ನವದೆಹಲಿ: ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಇಂಡಿಯಾ ಎನರ್ಜಿ ವೀಕ್‌ನಲ್ಲಿ ಉಡುಗೊರೆಯಾಗಿ ನೀಡಲಾಗಿದ್ದ ಮರುಬಳಕೆಯ ಪ್ಲಾಸ್ಟಿಕ್ ಬಾಟಲಿಗಳಿಂದ ತಯಾರಿಸಿದ 'ಸದ್ರಿ' ಜಾಕೆಟ್ ಅನ್ನು ಇಂದು ಪ್ರಧಾನಿ ಮೋದಿ ಧರಿಸಿ ಸಂಸತ್ತಿಗೆ ಬಂದಿದ್ದಾರೆ. ತಿಳಿ ನೀಲಿ ಬಣ್ಣದ ಜಾಕೆಟ್ ಧರಿಸಿದ ಅವರು ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯ ಕಲಾಪದಲ್ಲಿ ಪಾಲ್ಗೊಂಡಿದ್ದಾರೆ.
ಇಂಡಿಯನ್ ಆಯಿಲ್ ಕಾರ್ಪೊರೇಶನ್ ಪ್ಲಾಸ್ಟಿಕ್ ಬಾಟಲಿಗಳ ಮರು ಬಳಕೆ ಮಾಡಿ ಸಾಕಷ್ಟು ಜಾಕೆಟ್ಗಳನ್ನು ತಯಾರಿಸಿದೆ. ಫೆ.6ರಂದು ಇಂಡಿಯಾ ಎನರ್ಜಿ ವೀಕ್‌ನಲ್ಲಿ ಪ್ರಧಾನಿ ಅವರಿಗೆ ಈ ಜಾಕೆಟ್ ಉಡುಗೊರೆಯಾಗಿ ನೀಡಲಾಗಿತ್ತು. ಈ ಇಂಧನ ಸಪ್ತಾಹವು ಇಂಧನ ಕ್ಷೇತ್ರದಲ್ಲಿ ಭಾರತದಲ್ಲಾಗುತ್ತಿರುವ ಗಮನಾರ್ಹ ಬದಲಾವಣೆಯನ್ನು ಜಗತ್ತಿಗೆ ತೋರಿಸುವ ಗುರಿ ಹೊಂದಿದೆ. ಈ ಸಪ್ತಾಹ ವೀಕ್ಷಿಸಲು ಬರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತು ಭಾರತೀಯ ಸೇನೆಯ ಸಿಬ್ಬಂದಿಗೆ ಹತ್ತು ಸಾವಿರಕ್ಕೂ ಹೆಚ್ಚು ಉಡುಪುಗಳನ್ನು ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಇಂಡಿಯನ್ ಎನರ್ಜಿ ವೀಕ್-2023 ಉದ್ಘಾಟಿಸಿದ ಪ್ರಧಾನಿ : ಹಸಿರು ಇಂಧನ ಕ್ಷೇತ್ರದಲ್ಲಿ ಬಹುಹಂತದ ಉಪಕ್ರಮಗಳಿಗೆ ಚಾಲನೆ
3 ಲಕ್ಷ ಸಿಬ್ಬಂದಿಗೆ ಸಮವಸ್ತ್ರ: ತೈಲ ಕಂಪನಿಯು ಮುಂಚೂಣಿಯ ಕಾರ್ಮಿಕರಿಗೆ ಸಮವಸ್ತ್ರಗಳನ್ನು ತಯಾರಿಸಲು 20 ಮಿಲಿಯನ್ ಹಳೆ ಪಿಇಟಿ ಬಾಟಲಿಗಳನ್ನು ಮರುಬಳಕೆ ಮಾಡಲು ನಿರ್ಧರಿಸಿದೆ. ಕಳೆದ ನವೆಂಬರ್‌ನಲ್ಲಿ 'ಅನ್‌ಬಾಟಲ್ಡ್ - ಟುವರ್ಡ್ಸ್ ಎ ಗ್ರೀನರ್ ಫ್ಯೂಚರ್ (Unbottled - Towards a Greener Future) ಎಂಬ ಕಾರ್ಯಕ್ರಮ ಆರಂಭಿಸಿದೆ. ಸುಮಾರು 3 ಲಕ್ಷ ಇಂಡಿಯನ್ ಆಯಿಲ್ ಪೆಟ್ರೋಲ್ ಮತ್ತು ಡೀಸೆಲ್ ಪಂಪ್ಗಳ ಅಟೆಂಡೆಂಟ್‌ಗಳು ಮತ್ತು ಇಂಡೇನ್ ಎಲ್‌ಪಿಜಿ ಗ್ಯಾಸ್ ವಿತರಣಾ ಸಿಬ್ಬಂದಿಗೆ ಪ್ರತ್ಯೇಕವಾಗಿ ಸಮವಸ್ತ್ರವನ್ನು ವಿನ್ಯಾಸಗೊಳಿಸಲು ನಿರ್ಧರಿಸಿದೆ ಎಂದು ಮಾಹಿತಿ ನೀಡಿದ್ದಾರೆ.
