ETV Bharat / bharat

ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ ಅನಾವರಣಗೊಳಿಸಿದ ಪ್ರಧಾನಿ ಮೋದಿ: ಏನಿದು ಹೊಸ ನೀತಿ? - ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ ಅನಾವರಣಗೊಳಿಸಿದ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನವದೆಹಲಿಯಲ್ಲಿ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯನ್ನು (ಸರಕು ಸಾಗಣೆ ವೆಚ್ಚವನ್ನು ತಗ್ಗಿಸಿ, ದಕ್ಷತೆ ಹೆಚ್ಚಿಸುವ ನೀತಿ) ಅನಾವರಣಗೊಳಿಸಿದರು.

PM Modi
ಪ್ರಧಾನಿ ನರೇಂದ್ರ ಮೋದಿ
author img

By

Published : Sep 18, 2022, 9:40 AM IST

ನವದೆಹಲಿ: ದೇಶದ ಸಾರಿಗೆ ವಲಯ ಎದುರಿಸುತ್ತಿರುವ ಅನೇಕ ಸವಾಲುಗಳನ್ನು ಪರಿಹರಿಸಲು ಮತ್ತು ವ್ಯವಹಾರಗಳ ಲಾಜಿಸ್ಟಿಕ್ಸ್ ವೆಚ್ಚವನ್ನು ಶೇ.13-14 ರಿಂದ ಒಂದಂಕಿಗೆ ಇಳಿಸಲು ಪ್ರಯತ್ನಿಸುವ ಮಹತ್ವದ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ(ಎನ್‌ಎಲ್‌ಪಿ)ಯನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಅನಾವರಣಗೊಳಿಸಿದ್ದಾರೆ.

"ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕೆ ಒಂದು ಪ್ರಮುಖ ಹೆಜ್ಜೆ" ಎಂದು ಈ ನೀತಿಯನ್ನು ಬಣ್ಣಿಸಿರುವ ಮೋದಿ, ಭಾರತವು ಜಾಗತಿಕ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಪ್ರಪಂಚವು ಭಾರತವನ್ನು ಉತ್ಪಾದನೆಯಲ್ಲಿ ಅಗ್ರಗಣ್ಯ ಎಂದು ಒಪ್ಪಿಕೊಂಡಿದೆ. ಅಂತಹ ಪರಿಸ್ಥಿತಿಯಲ್ಲಿ, ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯು ಎಲ್ಲಾ ಕ್ಷೇತ್ರಗಳಿಗೆ ಹೊಸ ಶಕ್ತಿಯನ್ನು ತಂದಿದೆ ಎಂದು ಹೇಳಿದರು.

ಈ ನೀತಿಯು ಕೊನೆಯ ಮೈಲಿ ವಿತರಣೆಯನ್ನು ತ್ವರಿತಗೊಳಿಸುವ ಗುರಿ ಹೊಂದಿದೆ. ವ್ಯವಹಾರಗಳಿಗೆ ಸಮಯ ಮತ್ತು ಹಣ ಉಳಿಸಲು ಸಹಾಯ ಮಾಡುತ್ತದೆ. ಹೊಸ ನೀತಿಯು ಲಾಜಿಸ್ಟಿಕ್ಸ್ ವಲಯದ ಅನೇಕ ಸವಾಲುಗಳನ್ನು ಪರಿಹರಿಸುತ್ತದೆ. ಅಷ್ಟೇ ಅಲ್ಲ, ಮೂಲಸೌಕರ್ಯಾಭಿವೃದ್ಧಿ ಯೋಜನೆಯೊಂದಿಗೆ ಪಿಎಂ ಗತಿಶಕ್ತಿಯ ಅಂತರವನ್ನು ಪರಿಹರಿಸುತ್ತದೆ ಎಂದರು.

ಭಾರತೀಯ ಉತ್ಪನ್ನಗಳು ವಿಶ್ವ ಮಾರುಕಟ್ಟೆಯಲ್ಲಿ ಪಸರಿಸಲು, ದೇಶವು ತನ್ನ ಬೆಂಬಲ ವ್ಯವಸ್ಥೆಯನ್ನು ಬಲಪಡಿಸಬೇಕು. ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯು ಈ ಬೆಂಬಲ ವ್ಯವಸ್ಥೆಯನ್ನು ಆಧುನಿಕವಾಗಿಸಲು ಸಹಾಯ ಮಾಡುತ್ತದೆ ಎಂದು ಮೋದಿ ಹೇಳಿದರು.

