ETV Bharat / bharat

ದೇಶ ವಿಭಜನೆ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಭಾರತೀಯರಿಗೆ ಪ್ರಧಾನಿ ಮೋದಿ ಶ್ರದ್ಧಾಂಜಲಿ - India independence day

Partition day: ದೇಶದ ಆಧುನಿಕ ಇತಿಹಾಸದಲ್ಲಿ ನೋವಿನ ಅಧ್ಯಾಯವಾದ ದೇಶ ವಿಭಜನೆಯ ಸಮಯದಲ್ಲಿ ಪ್ರಾಣ ಕಳೆದುಕೊಂಡ ಭಾರತೀಯರನ್ನು ನೆನಪಿಸಿಕೊಳ್ಳುವ ಸಂದರ್ಭವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಆ.14 ವಿಭಜನೆಯ ನಂತರ ಬಲವಂತವಾಗಿ ವಲಸೆ ಬಂದವರ ಸಂಕಷ್ಟಗಳು ಮತ್ತು ಹೋರಾಟಗಳ ಸ್ಮರಣೆಯಾಗಿ ಉಳಿಯುತ್ತದೆ ಎಂದು ಅವರು ಹೇಳಿದರು.

PM Modi
ಪ್ರಧಾನಿ ಮೋದಿ
author img

By

Published : Aug 14, 2023, 12:12 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭಾರತ ವಿಭಜನೆಯ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ದೇಶ ವಿಭಜನೆಯ ಕರಾಳ ನೆನಪಿನ ದಿನವಾದ ಇಂದು ಆ ಅವಧಿಯಲ್ಲಿ ಜನರು ಅನುಭವಿಸಿದ ನೋವುಗಳನ್ನು ಸ್ಮರಿಸಿದರು. ವಿಭಜನೆ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಭಾರತೀಯರನ್ನು ಸ್ಮರಿಸಿಕೊಳ್ಳುವ ಸಂದರ್ಭ ಇದಾಗಿದೆ ಎಂದು ಅವರು ಹೇಳಿದರು.

ದೇಶ ವಿಭಜನೆಯಲ್ಲಿ ಪ್ರಾಣ ತ್ಯಾಗ ಮಾಡಿದ ಭಾರತೀಯರನ್ನು ಪೂಜ್ಯಭಾವದಿಂದ ಸ್ಮರಿಸುವ ಸಂದರ್ಭವೇ ’ವಿಭಜನೆಯ ಸಂಸ್ಮರಣಾ ದಿನ'ವಾಗಿದೆ. ಇದರೊಂದಿಗೆ, ಈ ದಿನ ಸ್ಥಳಾಂತರದ ಭಾರವನ್ನು ಹೊರಲು ಒತ್ತಾಯಿಸಲ್ಪಟ್ಟವರ ನೋವು ಮತ್ತು ಹೋರಾಟವನ್ನು ನಮಗೆ ನೆನಪಿಸುತ್ತದೆ. ಅಂತಹ ಎಲ್ಲರಿಗೂ ನಾನು ನಮಸ್ಕರಿಸುತ್ತೇನೆ" ಎಂದು ಮೋದಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ ಮಾಡಿದ್ದಾರೆ.

  • विभाजन विभीषिका स्मृति दिवस उन भारतवासियों को श्रद्धापूर्वक स्मरण करने का अवसर है, जिनका जीवन देश के बंटवारे की बलि चढ़ गया। इसके साथ ही यह दिन उन लोगों के कष्ट और संघर्ष की भी याद दिलाता है, जिन्हें विस्थापन का दंश झेलने को मजबूर होना पड़ा। ऐसे सभी लोगों को मेरा शत-शत नमन।

    — Narendra Modi (@narendramodi) August 14, 2023 " class="align-text-top noRightClick twitterSection" data=" ">

'ವಿಭಜನೆಯ ಕರಾಳ ನೆನಪಿನ ದಿನ': 1947ರಲ್ಲಿ ಭಾರತವನ್ನು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಪ್ರತ್ಯೇಕ ರಾಷ್ಟ್ರಗಳಾಗಿ ವಿಭಜಿಸಲಾಯಿತು. ಈ ವಿಭಜನೆ ವ್ಯಾಪಕ ಕೋಮು ಹಿಂಸಾಚಾರ ಮತ್ತು ಸ್ಥಳಾಂತರಕ್ಕೆ ಕಾರಣವಾಯಿತು. ಜತೆಗೆ ಇದು ವಿವಿಧ ಸಮುದಾಯಗಳ ಸಾವಿರಾರು ಜನರ ಸಾವಿಗೂ ಕಾರಣವಾಗಿತ್ತು. ಈ ದಿನ ಬಲವಂತವಾಗಿ ವಲಸೆ ಬಂದವರ ಸಂಕಷ್ಟ ಮತ್ತು ಹೋರಾಟದ ಸ್ಮರಣಾರ್ಥವೂ ಆಗಿದೆ. ವಿಭಜನೆಯ ನಂತರ ಬಲವಂತವಾಗಿ ವಲಸೆ ಬಂದವರ ಸಂಕಷ್ಟಗಳು ಮತ್ತು ಹೋರಾಟಗಳನ್ನು ಆಗಸ್ಟ್​ 14 ನೆನಪಿಸುತ್ತದೆ. ದೇಶ ವಿಭಜನೆಯ ದಿನವಾದ ಆ.14 ಅನ್ನು, ಇನ್ನು ಮುಂದೆ 'ವಿಭಜನೆಯ ಕರಾಳ ನೆನಪಿನ ದಿನ'ವನ್ನಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ 2021ರಲ್ಲಿ ಘೋಷಿಸಿದ್ದರು.