405 ಟನ್ ಬಾಟಲಿಗಳ ಮರುಬಳಕೆ: ಬಳಸಿದ ಮತ್ತು ಹಳೆ ಪಿಇಟಿ ಬಾಟಲಿಗಳ ಸಂಸ್ಕರಣೆಯಿಂದ ಪಡೆದ ಮರುಬಳಕೆಯ ಪಾಲಿಸ್ಟರ್‌ನಿಂದ ಉಡುಗೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದರಿಂದ ಸುಮಾರು 405 ಟನ್‌ಗಳಷ್ಟು ಬಾಟಲಿಗಳನ್ನು ಮರುಬಳಕೆ ಮಾಡಿದಂತಾಗಲಿದೆ. ಇಷ್ಟೇ ಅಲ್ಲ, ಇದು ವಾರ್ಷಿಕವಾಗಿ 20 ಮಿಲಿಯನ್ ಬಾಟಲಿಗಳನ್ನು ಸರಿದೂಗಿಸಲು ಸಮಾನವಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಈ ಜಾಕೆಟ್ ಧರಿಸಿರುವುದು ಸಾಕಷ್ಟು ಮಹತ್ವ ಪಡೆದಿದೆ ಎಂದು ಇಂಡಿಯನ್ ಆಯಿಲ್ ಅಧಿಕಾರಿಗಳು ಹೇಳಿದ್ದಾರೆ.
-
Yesterday, in Bengaluru during #IndiaEnergyWeek, Indian Oil Corporation presented @PMOIndia a waistcoat made by using single use plastic bottles.
— Nirmala Sitharaman (@nsitharaman) February 8, 2023 " class="align-text-top noRightClick twitterSection" data="
PM @narendramodi participated in today’s Rajya Sabha discussions wearing this blue coloured waistcoat. #LiFE pic.twitter.com/uyC0Fmxv8F
">Yesterday, in Bengaluru during #IndiaEnergyWeek, Indian Oil Corporation presented @PMOIndia a waistcoat made by using single use plastic bottles.
— Nirmala Sitharaman (@nsitharaman) February 8, 2023
PM @narendramodi participated in today’s Rajya Sabha discussions wearing this blue coloured waistcoat. #LiFE pic.twitter.com/uyC0Fmxv8FYesterday, in Bengaluru during #IndiaEnergyWeek, Indian Oil Corporation presented @PMOIndia a waistcoat made by using single use plastic bottles.
— Nirmala Sitharaman (@nsitharaman) February 8, 2023
PM @narendramodi participated in today’s Rajya Sabha discussions wearing this blue coloured waistcoat. #LiFE pic.twitter.com/uyC0Fmxv8F
ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್: ಮತ್ತೊಂದೆಡೆ, ಸರ್ಕಾರವು ಗ್ರೀನ್ ಎನರ್ಜಿಯನ್ನು ಸಾಕಷ್ಟು ಉತ್ತೇಜಿಸುತ್ತಿದೆ. ಈ ವರ್ಷದ ಬಜೆಟ್‌ನಲ್ಲಿ 19,700 ಕೋಟಿ ರೂ ವೆಚ್ಚದಲ್ಲಿ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಪ್ರಾರಂಭಿಸಿದೆ. ಇದರಿಂದ ಕಡಿಮೆ ಇಂಗಾಲದ ತೀವ್ರತೆ ಸುಗಮಗೊಳಿಸುತ್ತದೆ. ಇಂಧನ ಆಮದು ಮೇಲಿನ ಅವಲಂಬನೆ ಕಡಿಮೆ ಮಾಡುತ್ತದೆ. ಜೊತೆಗೆ ದೇಶವು ಇಂಧನ ವಲಯದಲ್ಲಿ ತಂತ್ರಜ್ಞಾನ ಮತ್ತು ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುವಂತೆ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಜಾಗತಿಕ ಉದ್ಯಮಿಗಳು ಹಸಿರು ಇಂಧನ ಅನ್ವೇಷಣೆಯಲ್ಲಿ ತೊಡಗಿಕೊಳ್ಳಿ: ಮೋದಿ ಕರೆ