ETV Bharat / bharat

ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಇಲ್ಲದ ಮಾಲೀಕರಿಗೆ ಶಾಕ್​ - ಸಾರಿಗೆ ಇಲಾಖೆ

ಸಾರಿಗೆ ಇಲಾಖೆಯ ಅಂಕಿ- ಅಂಶಗಳ ಪ್ರಕಾರ ದೆಹಲಿಯಲ್ಲಿ 19 ಲಕ್ಷ ವಾಹನಗಳು ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಇಲ್ಲದೆ ಓಡುತ್ತಿವೆ ಎಂದು ಸಚಿವ ಗೋಪಾಲ್ ರೈ ಮಾಹಿತಿ ನೀಡಿದರು.

petrol-and-diesel-will-not-be-provided-from-october-25-if-there-is-no-pollution-control-certificate
ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಇಲ್ಲದ ಮಾಲೀಕರಿಗೆ ಶಾಕ್​
author img

By

Published : Oct 1, 2022, 6:55 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಚಾಲಕರು ವಾಹನದ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವನ್ನು ಹೊಂದಿದ್ದರೆ ಮಾತ್ರ ಅಕ್ಟೋಬರ್ 25ರಿಂದ ತಮ್ಮ ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಪಡೆಯಲು ಸಾಧ್ಯವಾಗುತ್ತದೆ.

ಹೌದು, ವಾಹನಗಳ ಹೊಗೆಯಿಂದ ಉಂಟಾಗುವ ಮಾಲಿನ್ಯವನ್ನು ತಡೆಗಟ್ಟಲು ದೆಹಲಿ ಸಾರಿಗೆ ಇಲಾಖೆಯು ಅಕ್ಟೋಬರ್ 1ರಿಂದ ವಾಹನದ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಇಲ್ಲದೇ ಓಡುವ ವಾಹನಗಳ ವಿರುದ್ಧ ಕ್ರಮ ಜರುಗಿಸಲು ಪ್ರಾರಂಭಿಸಿದೆ. ಇದರೊಂದಿಗೆ ಈಗ ಪೆಟ್ರೋಲ್ ಮತ್ತು ಡೀಸೆಲ್ ತೆಗೆದುಕೊಳ್ಳಲು ಪಿಯುಸಿ ಪ್ರಮಾಣಪತ್ರವೂ ಕಡ್ಡಾಯವಾಗಲಿದೆ.

ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವಿಲ್ಲದೆ ವಾಹನ ಸವಾರರು ಸಿಕ್ಕಿಬಿದ್ದರೆ ಪರವಾನಗಿ ಅಮಾನತುಗೊಳಿಸುವ ಕ್ರಮಕ್ಕೂ ಉದ್ದೇಶಿಸಲಾಗಿದೆ. ಜೊತೆಗೆ ಈ ಪ್ರಮಾಣಪತ್ರ ಇಲ್ಲದಿದ್ದರೆ ಅಕ್ಟೋಬರ್ 25ರಿಂದ ದೆಹಲಿಯ ಪೆಟ್ರೋಲ್ ಪಂಪ್‌ಗಳಲ್ಲಿ ಇಂತಹ ವಾಹನ ಚಾಲಕರಿಗೆ ಪೆಟ್ರೋಲ್ ಮತ್ತು ಡೀಸೆಲ್ ಹಾಕುವುದಿಲ್ಲ. ಈ ಕುರಿತ ಎಲ್ಲ ಪೆಟ್ರೋಲ್ ಪಂಪ್‌ಗಳಲ್ಲಿ ಜಾಗೃತಿ ಅಭಿಯಾನವನ್ನು ಆರಂಭಿಸುವುದಾಗಿ ಸಚಿವ ಗೋಪಾಲ್ ರೈ ಶನಿವಾರ ತಿಳಿಸಿದ್ದಾರೆ.

19 ಲಕ್ಷ ವಾಹನಗಳಿಗೆ ಪ್ರಮಾಣಪತ್ರ ಇಲ್ಲ: ದೆಹಲಿಯಲ್ಲಿ ಮಾಲಿನ್ಯವನ್ನು ಎದುರಿಸಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮಾಲಿನ್ಯವು ಚಳಿಗಾಲದಲ್ಲಿ ಉಸಿರುಗಟ್ಟುವ ವಾತಾವರಣವನ್ನು ಸೃಷ್ಟಿಸುತ್ತಿದೆ. ಈಗಿನಿಂದಲೇ ಇಂತಹ ಅಗತ್ಯ ಅಭಿಯಾನಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಈ ವರ್ಷದ ಸಾರಿಗೆ ಇಲಾಖೆಯ ಅಂಕಿ- ಅಂಶಗಳ ಪ್ರಕಾರ ದೆಹಲಿಯಲ್ಲಿ 19 ಲಕ್ಷ ವಾಹನಗಳು ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಇಲ್ಲದೇ ಓಡುತ್ತಿವೆ ಎಂದು ಸಚಿವ ಗೋಪಾಲ್ ರೈ ಮಾಹಿತಿ ನೀಡಿದರು.

ಮುಂದಿನ 15 ದಿನಗಳಲ್ಲಿ ವಾಹನಗಳ ಮಾಲಿನ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಮಾಲೀಕರಿಗೆ ಸಲಹೆ ನೀಡಲಾಗಿದೆ. ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರದ ಅವಧಿ ಮುಗಿದ ವಾಹನಗಳ ಪಟ್ಟಿಯನ್ನೂ ಸಾರಿಗೆ ಇಲಾಖೆ ಸಿದ್ಧಪಡಿಸಲಾಗಿದೆ. ಆ ವಾಹನ ಮಾಲೀಕರಿಗೆ ಶೀಘ್ರವೇ ಮೊಬೈಲ್ ಸಂದೇಶ ಕಳುಹಿಸಿ 15 ದಿನಗಳಲ್ಲಿ ವಾಹನಗಳ ಮಾಲಿನ್ಯ ತಪಾಸಣೆ ಮಾಡುವಂತೆ ಸೂಚಿಸಲಾಗುವುದು. ಇದಾದ ನಂತರವೂ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರವಿಲ್ಲದ ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಇದನ್ನೂ ಓದಿ: ಬೆಂಗಳೂರು ಸೇರಿ ದೇಶದ 13 ನಗರಗಳಲ್ಲಿ 5ಜಿ... ಇನ್ಮುಂದೆ ಆನಂದಿಸಿ ವೇಗದ ಇಂಟರ್​ನೆಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.