ನವದೆಹಲಿ: ಇಂದು ದೇಶ 24ನೇ ವರ್ಷದ ಕಾರ್ಗಿಲ್ ದಿವಸ್ ಆಚರಿಸುತ್ತಿದೆ. 24 ವರ್ಷಗಳ ಹಿಂದೆ ಇದೇ ದಿನ ಭಾರತೀಯ ವೀರ ಯೋಧರು ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವನ್ನು ಸದೆಬಡಿದು, ಅವರ ವಶದಲ್ಲಿದ್ದ ಪೋಸ್ಟ್ಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಪರಾಕ್ರಮ ಮೆರೆದಿದ್ದರು.
-
कारगिल विजय दिवस भारत के उन अद्भुत पराक्रमियों की शौर्यगाथा को सामने लाता है, जो देशवासियों के लिए सदैव प्रेरणाशक्ति बने रहेंगे। इस विशेष दिवस पर मैं उनका हृदय से नमन और वंदन करता हूं। जय हिंद!
— Narendra Modi (@narendramodi) July 26, 2023 " class="align-text-top noRightClick twitterSection" data="
">कारगिल विजय दिवस भारत के उन अद्भुत पराक्रमियों की शौर्यगाथा को सामने लाता है, जो देशवासियों के लिए सदैव प्रेरणाशक्ति बने रहेंगे। इस विशेष दिवस पर मैं उनका हृदय से नमन और वंदन करता हूं। जय हिंद!
— Narendra Modi (@narendramodi) July 26, 2023कारगिल विजय दिवस भारत के उन अद्भुत पराक्रमियों की शौर्यगाथा को सामने लाता है, जो देशवासियों के लिए सदैव प्रेरणाशक्ति बने रहेंगे। इस विशेष दिवस पर मैं उनका हृदय से नमन और वंदन करता हूं। जय हिंद!
— Narendra Modi (@narendramodi) July 26, 2023
ಪ್ರಧಾನಿ ಮೋದಿ ಟ್ವೀಟ್ ಮಾಡಿ, "ಕಾರ್ಗಿಲ್ ವಿಜಯ್ ದಿವಸ್ ಭಾರತದ ಧೈರ್ಯಶಾಲಿಗಳ ವೀರಗಾಥೆ ಸ್ಮರಿಸುತ್ತದೆ. ಕಾರ್ಗಿಲ್ ವೀರ ಯೋಧರು ಯಾವಾಗಲೂ ದೇಶವಾಸಿಗಳಿಗೆ ಸ್ಫೂರ್ತಿಯಾಗಿ ಉಳಿಯುತ್ತಾರೆ. ವೀರಯೋಧರಿಗೆ ನಮನಗಳು, ಜೈ ಹಿಂದ್" ಎಂದು ಬರೆದಿದ್ದಾರೆ.
ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದು, "ಕಾರ್ಗಿಲ್ ವಿಜಯ್ ದಿವಸ್ ಕೋಟ್ಯಂತರ ದೇಶವಾಸಿಗಳ ವಿಜಯದ ದಿನ. ಮಾತೃಭೂಮಿಯನ್ನು ರಕ್ಷಿಸಿದ ಸಮಸ್ತ ವೀರ ಯೋಧರಿಗೆ ನಮನ ಸಲ್ಲಿಸುವ ದಿನ. ಭಾರತ ಮಾತೆಯ ವೀರ ಸೈನಿಕರು ಕಾರ್ಗಿಲ್‌ನ ದುರ್ಗಮ ಬೆಟ್ಟಗಳ ಮೇಲೆ ಹೆಮ್ಮೆಯಿಂದ ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶದ ಸಮಗ್ರತೆಯನ್ನು ಎತ್ತಿ ಹಿಡಿದ ನಿಮ್ಮ ತ್ಯಾಗಕ್ಕೆ ವಂದಿಸುತ್ತೇನೆ" ಎಂದು ಸ್ಮರಿಸಿದ್ದಾರೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಲಡಾಖ್‌ನ ದ್ರಾಸ್‌ನಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ಮಾತನಾಡಿ, "ಮಾತೃಭೂಮಿಯ ರಕ್ಷಣೆಗಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ ವೀರಪುತ್ರರಿಗೆ ನನ್ನ ವಂದನೆಗಳು. ದೇಶವನ್ನು ಮೊದಲ ಸ್ಥಾನದಲ್ಲಿಟ್ಟು ಅದಕ್ಕಾಗಿ ಪ್ರಾಣ ತ್ಯಾಗ ಮಾಡಲು ಹಿಂಜರಿಯದ ವೀರರಿಗೆ ವಂದಿಸುತ್ತೇನೆ" ಎಂದು ತಿಳಿಸಿದ್ದಾರೆ.
ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಸೇನೆಯ ಹೆಲಿಕಾಪ್ಟರ್‌ಗಳು ಸ್ಮಾರಕಗಳಿಗೆ ಆಕಾಶದಿಂದ ಹೂಮಳೆಗೈದವು.
ಇದನ್ನೂ ಓದಿ: Kargil Vijay Diwas: ಇಂದು ಕಾರ್ಗಿಲ್ ವಿಜಯ್ ದಿವಸ್: ಸುಶ್ರಾವ್ಯವಾಗಿ 'ದೇಶ್ ಮೇರೆ..' ಹಾಡು ನುಡಿಸಿದ ಯೋಧರು- ನೋಡಿ