ನವದೆಹಲಿ: ಸದ್ಯ ತೈಲ ದರ ಇಳಿಕೆಯಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಇಂದು ಪೆಟ್ರೋಲ್ ದರ 35 ಪೈಸೆ ಹೆಚ್ಚಳವಾಗಿದ್ದು, ಡೀಸೆಲ್ ದರ 15 ಪೈಸೆ ಏರಿಕೆಯಾಗಿದೆ. ಆ ಮೂಲಕ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 101.54 ರೂ., ಪ್ರತಿ ಲೀಟರ್ ದರ ಡೀಸೆಲ್ ದರ 89.87 ರೂಪಾಯಿಯಾಗಿದೆ.
ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 107.54 ರೂ., ಲೀಟರ್ ಡೀಸೆಲ್ ದರ 97.45 ರೂ ಆಗಿದೆ. ಇಂಧನ ದರವನ್ನು ಮತ್ತೆ ಹೆಚ್ಚಿಸಿದ ನಂತರ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 107.54 ರೂ.ಗೆ ಏರಿದೆ. ಭೋಪಾಲ್ನಲ್ಲಿ ಲೀಟರ್ ಪೆಟ್ರೋಲ್ ದರ 101.74 ರೂ.ಇದ್ದು, ಪ್ರತಿ ಲೀಟರ್ ಡೀಸೆಲ್ ದರ 98.67 ರೂನಷ್ಟಿದೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ದರ 101.74 ರೂ, ಡೀಸೆಲ್ ದರ 93.02 ರೂಪಾಯಿಯಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 104.58 ರೂ, ಡೀಸೆಲ್ ದರ 95.09 ರೂಪಾಯಿಗೆ ಹೆಚ್ಚಳವಾಗಿದೆ.
ಇದನ್ನೂ ಓದಿ:ಇಂದಿನಿಂದ ಜೊಮಾಟೊ IPO ಆರಂಭ: ಅಧಿಕೃತ ಮಾಹಿತಿ ಪ್ರಕಟಿಸಿದ ಸಂಸ್ಥೆ
ದೇಶಾದ್ಯಂತ ಹೆಚ್ಚುತ್ತಿರುವ ಇಂಧನ ದರ ಕಡಿಮೆ ಮಾಡುವಂತೆ ವಿಪಕ್ಷಗಳು ಆಗ್ರಹಿಸುತ್ತಿವೆ. ಆದರೂ, ನಿರಂತರವಾಗಿ ತೈಲ ದರ ಹೆಚ್ಚಳವಾಗುತ್ತಿದ್ದು, ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ.