ನವದೆಹಲಿ: ನಗರದ ಸಿಕ್ಸ್ ಟೂಟಿ ಚೌಕ್ ಬಳಿಯ ಪಹರಗಂಜ್ನಲ್ಲಿ ಗುರುವಾರ ಮನೆ ಕಟ್ಟಡ ಕುಸಿದು ಅವಶೇಷಗಳ ಅಡಿ ಸುಮಾರು 30 ಜನರು ಸಿಲುಕಿಕೊಂಡಿದ್ದರು. ಕೂಡಲೆ ಅಗ್ನಿಶಾಮಕ ದಳ ಘಟನೆ ಸ್ಥಳಕ್ಕೆ ಆಗಮಸಿ ಸಿಲುಕಿಕೊಂಡಿದ್ದ ಎಲ್ಲರನ್ನೂ ರಕ್ಷಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂಜೆ 5 ಗಂಟೆ ಸುಮಾರಿಗೆ ಘಟನೆ ಕುರಿತು ಸ್ಥಳಿಯರೊಬ್ಬರು ಪೊಲೀಸರಿಗೆ ಕರೆ ಮಾಡಿದ್ದು ತಕ್ಷಣ ಡಿಎಫ್ಎಸ್ ಮತ್ತು ಬಿಎಸ್ಇಎಸ್ ದಳ ಸ್ಥಳಕ್ಕಾಗಮಿಸಿ ಕಟ್ಟಡದ ಅಡಿ ಸಿಲುಕಿಕೊಂಡಿದ್ದ 10 ಕುಟುಂಬದ 30 ಜನರನ್ನು ರಕ್ಷಿಸಿದ್ದಾರೆ. ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಕತ್ರಾ ರಾಮ್ ನಗರದ ಪಕ್ಕದ ಕಟ್ಟಡಗಳು ಕೂಡ ಕುಸಿಯುವ ಸ್ಥಿತಯಲ್ಲಿವೆ ಎಂದು ತಿಳಿದು ಬಂದಿದೆ.
ಪಹರ್ಗಂಜ್ನಲ್ಲೂ ಹಳೆಯ ಕಟ್ಟಡಗಳ ಕುಸಿಯು ಸ್ಥಿತಿಯಲ್ಲಿವೆ. ಆದ್ದರಿಂದ ಮುಂದಿನ ದಿನಗಳಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಅಲ್ಲಿ ವಾಸಿಸುತ್ತಿರುವ ಕುಟುಂಬಗಳ ಸಮೀಕ್ಷೆ ಮಾಡಿ ಸ್ಥಳಾಂತರಿಸಲು ಎಂಸಿಡಿಗೆ ಮನವಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಕಟ್ಟಡ ಕುಸಿದಿರುವ ಸ್ಥಳವನ್ನು ಸೀಲ್ ಮಾಡಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ:ಇವರು ಬಡವರ ಪಾಲಿನ ಸಂಜೀವಿನಿ; ಕೇವಲ 30 ರೂಪಾಯಿಗೆ ಚಿಕಿತ್ಸ