ETV Bharat / bharat

’ಮೋದಿ ಅಮೆರಿಕ​ ಪ್ರವಾಸ ಉದ್ಯಮಶೀಲತೆಗೆ ಸುವರ್ಣ ಅವಕಾಶ’.. ಇಂದು ಯುಎಸ್​​ಗೆ ಪ್ರಧಾನಿ - ಆ್ಯಪಲ್​ ಸಂಸ್ಥೆ ಮುಖ್ಯಸ್ಥ ಟಿಮ್​ ಕುಕ್​

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ ಎಂದು ಇಂಡಿಯಾಸ್ಪೊರಾ ಸಂಸ್ಥಾಪಕ ಎಂ.ಆರ್.ರಂಗಸ್ವಾಮಿ ಹೇಳಿದ್ದಾರೆ.

Indian American
ಯುಎಸ್​​ಗೆ ಪ್ರಧಾನಿ
author img

By

Published : Sep 22, 2021, 6:36 AM IST

ವಾಷಿಂಗ್ಟನ್: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಡಳಿತದಿಂದ ಭಾರತವು ವಿಶ್ವದಲ್ಲಿ ಪ್ರಬಲ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಖ್ಯಾತ ಇಂಡೋ ಅಮೆರಿಕನ್, ಇಂಡಿಯಾಸ್ಪೊರಾ ಸಂಸ್ಥಾಪಕ ಎಂ.ಆರ್.ರಂಗಸ್ವಾಮಿ ಹೇಳಿದ್ದಾರೆ.

ಭಾರತದ ಆರ್ಥಿಕತೆಯು ವೇಗ ಪಡೆದಿಯುತ್ತಿರುವ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಮೆರಿಕ ಭೇಟಿಯು ಹೆಚ್ಚಿನ ಶಕ್ತಿಯನ್ನು ತುಂಬಿದೆ ಎಂದು ಅವರು ಹೇಳಿದ್ದಾರೆ.

ಸಿಲಿಕಾನ್​ ವ್ಯಾಲಿ ಮೂಲದ ರಂಗಸ್ವಾಮಿಯವರು, ಕಂಪನಿಗಳು ಕೇವಲ ಹೂಡಿಕೆ ತಾಣವಾಗಿ ನೋಡುತ್ತಿಲ್ಲ. ಆದರೆ, ಹೆಚ್ಚಿನ ಸಂಖ್ಯೆಯ ಭಾರತೀಯ ಸ್ಟಾರ್ಟಪ್‌ಗಳು ಯೂನಿಕಾರ್ನ್‌ಗಳಾಗಿ ಬದಲಾಗುತ್ತಿವೆ ಎಂದು ಹೇಳಿದರು.

ಭಾರತದ ಆರ್ಥಿಕತೆಯು ಪ್ರವರ್ಧಮಾನಕ್ಕೆ ಬರಲು ಆರಂಭಿಸಿದೆ. ಇದು ಎರಡು ವರ್ಷಗಳ ಹಿಂದೆ ಇದ್ದಿದ್ದಕ್ಕಿಂತ ತೀರಾ ಬದಲಾಗಿದೆ. ಭಾರತದ ಆರ್ಥಿಕ ಶಕ್ತಿ ಈಗ ರೂಪುಗೊಳ್ಳುತ್ತಿದೆ. ಇದು ಭಾರತದಲ್ಲಿ ಉದ್ಯಮಶೀಲತೆಗೆ ಸುವರ್ಣ ದಶಕವಾಗಲಿದೆ ಎಂದು ಪುನರುಚ್ಚರಿಸಿದರು.

ಅಧ್ಯಕ್ಷ ಜೋ ಬೈಡೆನ್ ಅವರೊಂದಿಗಿನ ದ್ವಿಪಕ್ಷೀಯ ಸಭೆ ಮತ್ತು ಐತಿಹಾಸಿಕ ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ಇಂದಿನಿಂದ ಮೂರು ದಿನಗಳ ಕಾಲ ಯುಎಸ್ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಯುಎಸ್​ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​, ಆ್ಯಪಲ್​ ಸಂಸ್ಥೆ ಮುಖ್ಯಸ್ಥ ಟಿಮ್​ ಕುಕ್​ ಸೇರಿದಂತೆ ಹಲವು ಗಣ್ಯರನ್ನು ಭೇಟಿ ಮಾಡುವ ಸಾಧ್ಯತೆಯಿದೆ.

ಅಷ್ಟೇ ಅಲ್ಲದೆ ಈ ಸಭೆಯ ಬಳಿಕ ಶನಿವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಲು ಮೋದಿ ನ್ಯೂಯಾರ್ಕ್‌ಗೆ ತೆರಳಲಿದ್ದಾರೆ.

ಇನ್ನು ಈ ಭೇಟಿಯ ಬಗ್ಗೆ ಮಾತನಾಡಿದ ದಕ್ಷಿಣ ಏಷ್ಯಾ ಸಮುದಾಯದ ನಾಯಕ ಅಜಯ್ ಭೂತೋರಿಯಾ, " ಈ ಸಭೆಯು ಭಾರತ ಯುಎಸ್ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಲಿದೆ" ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.