ETV Bharat / bharat

ತೆಲಂಗಾಣ: ಎಂಎಲ್​ಸಿ ಮತದಾರರ ಪಟ್ಟಿಯಲ್ಲಿ ಪಿಎಂ ಮೋದಿ ಫೋಟೊ!

ಮೋದಿಯವರ ಫೋಟೊ ಇದ್ದದ್ದಕ್ಕೆ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಸ್ಥಳೀಯ ಮುಖಂಡರು ಈ ವಿಷಯವನ್ನು ಜಿಲ್ಲಾ ಹೆಚ್ಚುವರಿ ಕಲೆಕ್ಟರ್ ಮೋತಿಲಾಲ್ ಅವರ ಗಮನಕ್ಕೆ ತಂದಿದ್ದಾರೆ.

author img

By

Published : Mar 15, 2021, 3:07 PM IST

PM  Modi photo in Telangana Graduate MLC voter list!
ಎಂಎಲ್​ಸಿ ಮತದಾರರ ಪಟ್ಟಿಯಲ್ಲಿ ಪಿಎಂ ಮೋದಿ ಫೋಟೋ!

ಹೈದರಾಬಾದ್​ : ತೆಲಂಗಾಣ ಪದವೀಧರ ಎಂಎಲ್‌ಸಿ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಪ್ರಧಾನಿ ಮೋದಿಯವರ ಫೋಟೊ ಕಾಣಿಸಿಕೊಂಡಿದೆ.

ವಿಕರಾಬಾದ್ ವಲಯದ ಪುಲುಸುಮಾಮಿಡಿ ಗ್ರಾಮದ ಪದವೀಧರರಾದ ದಯಾಕರ್ ರೆಡ್ಡಿ ಮತ ಚಲಾಯಿಸಲು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಅವರ ಮತವನ್ನು ಬೂತ್ ಸಂಖ್ಯೆ 307, ಸರಣಿ ಸಂಖ್ಯೆ 269 ರಲ್ಲಿ ದಾಖಲಿಸಲಾಗಿದೆ. ಆದರೆ ಪಟ್ಟಿಯಲ್ಲಿ ಅವರ ಫೋಟೊ ಬದಲು ಪ್ರಧಾನಿ ಮೋದಿ ಫೋಟೊ ಇದೆ. ಇನ್ನು ಈ ಫೋಟೊ ಎಡವಟ್ಟಿನಿಂದಾಗಿ ಮತ ಚಲಾಯಿಸಲು ಅಧಿಕಾರಿಗಳು ತನಗೆ ಅವಕಾಶ ನೀಡುವುದಿಲ್ಲ ಎಂದು ತಿಳಿದು ರೆಡ್ಡಿ ಮತಗಟ್ಟೆಗೆ ಆಗಮಿಸಿಲ್ಲ.

ಪ್ರಧಾನಿ ಮೋದಿಯವರ ಫೋಟೊ ಇದ್ದದ್ದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಸ್ಥಳೀಯ ಮುಖಂಡರು ಈ ವಿಷಯವನ್ನು ಜಿಲ್ಲಾ ಹೆಚ್ಚುವರಿ ಕಲೆಕ್ಟರ್ ಮೋತಿಲಾಲ್ ಅವರ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆ ಮತದಾರರ ಪಟ್ಟಿಯಲ್ಲಿರುವ ಫೋಟೊಗೆ ಹೆಸರು ಸಂಬಂಧಿಸಿಲ್ಲವಾದರೂ ಕೂಡ ಈ ಸಂಬಂಧ ಪುರಾವೆಗಳನ್ನು ತೋರಿಸಿದರೆ ಮತ ಚಲಾಯಿಸಲು ಅನುಮತಿಸಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.