ETV Bharat / bharat

'ನೀನು ನನ್ನ ಹೆಂಡ್ತಿಯಾಗಬಹುದೇ' 13ರ ಬಾಲೆಯ ಸ್ಟೇಟಸ್ ಹಾಕಿದ್ದವನಿಗೆ ಸಂಕಷ್ಟ.. ಬಾಲಕನ ವಿರುದ್ಧ ಪೋಕ್ಸೋ ಕೇಸ್​ - ಪೋಕ್ಸೋ

ಮಹಾರಾಷ್ಟ್ರದಲ್ಲಿ 14 ವರ್ಷದ ಬಾಲಕನೊಬ್ಬ 13 ವರ್ಷದ ಬಾಲಕಿಯ ಫೋಟೋ ಶೇರ್​ ಮಾಡಿ 'ನೀನು ನನ್ನ ಹೆಂಡತಿಯಾಗಬಹುದೇ' ಎಂದು ಇನ್‌ಸ್ಟಾಗ್ರಾಮ್​ನಲ್ಲಿ ಸ್ಟೇಟಸ್ ಹಾಕಿರುವುದು ಬೆಚ್ಚಿ ಬೀಳಿಸುವಂತೆ ಮಾಡಿದೆ.

police-case-filed-against-14-year-old-school-boy-for-objectionable-instagram-post
13ರ ಬಾಲೆ ಬಗ್ಗೆ ಇನ್‌ಸ್ಟಾಗ್ರಾಮ್​ನಲ್ಲಿ ಸ್ಟೇಟಸ್: 14 ವರ್ಷದ ಬಾಲಕ ವಿರುದ್ಧ ಪೋಕ್ಸೋ ಕೇಸ್​
author img

By

Published : Nov 23, 2022, 4:07 PM IST

ಪುಣೆ (ಮಹಾರಾಷ್ಟ್ರ): ಬಾಲಕಿಯ ವಿಚಾರವಾಗಿ ಇನ್‌ಸ್ಟಾಗ್ರಾಮ್​ ಖಾತೆಯಲ್ಲಿ ಸ್ಟೇಟಸ್ ಹಾಕಿದ್ದ 14 ವರ್ಷದ ಬಾಲಕನ ವಿರುದ್ಧ ಪೋಕ್ಸೋ ಮತ್ತು ಕಿರುಕುಳ ಆರೋಪದಡಿ ಮಹಾರಾಷ್ಟ್ರದ ಪುಣೆ ಪೊಲೀಸರು ಕೇಸ್​ ದಾಖಲಿಸಿದ್ದಾರೆ. ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಾಗಿದೆ.

ಇಲ್ಲಿನ ಹಡಪ್ಸರ್ ಪ್ರದೇಶದ ಪ್ರತಿಷ್ಠಿತ ಶಾಲೆಯಲ್ಲಿ 13 ವರ್ಷದ ಬಾಲಕಿ ಮತ್ತು ಆರೋಪಿ ಬಾಲಕ ಓದುತ್ತಿದ್ದಾರೆ. ಇತ್ತೀಚೆಗೆ ಬಾಲಕಿಯ ಫೋಟೋವೊಂದು ತೆಗೆದುಕೊಂಡು ಆರೋಪಿ ಬಾಲಕ 'ನೀನು ನನ್ನ ಹೆಂಡತಿಯಾಗಬಹುದೇ' (Will you be my wife) ಎಂದು ಇನ್‌ಸ್ಟಾಗ್ರಾಮ್​ ಖಾತೆಯಲ್ಲಿ ಸ್ಟೇಟಸ್ ಹಾಕಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ಬಾಲಕಿಯ ತಾಯಿ ಬಾಲಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಬಾಲಕ ಮತ್ತು ಬಾಲಕಿ ಇಬ್ಬರೂ ಒಂದೇ ಶಾಲೆ ಮತ್ತು ಒಂದೇ ಪ್ರದೇಶದವರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಆರೋಪಿ ಬಾಲಕನು ಬಾಲಕಿಯನ್ನು ಬೆನ್ನತ್ತಿದ್ದ. ಅಲ್ಲದೇ, ತನ್ನೊಂದಿಗೆ ಸ್ನೇಹ ಮಾಡಬೇಕು. ಇಲ್ಲದಿದ್ದರೆ, ಎತ್ತಿಕೊಂಡು ಹೋಗುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದ. ಆದರೆ, ಇದನ್ನು ಬಾಲಕಿ ನಿರ್ಲಕ್ಷಿಸುತ್ತಿದ್ದಳು ಎಂದು ಬಾಲಕಿಯ ತಾಯಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸದ್ಯ ಸಂತ್ರಸ್ತ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಬಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ತರಕಾರಿ ಖರೀದಿಗೆ ಹೋಗಿದ್ದ ಮಾಜಿ ಸಚಿವರ ಪುತ್ರಿಯ ಅಪಹರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.