಖ್ಯೆಯ ಸುಮಾರು 80 ಪ್ರತಿಶತದಷ್ಟಿದೆ. ಅದೇ ಸಮಯದಲ್ಲಿ, ಮುಸ್ಲಿಮರ ಜನಸಂಖ್ಯೆಯು ಸುಮಾರು ನಾಲ್ಕು ಕೋಟಿಗಳಷ್ಟಿದೆ. ಕ್ರಿಶ್ಚಿಯನ್ನರ ಸಂಖ್ಯೆ ಸುಮಾರು ನಾಲ್ಕು ಲಕ್ಷ, ಸಿಖ್ಖರ ಸಂಖ್ಯೆ ಆರು ಲಕ್ಷ ಮತ್ತು ಒಂದೂವರೆ ಲಕ್ಷ ಜೈನ ಸಮುದಾಯದವರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.