ETV Bharat / bharat

ಶ್ರೀನಗರದಲ್ಲಿ ಓರ್ವ ಪೊಲೀಸ್ ಹುತಾತ್ಮ, ಉಗ್ರನ ಸೆರೆ

ಜಮ್ಮು ಕಾಶ್ಮೀರದಲ್ಲಿ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದು, ಉಗ್ರನೋರ್ವನನ್ನು ಸೆರೆಹಿಡಿಯಲಾಗಿದೆ.

Policeman shot dead in Kashmir
Jammu Encounter: ಶ್ರೀನಗರದಲ್ಲಿ ಓರ್ವ ಪೊಲೀಸ್ ಹುತಾತ್ಮ, ಉಗ್ರನ ಸೆರೆ
author img

By

Published : Nov 7, 2021, 10:11 PM IST

ಶ್ರೀನಗರ(ಜಮ್ಮು ಕಾಶ್ಮೀರ): ಶ್ರೀನಗರದ ಬಟ್ಮಾಲೂ ಎಂಬಲ್ಲಿ ಅಪರಿಚಿತ ಉಗ್ರರು ಪೊಲೀಸ್​ ಸಿಬ್ಬಂದಿಯೊಬ್ಬರನ್ನು ಗುಂಡಿಕ್ಕಿ ಕೊಂದಿದ್ದಾರೆ. ಪೊಲೀಸ್ ಮುಖ್ಯಕಚೇರಿಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಬಲ್ಮೂಟದಲ್ಲಿರುವ ಎಸ್‌ಡಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.

ಹುತಾತ್ಮರಾದ ಪೊಲೀಸ್ ಸಿಬ್ಬಂದಿಯನ್ನು ತೌಸೀಫ್ ಅಹ್ಮದ್ ಎಂದು ಗುರುತಿಸಲಾಗಿದ್ದು, ಬಟ್ಮಲೂನಲ್ಲಿರುವ ಪೊಲೀಸ್ ಕಂಟ್ರೋಲ್ ರೂಮ್‌ನಲ್ಲಿ ಇವರು ಕೆಲಸ ಮಾಡುತ್ತಿದ್ದನು. 2019ರಲ್ಲಿ ಈ ಸೇವೆಗೆ ಸೇರ್ಪಡೆಯಾಗಿದ್ದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಉಗ್ರರರಿರುವ ನಿಖರ ಮಾಹಿತಿ ಪಡೆದು ಬಲ್ಮೂಟದಲ್ಲಿರುವ ಎಸ್‌ಡಿ ಕಾಲೋನಿಗೆ ಧಾವಿಸಿದ ಪೊಲೀಸರು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ತೌಸೀಫ್ ಅಹ್ಮದ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದ ಸ್ಥಳೀಯ ಉಗ್ರಗಾಮಿ ಸುಹೇಲ್ ಲೋನ್​ನನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 12ರಂದು ಈ ಉಗ್ರ ಟಿಆರ್​ಎಫ್ ಉಗ್ರಗಾಮಿ ಸಂಘಟನೆಗೆ ಸೇರ್ಪಡೆಯಾಗಿದ್ದನು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ನೋಟ್​ ಬ್ಯಾನ್​ಗೆ 5 ವರ್ಷ: ದೇಶದಲ್ಲಿ ನಗದು ವ್ಯವಹಾರದ ಜೊತೆಗೆ ಡಿಜಿಟಲ್ ಪೇಮೆಂಟ್​​ ಹೆಚ್ಚಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.