ನವದೆಹಲಿ : ಇಸ್ರೇಲ್ - ಗಾಜಾ ಯುದ್ಧದ ವೇಳೆ ಪ್ಯಾಲೆಸ್ತೀನ್‌ನ ಬೆಥ್ಲೆಹೆಮ್‌ನಲ್ಲಿ ಸಿಕ್ಕಿಬಿದ್ದಿದ್ದ 23 ಮೇಘಾಲಯದ ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ನೆರೆಯ ಈಜಿಪ್ಟ್‌ಗೆ ರವಾನಿಸಲಾಗಿದೆ. ವಿದೇಶಾಂಗ ಸಚಿವಾಲಯ ಮತ್ತು ಅಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಪ್ರಯತ್ನದಿಂದ ಎಲ್ಲ ಯಾತ್ರಿಕರು ಸುರಕ್ಷಿತವಾಗಿ ನೆರೆಯ ಈಜಿಪ್ಟ್ ತಲುಪಿದ್ದಾರೆ ಎಂದು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ತಿಳಿಸಿದ್ದಾರೆ.
-
As per the latest information and through the efforts of MEA and our Indian mission, our 27 citizens from Meghalaya, who were stuck in the war conflict zone of Israel and Palestine have safely crossed the border into Egypt@DrSJaishankar @MEAIndia
— Conrad K Sangma (@SangmaConrad) October 8, 2023 " class="align-text-top noRightClick twitterSection" data="
">As per the latest information and through the efforts of MEA and our Indian mission, our 27 citizens from Meghalaya, who were stuck in the war conflict zone of Israel and Palestine have safely crossed the border into Egypt@DrSJaishankar @MEAIndia
— Conrad K Sangma (@SangmaConrad) October 8, 2023As per the latest information and through the efforts of MEA and our Indian mission, our 27 citizens from Meghalaya, who were stuck in the war conflict zone of Israel and Palestine have safely crossed the border into Egypt@DrSJaishankar @MEAIndia
— Conrad K Sangma (@SangmaConrad) October 8, 2023
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಆ್ಯಪ್ನಲ್ಲಿ ಮಾಹಿತಿ ನೀಡಿದ ಸಂಗ್ಮಾ, ಈಶಾನ್ಯ ರಾಜ್ಯದ 27 ಭಾರತೀಯ ಪ್ರವಾಸಿಗರು ಯುದ್ಧ ವಲಯದಲ್ಲಿ ಸಿಲುಕಿಕೊಂಡಿದ್ದರು. ಆದರೆ, ವಿದೇಶಾಂಗ ಸಚಿವಾಲಯ ಮತ್ತು ಭಾರತೀಯ ರಾಯಭಾರಿ ಕಚೇರಿಯ ನೆರವಿನಿಂದ ಅವರನ್ನು ಸುರಕ್ಷಿತವಾಗಿ ಈಜಿಪ್ಟ್‌ಗೆ ಕರೆದೊಯ್ಯಲಾಗಿದೆ ಎಂದಿದ್ದಾರೆ.
ಇದಕ್ಕೂ ಮುನ್ನ ಪ್ರತ್ಯೇಕ ಟ್ವೀಟ್ ಮಾಡಿದ್ದ ಮುಖ್ಯಮಂತ್ರಿಗಳು, "ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಉದ್ವಿಗ್ನತೆಯಿಂದಾಗಿ ಜೆರುಸಲೇಂಗೆ ಪವಿತ್ರ ತೀರ್ಥಯಾತ್ರೆಗೆ ಪ್ರಯಾಣಿಸಿದ ಮೇಘಾಲಯದ 27 ನಾಗರಿಕರು ಬೆಥ್ಲೆಹೆಮ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ, ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಇಸ್ರೇಲ್ ಮತ್ತು ಗಾಜಾ ಎರಡೂ ದೇಶಗಳಲ್ಲಿ ಭಾರತೀಯ ನಾಗರಿಕರು ಸಾವು - ನೋವುಗಳನ್ನು ಅನುಭವಿಸಿದ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಈ 27 ಮಂದಿ ಯಾತ್ರಿಕರು ಸುರಕ್ಷಿತ ನಿರ್ಗಮನಕ್ಕಾಗಿ ರಾಯಭಾರ ಕಚೇರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ" ಎಂದಿದ್ದರು.
