ಭರೂಚ್(ಗುಜರಾತ್): ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್ನ ಭರೂಚ್ನಲ್ಲಿ ಆಯೋಜನೆ ಮಾಡಲಾಗಿದ್ದ ಉತ್ಕರ್ಷ್ ಸಮಾರೋಹ್ ಕಾರ್ಯಕ್ರಮ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ನರೇಂದ್ರ ಮೋದಿ ಮಾತನಾಡಿದರು. ಈ ವೇಳೆ, ಫಲಾನುಭವಿಯೊಬ್ಬರ ಪುತ್ರಿ ಜೊತೆ ಮಾತನಾಡುತ್ತಿದ್ದ ವೇಳೆ ನಮೋ ಭಾವುಕರಾದ ಘಟನೆ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ವೇಳೆ ಪ್ರಧಾನಿ, ಫಲಾನುಭವಿ ಜೊತೆ ಸಂವಾದ ನಡೆಸಿದರು. 'ನಿಮ್ಮ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತೀರಾ? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ವ್ಯಕ್ತಿ, ಮೂವರು ಹೆಣ್ಣು ಮಕ್ಕಳಲ್ಲಿ ಒಬ್ಬಳು ವೈದ್ಯೆಯಾಗಲು ಬಯಸಿದ್ದಾಳೆ ಎಂದು ತಿಳಿಸಿದ್ದರು.
ಈ ವೇಳೆ, ವೈದ್ಯಕೀಯ ವೃತ್ತಿ ಆಯ್ಕೆ ಮಾಡಿಕೊಳ್ಳಲು ಕಾರಣ ಏನು ಎಂದು ಪ್ರಧಾನಿ ಮೋದಿ ಕೇಳಿದಾಗ, 'ನನ್ನ ತಂದೆ ದೃಷ್ಟಿ ಹೀನತೆಯಿಂದ ಬಳಲುತ್ತಿರುವ ಸಮಸ್ಯೆ ಹೋಗಲಾಡಿಸಲು ನಾನು ವೈದ್ಯನಾಗಲು ಬಯಸುತ್ತೇನೆ' ಎಂದರು. ಬಾಲಕಿಯ ಮಾತು ಕೇಳಿ ನಮೋ ಭಾವೋದ್ವೇಗಕ್ಕೊಳಗಾದರು. ಈ ವೇಳೆ ಕೆಲಹೊತ್ತು ಮೌನಕ್ಕೆ ಶರಣಾದ ಘಟನೆ ಸಹ ನಡೆಯಿತು. ಇದರ ಬೆನ್ನಲ್ಲೇ ಬಾಲಕಿಯ ನಿರ್ಧಾರಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಇದನ್ನೂ ಓದಿ: Video: ಮೂರಡಿಯ ವಾರ್ಡ್ ಸದಸ್ಯನಿಂದ ಆರ್ಕೆಸ್ಟ್ರಾ ಯುವತಿ ಜೊತೆ ಡ್ಯಾನ್ಸ್
ಗುಜರಾತ್ನಲ್ಲಿ ಸಾಮಾಜಿಕ ಭದ್ರತೆಗೆ ಸಂಬಂಧಿಸಿದ ನಾಲ್ಕು ಯೋಜನೆ ಶೇ. 100ರಷ್ಟು ಯಶಸ್ವಿಯಾಗಿದ್ದಕ್ಕಾಗಿ ಪ್ರಧಾನಿ ಮೋದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ದೇಶದ ಪ್ರಧಾನಿಯಾಗಿ ನಾನು 8 ವರ್ಷ ಪೂರೈಕೆ ಮಾಡಿದ್ದೇನೆ. ಈ 8 ವರ್ಷ ಉತ್ತಮ ಆಡಳಿತ ಮತ್ತು ಬಡವರಿಗೋಸ್ಕರ ಮೀಸಲಿಟ್ಟಿದ್ದೇನೆ. 2014ರಲ್ಲಿ ದೇಶದ ಸೇವೆ ಮಾಡುವ ಅವಕಾಶ ನೀಡಿದಾಗ ನಮ್ಮ ದೇಶದ ಅರ್ಧದಷ್ಟು ಜನಸಂಖ್ಯೆ ಶೌಚಾಲಯ ಸೌಲಭ್ಯ, ಲಸಿಕೆ ಸೌಲಭ್ಯ, ವಿದ್ಯುತ್ ಸಂಪರ್ಕ ಸೌಲಭ್ಯ, ಬ್ಯಾಂಕ್ ಖಾತೆ ಸೌಲಭ್ಯದಿಂದ ವಂಚಿತವಾಗಿತ್ತು. ಆದರೆ, ಇದೀಗ ಎಲ್ಲವೂ ಶೇ. 100ರಷ್ಟು ಸಫಲವಾಗಿದೆ ಎಂದರು.
ಗುಜರಾತ್ನ ಭರೂಚ್ನಲ್ಲಿ ಕಳೆದ ಜನವರಿ 1ರಿಂದ ಮಾರ್ಚ್ 31ರವರೆಗೆ ಉತ್ಕರ್ಷ್ ಪಹಲ್ ಅಭಿಯಾನ ಆರಂಭಿಸಲಾಗಿತ್ತು. ಈ ಯೋಜನೆ ಮೂಲಕ ವಿಧವೆಯರು, ವೃದ್ಧರು ಮತ್ತು ನಿರ್ಗತಿಕರಿಗೆ ನೆರವು ನೀಡುವ ಯೋಜನೆ ಅನುಷ್ಠಾನಗೊಳಿಸುವ ಇರಾದೆ ಇಟ್ಟುಕೊಳ್ಳಲಾಗಿತ್ತು.