ನಾಸ್ಕೋಂ ಸಮಾವೇಶ ಉದ್ದೇಶಿಸಿ ಬುಧವಾರ ಪ್ರಧಾನಿ ಮೋದಿ ಭಾಷಣ - ಭವಿಷ್ಯವನ್ನು ಸಾಮಾನ್ಯ ಉತ್ತಮ ಸ್ಥಿತಿಗೆ ರೂಪಿಸುವುದು’
ಮೂರು ದಿನಗಳ ಕಾಲ ನಡೆಯಲಿರುವ ಸಮಾವೇಶದಲ್ಲಿ ಮೋದಿ ಮಧ್ಯಾಹ್ನ 12.30ಕ್ಕೆ ಭಾಷಣ ಮಾಡಲಿದ್ದಾರೆ. 29ನೇ ಎನ್‌ಟಿಎಲ್‌ಎಫ್ ಸಮಾವೇಶವು ಫೆ17ಕ್ಕೆ ಆರಂಭವಾಗಲಿದ್ದು, 19ರಂದು ಸಮಾಪ್ತಿಗೊಳ್ಳಲಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇದೇ ಬುಧವಾರದಂದು ನಾಸ್ಕೋಂ (ರಾಷ್ಟ್ರೀಯ ಸಾಫ್ಟ್ವೇರ್ ಮತ್ತಯ ಸೇವಾ ಕಂಪನಿಗಳ ಸಂಘ) ತಂತ್ರಜ್ಞಾನ ಮತ್ತು ನಾಯಕತ್ವ ವೇದಿಕೆ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲಿದ್ದಾರೆ.
ಮೂರು ದಿನಗಳ ಕಾಳ ನಡೆಯಲಿರುವ ಸಮಾವೇಶದಲ್ಲಿ ಮೋದಿ ಮಧ್ಯಾಹ್ನ 12.30ಕ್ಕೆ ಭಾಷಣ ನೆರವೇರಿಸಲಿದ್ದಾರೆ. 29ನೇ ಎನ್‌ಟಿಎಲ್‌ಎಫ್ ಸಮಾವೇಶವು ಫೆ17ಕ್ಕೆ ಆರಂಭವಾಗಲಿದ್ದು 19ರಂದು ಸಮಾಪ್ತಿಗೊಳ್ಳಲಿದೆ.
ಈ ವರ್ಷದ ಈವೆಂಟ್ನ ಥೀಮ್ ‘ಭವಿಷ್ಯವನ್ನು ಸಾಮಾನ್ಯ ಉತ್ತಮ ಸ್ಥಿತಿಗೆ ರೂಪಿಸುವುದು’ ಎಂಬುದಾಗಿದೆ. 30 ಉತ್ಪನ್ನಗಳ ಪ್ರದರ್ಶನವಿದ್ದು, 30 ದೇಶದ ಒಟ್ಟು 1,600 ಸ್ಪರ್ಧಿಗಳು ಭಾಗಿಯಾಗಲಿದ್ದಾರೆ.
ಎನ್‌ಟಿಎಲ್‌ಎಫ್ ಪ್ರಕಾರ, ಇದು 190 ಬಿಲಿಯನ್ ಡಾಲರ್ ಉದ್ಯಮ ವ್ಯವಸ್ಥೆಗೆ ನಾಂದಿಯಾಗಲಿದೆ. ಎನ್‌ಟಿಎಲ್‌ಎಫ್ 2021 ಮೂರು ಪ್ರಮುಖ ಉದ್ದೇಶಗಳನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ವ್ಯವಹಾರಗಳನ್ನು ಹೆಚ್ಚಿಸಲು ಬೆನ್ನೆಲುಬಾಗಿ ಕಾರ್ಯನಿರ್ವಹಿಸಿರುವ ತಂತ್ರಜ್ಞಾನದ ಬಳಕೆ ಗುರುತಿಸಿ, ಭವಿಷ್ಯದತ್ತ ಮುನ್ನಡೆಯಲು ಮಾರ್ಗಸೂಚಿಯನ್ನು ರಚಿಸಿ ಉತ್ತಮ ಭವಿಷ್ಯ ಮತ್ತು ಈ ಹೈಪರ್ ವರ್ಚುಯಲ್ ಜಗತ್ತಿನ ನಂಬಿಕೆ ಮತ್ತು ಜವಾಬ್ದಾರಿಯ ಮಹತ್ವವನ್ನು ಹೊರತರಲು ಮುಂದಾಗಿದೆ.
ಇದನ್ನೂ ಓದಿ: 'ಔರ್ ಯಹ್ ಹಮಾರಿ ಪಾವ್ರಿ ಹೋರಿಹೇ..' : ಬ್ರಾಂಡ್ಗಳಿಗೂ ಸ್ಫೂರ್ತಿಯಾಯ್ತು..!