ETV Bharat / bharat

ಗುಲಾಂ ನಬಿ ಆಜಾದ್​ಗೆ ಕಣ್ಣೀರಿನ ವಿದಾಯ ಹೇಳಿದ ಪ್ರಧಾನಿ ಮೋದಿ! - ಗುಲಾಂ​ ನಬಿ ಆಜಾದ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕಣ್ಣೀರಿನ ವಿದಾಯ

ರಾಜ್ಯಸಭೆಯಲ್ಲಿ ಗುಲಾಂ ನಬಿ ಆಜಾದ್ ಬಗ್ಗೆ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಭಾವುಕರಾದರು.

PM tears up bidding farewell to Ghulam Nabi Azad
ಗುಲಾಂ ನಬಿ ಆಜಾದ್​ಗೆ ಕಣ್ಣೀರಿನ ವಿದಾಯ ಹೇಳಿದ ಪ್ರಧಾನಿ ಮೋದಿ
author img

By

Published : Feb 9, 2021, 11:46 AM IST

ನವದೆಹಲಿ: ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಂ​ ನಬಿ ಆಜಾದ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕಣ್ಣೀರಿನ ವಿದಾಯ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ನಾಲ್ವರು ಸದಸ್ಯರಾದ ಗುಲಾಂ ನಬಿ ಆಜಾದ್, ಮೀರ್ ಮೊಹಮ್ಮದ್ ಫಯಾಜ್, ಶಮ್ಸರ್ ಸಿಂಗ್ ಮತ್ತು ನಜೀರ್ ಅಹ್ಮದ್ ಲಾವೆ ಅವರ ಅವಧಿ ಮುಕ್ತಾಯ ಹಿನ್ನೆಲೆ ಇವರಿಗೆಲ್ಲ ಪಿಎಂ ಮೋದಿ ವಿದಾಯ ಹೇಳಿದರು. ತಮ್ಮ ಜನರಿಗಾಗಿ ಇವರು ಮಾಡಿರುವ ಸೇವೆಗೆ ರಾಷ್ಟ್ರವು ಧನ್ಯವಾದಗಳನ್ನು ಅರ್ಪಿಸುತ್ತಿದೆ ಎಂದು ಹೇಳಿದರು.

ಭಾವುಕರಾದ ಪ್ರಧಾನಿ ನರೇಂದ್ರ ಮೋದಿ

ಗುಲಾಂ ನಬಿ ಆಜಾದ್ ಬಗ್ಗೆ ಮಾತನಾಡುವಾಗ ಭಾವುಕರಾದ ಪ್ರಧಾನಿ, ಗುಲಾಂ ನಬಿ ಜೀ ಅವರ ಸ್ಥಾನವನ್ನು (ಪ್ರತಿಪಕ್ಷದ ನಾಯಕ) ತುಂಬುವ ವ್ಯಕ್ತಿಯು ಇವರ ಕಾರ್ಯವನ್ನು ಸರಿದೂಗಿಸಲು ಕಷ್ಟವಾಗುತ್ತದೆ. ಏಕೆಂದರೆ ನಬಿ ಅವರು ಕೇವಲ ತಮ್ಮ ಪಕ್ಷದ ಪರವಾಗಿ, ಪಕ್ಷಕ್ಕೋಸ್ಕರ ಕೆಲಸ ಮಾಡಲಿಲ್ಲ. ದೇಶ ಹಾಗೂ ಸದನದ ಬಗ್ಗೆಯೂ ಕಾಳಜಿ ವಹಿಸಿದ್ದರು. ಸರ್ಕಾರದ ಎಲ್ಲ ಸಚಿವಾಲಯಗಳು ಮತ್ತು ಸಮಿತಿಗಳಲ್ಲಿ ಕೆಲಸ ಮಾಡಿದ ನಬಿಯವರ 28 ವರ್ಷಗಳ ಅನುಭವವನ್ನು ಹೊಂದಿಸುವುದು ಕಷ್ಟ ಎಂದರು.

ಗುಲಾಂ ನಬಿ ಅವರ ಕಾರ್ಯವೈಖರಿ ಶ್ಲಾಘಿಸಿದ ಮೋದಿ, ಸ್ನೇಹಿತನ ರೂಪದಲ್ಲಿ ಗುಲಾಂರನ್ನ ಗೌರವಿಸುತ್ತೇನೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.