ಲಾಜಿಸ್ಟಿಕ್ಸ್ ವಲಯವನ್ನು ಬಲಪಡಿಸಲು ಸರ್ಕಾರ ತಂತ್ರಜ್ಞಾನ ಬಳಸುತ್ತಿದೆ. ಕಸ್ಟಮ್ಸ್ ಮತ್ತು ಇ-ವೇ ಬಿಲ್‌ಗಳಲ್ಲಿ ಮುಖರಹಿತ ಮೌಲ್ಯಮಾಪನ ಪ್ರಾರಂಭವಾಗಿದೆ ಮತ್ತು ಫಾಸ್ಟ್‌ ಟ್ಯಾಗ್ ಲಾಜಿಸ್ಟಿಕ್ಸ್ ವಲಯಕ್ಕೆ ದಕ್ಷತೆಯನ್ನು ತರುತ್ತಿದೆ. ಬಂದರುಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಕಂಟೈನರ್ ಹಡಗುಗಳ ತಿರುಗುವಿಕೆಯ ಸಮಯವನ್ನು ಹಿಂದಿನ 44 ಗಂಟೆಗಳಿಂದ 26 ಗಂಟೆಗೆ ಕಡಿತಗೊಳಿಸಲಾಗಿದೆ.

ಸರಕು ಸಾಗಣೆ ಕಾರಿಡಾರ್‌ಗಳನ್ನು ಸಂಪರ್ಕಿಸುವ ಸಾಗರಮಾಲಾ ಯೋಜನೆಯು ಲಾಜಿಸ್ಟಿಕ್ಸ್ ಸಂಪರ್ಕ ಮತ್ತು ವ್ಯವಸ್ಥಿತ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಸುಧಾರಿಸಲು ಪ್ರಾರಂಭಿಸಿದೆ. ಭಾರತವು ಈಗ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ ಮತ್ತು ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಎಂದು ಪ್ರಧಾನಿ ಹೇಳಿದರು.

ಲಾಜಿಸ್ಟಿಕ್ಸ್‌ ನೀತಿಯ ಪ್ರಮುಖಾಂಶಗಳು:

  • ಇತರ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಿಗೆ ಹೋಲಿಸಿದರೆ ಭಾರತದಲ್ಲಿ ಲಾಜಿಸ್ಟಿಕ್ಸ್ ವೆಚ್ಚವು ಅಧಿಕವಾಗಿರುವುದರಿಂದ ರಾಷ್ಟ್ರೀಯ ನೀತಿಯ ಅಗತ್ಯವಿದೆ.
  • ದೇಶೀಯ ಮತ್ತು ರಫ್ತು ಮಾರುಕಟ್ಟೆಗಳಲ್ಲಿ ಭಾರತೀಯ ಸರಕುಗಳ ಸ್ಪರ್ಧಾತ್ಮಕತೆಯನ್ನು ಸುಧಾರಿಸಲು ನೀತಿಯು ದೇಶದಲ್ಲಿ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುತ್ತದೆ.
  • ಕಡಿಮೆಯಾದ ಲಾಜಿಸ್ಟಿಕ್ಸ್ ವೆಚ್ಚವು ಆರ್ಥಿಕತೆಯ ವಿವಿಧ ಕ್ಷೇತ್ರಗಳಲ್ಲಿ ದಕ್ಷತೆಯನ್ನು ಕಡಿತಗೊಳಿಸುತ್ತದೆ. ಮೌಲ್ಯವರ್ಧನೆ ಮತ್ತು ಉದ್ಯಮವನ್ನು ಉತ್ತೇಜಿಸುತ್ತದೆ.
  • ನೀತಿಯು ಭಾರತೀಯ ಸರಕುಗಳ ಸ್ಪರ್ಧಾತ್ಮಕತೆಯನ್ನು ಸುಧಾರಿಸಲು, ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ.
  • ಪಿಎಂ ಗತಿಶಕ್ತಿ ಬಹು-ಮಾದರಿ ಸಂಪರ್ಕಕ್ಕಾಗಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ -ಎನ್‌ಎಲ್‌ಪಿಯ ಪ್ರಾರಂಭದೊಂದಿಗೆ ಮತ್ತಷ್ಟು ಉತ್ತೇಜನ ಮತ್ತು ಪೂರಕತೆಯನ್ನು ಪಡೆಯುತ್ತದೆ.
  • ಭಾರತ ಜಿಡಿಪಿಯ ಸುಮಾರು 13 ರಿಂದ 14 ಪ್ರತಿಶತವನ್ನು ಲಾಜಿಸ್ಟಿಕ್ಸ್ ವೆಚ್ಚಗಳಿಗಾಗಿ ಖರ್ಚು ಮಾಡುತ್ತದೆ. ಲಾಜಿಸ್ಟಿಕ್ಸ್ ವಲಯವು 20 ಕ್ಕಿಂತ ಹೆಚ್ಚು ಸರ್ಕಾರಿ ಸಂಸ್ಥೆಗಳು, 40 ಪಾಲುದಾರ ಸರ್ಕಾರಿ ಸಂಸ್ಥೆಗಳು (PGA), 37 ರಫ್ತು ಪ್ರಚಾರ ಮಂಡಳಿಗಳು, 500 ಪ್ರಮಾಣೀಕರಣಗಳು, 10,000 ಕ್ಕೂ ಹೆಚ್ಚು ಸರಕುಗಳು ಮತ್ತು $160-ಬಿಲಿಯನ್ ಮಾರುಕಟ್ಟೆಯನ್ನು ಹೊಂದಿದೆ.
  • 2018ರ ವಿಶ್ವ ಬ್ಯಾಂಕ್ ಲಾಜಿಸ್ಟಿಕ್ಸ್ ಇಂಡೆಕ್ಸ್ ಪ್ರಕಾರ, ಲಾಜಿಸ್ಟಿಕ್ಸ್ ವೆಚ್ಚದಲ್ಲಿ ಭಾರತ 44 ನೇ ಸ್ಥಾನದಲ್ಲಿದೆ.
  • ಇ-ಸರಕು ಮಾರುಕಟ್ಟೆಗೆ ಏಕಗವಾಕ್ಷಿ ಪದ್ಧತಿ. ಇದರಿಂದ 7 ಸಚಿವಾಲಯಗಳು ಒಂದೇ ವೇದಿಕೆಗೆ.
  • ಏಕಗವಾಕ್ಷಿ ಪದ್ಧತಿಯಿಂದ ಸರಕು ಕಂಪನಿನಗಳಿಗೆ ಸರಕು ಸಾಗಣೆ ಕುರಿತ ಮಾಹಿತಿ, ವಿವಿಧ ಅನುಮೋದನೆಗಳು ಒಂದೇ ಕಡೆ ಲಭ್ಯ
  • ಹಡಗು, ರಸ್ತೆ ಸಾರಿಗೆ, ಪೆಟ್ರೋಲಿಯಂ, ವಿಮಾನ ಸೇರಿ ವಿವಿಧ ಸಚಿವಾಲಯಗಳ ಮಧ್ಯೆ ಸಮನ್ವಯಕ್ಕೆ ಜಾಲ ಯೋಜನಾ ಸಮೂಹ ರಚನೆ
  • ಸಾಗರಮಾಲಾ ಯೋಜನೆಯಿಂದ ಸಮುದ್ರ ಮಾರ್ಗದಲ್ಲಿ ಸರಕು ಸಾಗಣೆ ಸುಲಭ, ಸಾಕಷ್ಟುಸಮಯ, ವೆಚ್ಚ ಉಳಿತಾಯ.
  • ಹೆದ್ದಾರಿಗಳಲ್ಲಿ ಫಾಸ್ಟ್ಯಾಗ್‌ ಅಳವಡಿಕೆಯಿಂದ ಸರಕು ಸಾಗಣೆ ವಿಳಂಬ ನಿಯಂತ್ರಣ.
  • ಡ್ರೋನ್‌ ಮೂಲಕ ಹಾಗೂ ನದಿಗಳಲ್ಲಿ ಸರಕು ಸಾಗಣೆಗೆ ಉತ್ತೇಜನ.
  • ಈ ಕ್ರಮಗಳಿಂದ ಶೇ.13-14ರಷ್ಟಿದ್ದ ಸರಕು ಸಾಗಣೆ ವೆಚ್ಚ ಒಂದಂಕಿಗೆ ಇಳಿಕೆ.

