ETV Bharat / bharat

ಅಯೋಧ್ಯಾ ರಾಮ ಮಂದಿರ ನಿರ್ಮಾಣ.. ರೂಪುರೇಷೆ ಸೇರಿ ಕಾರ್ಯಪ್ರಗತಿ ಪರಿಶೀಲಿಸಿದ ನಮೋ

author img

By

Published : Jun 26, 2021, 4:36 PM IST

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಗೊಳ್ಳುತ್ತಿದ್ದು, ಅದರ ಕಾರ್ಯಪ್ರಗತಿ ಬಗ್ಗೆ ಪ್ರಧಾನಿ ಮೋದಿ ಮಹತ್ವದ ಸಭೆ ನಡೆಸಿದರು.

PM Modi chairs review meeting
PM Modi chairs review meeting

ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಳ್ಳುತ್ತಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ವರ್ಚುಯಲ್​ ಸಭೆ ಮೂಲಕ ಅಲ್ಲಿನ ಅಭಿವೃದ್ಧಿ ಕಾರ್ಯ, ರೂಪುರೇಷೆ ಸೇರಿದಂತೆ ಕಾರ್ಯಪ್ರಗತಿ ಬಗ್ಗೆ ಪರಿಶೀಲನೆ ನಡೆಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಅನೇಕರು ಈ​ ಸಭೆಯಲ್ಲಿ ಭಾಗಿಯಾಗಿದ್ದರು.

  • Prime Minister Narendra Modi chairs review meeting on Ayodhya Development plan via video conferencing

    Uttar Pradesh CM Yogi Adityanath is also present in the meeting pic.twitter.com/JltkWIxHXn

    — ANI (@ANI) June 26, 2021 " class="align-text-top noRightClick twitterSection" data=" ">

ಈ ವೇಳೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆ ರಾಮಮಂದಿರ ಭಾರತೀಯ ಸಂಪ್ರದಾಯ ಹಾಗೂ ಅಭಿವೃದ್ಧಿಯ ಪ್ರತೀಕವಾಗಿದ್ದು, ಭವಿಷ್ಯದ ದಿನ ಗಮನದಲ್ಲಿಟ್ಟುಕೊಂಡು ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು ಎಂದರು.

ಮುಂದಿನ ಪೀಳಿಗೆ ತಮ್ಮ ಜೀವಿತಾವಧಿಯಲ್ಲಿ ಒಂದು ಸಲವಾದರೂ ಅಯೋಧ್ಯೆಗೆ ಭೇಟಿ ನೀಡಬೇಕೆಂಬ ಬಯಕೆ ಇಟ್ಟುಕೊಂಡು ಇಲ್ಲಿಗೆ ಬರಬೇಕು. ಆ ರೀತಿಯಾಗಿ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಆಗಸ್ಟ್​​ 5ರಂದು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಗೆ ಭೇಟಿ ನೀಡಿ, ಭೂಮಿ ಪೂಜೆ ಕಾರ್ಯದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿರಿ: 2022ರ ಪಂಚರಾಜ್ಯ ಚುನಾವಣೆ: ನಡ್ಡಾ, ಅಮಿತ್​ ಶಾ ಸೇರಿ ಬಿಜೆಪಿ ಪ್ರಮುಖ ಮುಂಖಡರ ಸಭೆ

ಅಯೋಧ್ಯೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಉತ್ತರ ಪ್ರದೇಶ ಸರ್ಕಾರ ಪ್ರಸ್ತಾಪ ಸಲ್ಲಿಕೆ ಮಾಡಿದ್ದು, ಈಗಾಗಲೇ ಅದಕ್ಕೆ ಕೇಂದ್ರ ಒಪ್ಪಿಗೆ ನೀಡಿದೆ. ಇದರ ನಿರ್ಮಾಣಕ್ಕಾಗಿ ಯೋಗಿ ಸರ್ಕಾರ 1 ಸಾವಿರ ಕೋಟಿ ರೂ. ನೀಡ್ತಿದ್ದು, ಕೇಂದ್ರ ಸರ್ಕಾರ 250 ಕೋಟಿ ರೂ. ನೀಡಲು ಮುಂದಾಗಿದೆ.

ಅಯೋಧ್ಯೆಯಲ್ಲಿ ರೈಲ್ವೆ ನಿಲ್ದಾಣ, ಉತ್ತಮ ರಸ್ತೆ, ರೆಸ್ಟೋರೆಂಟ್ ಸೇರಿ ಎಲ್ಲ ರೀತಿಯ ಮೂಲ ಸೌಕರ್ಯ ಒದಗಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಇಂದು ಮೋದಿ ಜತೆ ನಡೆದ ಸಭೆಯಲ್ಲಿ ರಾಮ ಮಂದಿರದ ಆಚಾರ್ಯ ಸತ್ಯೇಂದ್ರ ದಾಸ್ ಕೂಡ​ ಭಾಗಿಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.