ETV Bharat / bharat

ಶತಮಾನೋತ್ಸವ ಸಂಭ್ರಮದ ಹೊಸ್ತಿಲಲ್ಲಿ ಲಖನೌ ವಿಶ್ವವಿದ್ಯಾಲಯ; ಪ್ರಧಾನಿ ಮೋದಿ ಭಾಗಿ - ಪ್ರಧಾನಿ ನರೇಂದ್ರ ಮೋದಿ ಸುದ್ದಿಗಳು

ಶತಮಾನೋತ್ಸವ ಆಚಸಿಕೊಳ್ಳಲಿರುವ ಲಖನೌ ವಿಶ್ವವಿದ್ಯಾಲಯದ ಕಾರ್ಯಕ್ರದಮಲ್ಲಿ ಭಾಗಿಯಾಗಲಿರುವ ಪ್ರಧಾನಿ ನರೇಂದ್ರ ಮೋದಿ ಅದರ ಸ್ಮರಣಾರ್ಥ ಹೊಸ ನಾಣ್ಯಗಳ ಜೊತೆಗೆ ಅಂಚೆ ಚೀಟಿ ಮತ್ತು ಅದರ ವಿಶೇಷ ಕವರ್ ಅನ್ನು ಬಿಡುಗಡೆ ಮಾಡಲಿದ್ದಾರೆ..

PM Modi to attend centennial foundation day celebration of Lucknow University on November 25
ಪ್ರಧಾನಿ ನರೇಂದ್ರ ಮೋದಿ
author img

By

Published : Nov 23, 2020, 5:51 PM IST

ನವದೆಹಲಿ : ಇದೇ ನವೆಂಬರ್​ 25 ರಂದು ಲಖನೌ ವಿಶ್ವವಿದ್ಯಾಲಯವು ಶತಮಾನೋತ್ಸವ ಆಚಸಿಕೊಳ್ಳಲಿದ್ದು ವಿಡಿಯೋ ಕಾನ್ಫರೆನ್ಸ್​ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎಂದು ಪ್ರಧಾನಿ ಕಚೇರಿಯು (ಪಿಎಂಒ) ಸೋಮವಾರ ತನ್ನ ಅಧಿಕೃತ ಹೇಳಿಕೆ ತಿಳಿಸಿದೆ.

ನ. 25 ರಂದು ಸಂಜೆ 5:30ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಶತಮಾನೋತ್ಸವದ ಸ್ಮರಣಾರ್ಥ ಹೊಸ ನಾಣ್ಯವನ್ನು ಅವರು ಅನಾವರಣಗೊಳಿಸಲಿದ್ದಾರೆ ಎಂದು ಪಿಎಂಒ ತಿಳಿಸಿದೆ.

1920ರಲ್ಲಿ ಸ್ಥಾಪಿಸಲಾಗಿರುವ ಈ ವಿಶ್ವವಿದ್ಯಾಲಯವು ನವೆಂಬರ್​ 25ಕ್ಕೆ 100 ವರ್ಷ ತುಂಬಲಿದೆ. ಹಾಗಾಗಿ ಅದರ 100ನೇ ವರ್ಷದ ಸ್ಮರಣಾರ್ಥ ಪ್ರಧಾನಿ ಮೋದಿ, ನಾಣ್ಯಗಳ ಜೊತೆಗೆ ಅಂಚೆ ಚೀಟಿ ಮತ್ತು ಅದರ ವಿಶೇಷ ಕವರ್ ಅನ್ನು ಬಿಡುಗಡೆ ಮಾಡಲಿದ್ದಾರೆ.

ಈ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶದ ಗವರ್ನರ್ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿರಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.