ಕೇಂದ್ರ ಸರ್ಕಾರವು ಮೂರು ವರ್ಷಗಳಿಂದ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯ ಮೇಲೆ ಕೆಲಸ ಮಾಡುತ್ತಿದೆ. ವಾಣಿಜ್ಯ ಸಚಿವಾಲಯವು 2019 ರಲ್ಲಿ ಸಮಾಲೋಚನೆಗಾಗಿ ಕರಡು ಜಾರಿ ನೀತಿಯನ್ನು ಬಿಡುಗಡೆ ಮಾಡಿತು. ಆದರೆ ಇದು ಕೋವಿಡ್ -19 ಕಾರಣದಿಂದ ವಿಳಂಬವಾಯಿತು. 2022-23ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯನ್ನು ಮತ್ತೊಮ್ಮೆ ಘೋಷಿಸಿದರು.

ಲಾಜಿಸ್ಟಿಕ್ಸ್ ಎಂದರೆ, ಸಾಗಣೆ ಮತ್ತು ಸರಬರಾಜು ವ್ಯವಸ್ಥೆ. ದೇಶಾದ್ಯಂತ ಯಾವುದೇ ಸರಕನ್ನಾದರೂ ಸುಲಭವಾಗಿ ಒಂದೆಡೆಯಿಂದ ಇನ್ನೊಂದೆಡೆ ಸಾಗಿಸಲು ಅನುಕೂಲ ಮಾಡಿಕೊಡಲಾಗುವಂತೆ ಲಾಜಿಸ್ಟಿಕ್ಸ್ ನೀತಿ ರೂಪಿಸಲಾಗಿದೆ.

ಇದನ್ನೂ ಓದಿ: ಆಫ್ರಿಕನ್​ ಚೀತಾಗಳನ್ನು ಅಭಯಾರಣ್ಯಕ್ಕೆ ಬಿಟ್ಟ ನಮೋ.. ದೇಶದ ಚರಿತ್ರೆಯಲ್ಲಿ ಐತಿಹಾಸಿಕ ದಿನ ಎಂದ ಪಿಎಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.