ಅಂದಿನ ಸಂದರ್ಭವನ್ನು ಸ್ಮರಿಸಿದ ಪ್ರಧಾನಿ ಮೋದಿ 'ವಿಭಜನೆಯ ನೋವನ್ನು ಎಂದಿಗೂ ಮರೆಯಲಾಗದು. ತಿಳಿಗೇಡಿಗಳಿಂದ ಭುಗಿಲೆದ್ದ ಹಿಂಸಾಚಾರ, ದ್ವೇಷದಲ್ಲಿ ನಮ್ಮ ಲಕ್ಷಾಂತರ ಸೋದರ, ಸೋದರಿಯರು ಸ್ಥಳಾಂತರಗೊಳ್ಳಬೇಕಾಯಿತು. ಆ ಸಂದರ್ಭದಲ್ಲಿ ಅನೇಕರು ಪ್ರಾಣ ಕಳೆದುಕೊಂಡರು ಎಂದು ಹೇಳಿದ್ದರು.

ಅವರ ಹೋರಾಟ ಹಾಗೂ ತ್ಯಾಗದ ಸ್ಮರಣೆಗಾಗಿ ಆಚರಿಸುವ ಈ ದಿನ ಸಮಾಜ ವಿಭಜಿಸುವ, ಸಾಮರಸ್ಯವನ್ನು ಕದಡುವ ವಿಷವನ್ನು ತೆಗೆದುಹಾಕುವ ಅಗತ್ಯವನ್ನು ನೆನಪಿಸುತ್ತದೆ. ಹಾಗೂ ನಮ್ಮ ಸಾಮಾಜಿಕ ಸಾಮರಸ್ಯ, ಏಕತೆಯ ಭಾವ ಮತ್ತು ಮಾನವ ಸಬಲೀಕರಣಕ್ಕೆ ಬಲ ತುಂಬಲಿದೆ ಎಂದು ಅವರು ಹೇಳಿದ್ದಾರೆ. ದೇಶ ವಿಭಜನೆಯಾದ ದಿನದಂದು (ಆ.14) ಪಾಕಿಸ್ತಾನದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದೆ. ಹಾಗೇ ಭಾರತ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತದೆ.

ವಿಶೇಷ ಕಾರ್ಯಕ್ರಮ ಆಯೋಜನೆ: ಈ ಮಧ್ಯೆ, ಬಿಜೆಪಿ ವಿಭಜನೆ ದಿನವನ್ನು ಗುರುತಿಸಲು ವಿಶೇಷ ಕಾರ್ಯಕ್ರಮಗಳನ್ನು ನಡೆಸುತ್ತದೆ. ವಿಭಜನೆಯ ದುರಂತಗಳ ಕುರಿತು ವಿಚಾರ ಸಂಕಿರಣಗಳು ಮತ್ತು ಪ್ರದರ್ಶನಗಳನ್ನು ಆಯೋಜಿಸಲಾಗುವುದು ಎಂದು ಉತ್ತರ ಪ್ರದೇಶ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಯದುವಂಶ್ ತಿಳಿಸಿದ್ದಾರೆ.

ವಿಭಜನೆಯ ಹುತಾತ್ಮರನ್ನು ಸ್ಮರಿಸುವುದಕ್ಕಾಗಿ ಬಿಜೆಪಿ ನಾಯಕರು ಇಂದು ಉತ್ತರ ಪ್ರದೇಶದಲ್ಲಿ ‘ವಿಭಿಷಿಕಾ ಸ್ಮೃತಿ ದಿವಸ್’ ಶೀರ್ಷಿಕೆಯ ಮೌನ ಮೆರವಣಿಗೆ ನಡೆಸಲಿದ್ದಾರೆ. ಆ ಪ್ರಕ್ಷುಬ್ಧ ಕಾಲದ ದುರಂತಗಳ ತಿಳಿವಳಿಕೆಗಾಗಿ ಇದು ಇಂದಿನ ಪೀಳಿಗೆಯು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಬಲಪಡಿಸುವಲ್ಲಿ ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ ಎಂದು ಸುಭಾಷ್ ಯದುವಂಶ್ ಹೇಳಿದರು. 98 ಸಂಘಟನಾ ಜಿಲ್ಲೆಗಳಲ್ಲಿ ಮೌನ ಮೆರವಣಿಗೆ ನಡೆಯಲಿದೆ. ದೇಶದ ವಿಭಜನೆಯಲ್ಲಿ ಸ್ಥಳಾಂತರಗೊಂಡ ಮತ್ತು ಪ್ರಾಣ ಕಳೆದುಕೊಂಡ ಲಕ್ಷಾಂತರ ಸಹೋದರ ಸಹೋದರಿಯರ ಹೋರಾಟ ಮತ್ತು ತ್ಯಾಗವನ್ನು ಸ್ಮರಿಸುವುದು ಈ ಕಾರ್ಯಕ್ರಮಗಳ ಗುರಿಯಾಗಿದೆ.

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಗೆ ದೇಶದ 1800 ವಿಶೇಷ ಅತಿಥಿಗಳು: ಇಂದು ದೇಶವನ್ನುದ್ದೇಶಿಸಿ ಮುರ್ಮು ಭಾಷಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.