ETV Bharat / bharat

ಕಾಶಿ ಯಾತ್ರೆ ಮುಗಿಸಿ ರಾಜಧಾನಿಗೆ ಹಿಂದಿರುಗಿದ ಪ್ರಧಾನಿ

ಕಾಶಿ ಕಾರಿಡಾರ್​ ಉದ್ಘಾಟನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಅವರ 2 ದಿನಗಳ ಉತ್ತರಪ್ರದೇಶ ಪ್ರವಾಸ ಇಂದು(ಮಂಗಳವಾರ) ಕೊನೆಗೊಂಡಿದೆ.

PM winds up
ಪ್ರಧಾನಿ ಮೋದಿ
author img

By

Published : Dec 14, 2021, 9:25 PM IST

ಉಮ್ರಾಹಾ(ಉತ್ತರ ಪ್ರದೇಶ): ಕಾಶಿ ಕಾರಿಡಾರ್​ ಉದ್ಘಾಟನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಅವರ 2 ದಿನಗಳ ಉತ್ತರಪ್ರದೇಶ ಪ್ರವಾಸ ಇಂದು(ಮಂಗಳವಾರ) ಕೊನೆಗೊಂಡಿದೆ.

ಇದಕ್ಕೂ ಮುನ್ನ ಉಮ್ರಾಹಾದಲ್ಲಿನ ಸದ್ಗುರು ಸದಾಫಲ್ದಿಯೋ ವಿಹಂಗಮ ಯೋಗ ಸಂಸ್ಥಾನದ 98ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ, ಸ್ವದೇಶಿ ಚಳವಳಿಯ ಮಾದರಿಯಲ್ಲಿ ಈಗ 'ಆತ್ಮ ನಿರ್ಭರ್​ ಭಾರತ' ಕಟ್ಟಲಾಗುತ್ತಿದೆ. ನಮ್ಮ ರಾಷ್ಟ್ರ ಅದ್ಭುತವಾಗಿದೆ. ದೇಶ ಸಂಕಷ್ಟ ಸಮಯ ಎದುರಿಸಿದಾಗ ಮಹಾಮಹಿಮರ ಮಂತ್ರೋಪದೇಶಗಳು ಇದಕ್ಕೆ ದಾರಿ ತೋರಿವೆ. ಇದು ದೇಶದ ನಿಜವಾದ ಸತ್ವವಾಗಿದೆ ಎಂದರು.

ಇದೀಗ ದೇಶವು ಎಲ್ಲರ ವಿಕಾಸ ಮಂತ್ರದೊಂದಿಗೆ ಮುನ್ನಡೆಯುತ್ತಿದೆ. ದೇಶದ ಯುವಕರು ಸಂತರು ಸಿದ್ಧಾಂತಗಳಿಂದ ಪ್ರೇರೇಪಿತರಾಗಿದ್ದಾರೆ. ಯೋಗದ ಶಕ್ತಿಯನ್ನು ಜಗತ್ತು ಅರಿತುಕೊಂಡಿದೆ. ನವ ಭಾರತದ ಕನಸುಗಳನ್ನು ನನಸಾಗಿಸಲು ಇದು ನೆರವಾಗಿದೆ ಎಂದು ಮೋದಿ ಹೇಳಿದರು.

ಪವಿತ್ರ ಕಾಶಿಯ ಶಕ್ತಿಯು ಅಖಂಡ ಮತ್ತು ವಿಸ್ತಾರವಾಗಿದೆ. ವಾರಾಣಸಿಯ ಅಭಿವೃದ್ಧಿಯು ಭಾರತದ ಅಭಿವೃದ್ಧಿಗೆ ಮಾರ್ಗಸೂಚಿಯಾಗಲಿದೆ. ಕಾಶಿ ಇಂದು ಬದಲಾದ ರೀತಿ ಅಂಥದ್ದು. ಕಾಶಿ ಕಾರಿಡಾರ್​ ದಾಖಲೆ ಸಮಯದಲ್ಲಿ ನಿರ್ಮಾಣವಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದರು.

ಇದನ್ನೂ ಓದಿ: ಸಿಬಿಐ, ಇಡಿ ನಿರ್ದೇಶಕರ ಅಧಿಕಾರಾವಧಿ ವಿಸ್ತರಣಾ ಮಸೂದೆಗೆ ರಾಜ್ಯಸಭೆ ಅಂಗೀಕಾರ

ಮಹಿಳೆಯರ ಕೌಶಲ್ಯಗಳ ಅಭಿವೃದ್ಧಿ, ಗಂಗಾ ನದಿಯನ್ನು ಸ್ವಚ್ಛವಾಗಿಡಲು ಒತ್ತು, ಸಾವಯವ ಕೃಷಿಗೆ ವಾಪಸ್​, ದೇಶಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳದ ಬಗ್ಗೆ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.