ಇದನ್ನೂ ಓದಿ : ಇಸ್ರೇಲ್ ಮೇಲೆ ಪ್ಯಾಲೆಸ್ತೀನ್ ದಾಳಿಕೋರರಿಂದ ರಾಕೆಟ್ ದಾಳಿ : ನಾಲ್ಕು ಮಂದಿ ಸಾವು
ಇನ್ನು ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಶನಿವಾರ ಭಾರತೀಯ ಪ್ರಜೆಗಳಿಗೆ ಜಾಗರೂಕರಾಗಿರಲು ಮತ್ತು ತುರ್ತು ಸಂದರ್ಭದಲ್ಲಿ ನೇರವಾಗಿ ಕಚೇರಿಯನ್ನು ಸಂಪರ್ಕಿಸುವಂತೆ ಮನವಿ ಮಾಡಿತ್ತು. ಇನ್ನೊಂದೆಡೆ, ಯುದ್ಧದ ಉದ್ವಿಗ್ನತೆ ಹೆಚ್ಚಿದ್ದರೂ ಯಾವುದೇ ಭಾರತೀಯರು ಇದುವರೆಗೆ ಅಹಿತಕರ ಘಟನೆಗಳಿಗೆ ಒಳಗಾಗಿಲ್ಲ. ಟೆಲ್ ಅವಿವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ದೇಶದಲ್ಲಿ ವಾಸಿಸುವ ಭಾರತೀಯರಿಗೆ ರಕ್ಷಣೆ ನೀಡಲು ತನ್ನ ಎಲ್ಲ ಪ್ರಯತ್ನಗಳನ್ನು ಮುಂದುವರೆಸಿದೆ. ಅವರನ್ನು ಸ್ವದೇಶಕ್ಕೆ ಕರೆತರಲು ಕ್ರಮ ಕೈಗೊಂಡಿದೆ. ಈ ಹಿನ್ನೆಲೆ ಅನೇಕ ಪ್ರವಾಸಿಗರು ಭಾರತಕ್ಕೆ ಪ್ರಯಾಣಿಸುತ್ತಿದ್ದಾರೆ. ಅಲ್ಲದೇ, ಕೆಲವು ಉದ್ಯಮಿಗಳು ಇಸ್ರೇಲ್ಗೆ ಭೇಟಿ ನೀಡುತ್ತಿದ್ದಾರೆ.
ಇದನ್ನೂ ಓದಿ : ಗಾಜಾ ಮೇಲೆ ಇಸ್ರೇಲ್ ಬಾಂಬ್ ದಾಳಿ : ಇಸ್ಲಾಮಿಕ್ ಜಿಹಾದ್ ಚಳುವಳಿಯ ಮೂವರ ಹತ್ಯೆ
ಶನಿವಾರ ಬೆಳಗ್ಗೆ ನಡೆದ ಪ್ಯಾಲೆಸ್ತೀನ್ ಭಯೋತ್ಪಾದಕರ ಭೀಕರ ದಾಳಿಯ ಬಳಿಕ ಇಸ್ರೇಲ್ ಸೇನೆ ಗಾಜಾ ಮೇಲೆ ದಾಳಿ ಮುಂದುವರೆಸಿದೆ. ಎರಡು ದಿನಗಳಿಂದ ನಡೆಯುತ್ತಿರುವ ದಾಳಿಯಲ್ಲಿ 1000ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಸ್ರೇಲ್‌ನಲ್ಲಿ ಗರಿಷ್ಠ 600 ಜನರು ಸಾವನ್ನಪ್ಪಿದ್ದರೆ, ಪ್ಯಾಲೆಸ್ತೀನ್ ಆಕ್ರಮಿತ ಗಾಜಾ ಪಟ್ಟಿಯಲ್ಲಿ ಸುಮಾರು 400 ನಾಗರಿಕರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ : ಇಸ್ರೇಲ್ - ಪ್ಯಾಲೆಸ್ಟೀನ್ ನಡುವೆ ಭುಗಿಲೆದ್ದ ಯುದ್ಧ : ಭಾರತೀಯರು ಜಾಗರೂಕರಾಗಿರಲು ರಾಯಭಾರಿ ಕಚೇರಿ ಸೂಚನೆ