ETV Bharat / bharat

ಪಿ.ವಿ. ಸಿಂಧು ಭಾರತದ ಹೆಮ್ಮೆ.. ಬ್ಯಾಡ್ಮಿಂಟನ್ ತಾರೆ ಶ್ಲಾಘಿಸಿದ ಮೋದಿ

ಪಿ.ವಿ.ಸಿಂಧು ಭಾರತದ ಹೆಮ್ಮೆ. ಅವರ ಅದ್ಭುತ ಬ್ಯಾಡ್ಮಿಂಟನ್ ಆಟದಿಂದ ನಾವೆಲ್ಲರೂ ಹರ್ಷಗೊಂಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಮೋದಿ
ಮೋದಿ
author img

By

Published : Aug 1, 2021, 7:14 PM IST

Updated : Aug 1, 2021, 7:19 PM IST

ಹೈದರಾಬಾದ್​: ಟೋಕಿಯೊ ಒಲಿಂಪಿಕ್ಸ್​ನಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಚೀನಾದ ಹೀ ಬಿಂಗ್ ಜಿಯಾವೊ ಅವರನ್ನು ಮಣಿಸಿ ಕಂಚಿನ ಪದಕ ಪಡೆದಿದ್ದಾರೆ. ಸಿಂಧುವಿನ ಈ ಸಾಧನೆಗೆ ಪ್ರಧಾನಿ ಮೋದಿ ಸೇರಿದಂತೆ ದೇಶದ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಪಿ.ವಿ.ಸಿಂಧು ಭಾರತದ ಹೆಮ್ಮೆ. ಅವರ ಅದ್ಭುತ ಬ್ಯಾಡ್ಮಿಂಟನ್ ಆಟದಿಂದ ನಾವೆಲ್ಲರೂ ಹರ್ಷಗೊಂಡಿದ್ದೇವೆ. ಟೋಕಿಯೊ 2020 ರಲ್ಲಿ ಕಂಚು ಗೆದ್ದಿದ್ದಕ್ಕೆ ಆಕೆಗೆ ಅಭಿನಂದನೆಗಳು ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪಿ.ವಿ.ಸಿಂಧು ಒಲಿಂಪಿಕ್ಸ್​​ನಲ್ಲಿ ಎರಡು ಪದಕ ಗೆದ್ದಿರುವ ಭಾರತದ ಮೊದಲ ಮಹಿಳೆ. ಇಂದಿನ ಪಂದ್ಯದಲ್ಲಿ ಅವರು ಕಂಚಿನ ಪದಕ ಗೆದ್ದಿದ್ದಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶ್ಲಾಘಿಸಿದ್ಧಾರೆ.

  • P V Sindhu becomes the first Indian woman to win medals in two Olympic games. She has set a new yardstick of consistency, dedication and excellence. My heartiest congratulations to her for bringing glory to India.

    — President of India (@rashtrapatibhvn) August 1, 2021 " class="align-text-top noRightClick twitterSection" data=" ">

ಇದನ್ನೂ ಓದಿ : Tokyo Olympics: ಕಂಚಿನ ಪದಕಕ್ಕೆ ಮುತ್ತಿಕ್ಕಿದ 'ಬೆಳ್ಳಿ ಹುಡುಗಿ' ಪಿ.ವಿ. ಸಿಂಧು

ಪಿ.ವಿ. ಸಿಂಧು ಗೆಲುವಿನ ನಂತರ ಮಾತನಾಡಿದ ಆಕೆಯ ತಂದೆ ಪಿ.ವಿ. ರಮಣ, ಸಿಂಧು ಪದಕ ಗೆದ್ದರೆ ನನ್ನ ಜತೆ ಐಸ್​ ಕ್ರೀಂ ತಿನ್ನಬಹುದು ಎಂದು ಪ್ರಧಾನಿ ಮೋದಿ ಹೇಳಿದ್ದರು. ಇದೀಗ ನನ್ನ ಮಗಳು ಪದಕ ಗೆದ್ದಿದ್ದು, ಮೋದಿ ಜತೆ ಐಸ್​ಕ್ರೀಂ ತಿನ್ನಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Last Updated : Aug 1, 2021, 7:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.