ETV Bharat / bharat

ಅಸ್ಸಾಂನಲ್ಲಿ ನಿನ್ನೆಯಿಂದ 15 ಬಾರಿ ಭೂಕಂಪನ; ಪ್ರಾಣಭೀತಿಯಿಂದ ರಾತ್ರಿ ಕಳೆದ ಜನ - ಅಸ್ಸಾಂ ಭೂಮಿ ಕಂಪನ

ನಿನ್ನೆ ಬೆಳಿಗ್ಗೆ 7.51ರ ಸುಮಾರಿಗೆ ರಾಜ್ಯದಲ್ಲಿ ರಿಕ್ಟರ್‌ ಮಾಪಕದಲ್ಲಿ 6.4 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಇದಾದ ಬಳಿಕ ರಾಜ್ಯದಲ್ಲಿ ಸತತವಾಗಿ ಭೂಕಂಪನದ ಅನುಭವ ಆಗುತ್ತಿದೆ. ಭೂಗರ್ಭದಲ್ಲಿ ಉಂಟಾಗುವ ಘಟನಾವಳಿಗಳಿಂದ ಭಯಭೀತರಾದ ಜನರು ನಿದ್ರೆಯಿಲ್ಲದೆ ರಾತ್ರಿ ಕಳೆದರು.

Assam
ಅಸ್ಸಾಂನಲ್ಲಿ ನಡುಗಿದ ಭೂಮಿ
author img

By

Published : Apr 29, 2021, 11:02 AM IST

Updated : Apr 29, 2021, 12:06 PM IST

ಗುವಾಹಟಿ (ಅಸ್ಸಾಂ): ನಿನ್ನೆ ಅಸ್ಸಾಂ ಸೇರಿ ಈಶಾನ್ಯ ರಾಜ್ಯಗಳಲ್ಲಿ ಭೂಕಂಪನ ಸಂಭವಿಸಿತ್ತು. ಈ ವೇಳೆ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಸುದೈವವಶಾತ್‌ ಯಾವುದೇ ಪ್ರಾಣ ಹಾನಿಯಾದ ವರದಿಯಾಗಿಲ್ಲ. ಬೆಳಗ್ಗೆ 6.4ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ ಬಳಿಕ ರಾಜ್ಯದಲ್ಲಿ ಪದೇ ಪದೇ ಭೂಮಿ ನಡುಗಿದ ಅನುಭವಾಗುತ್ತಿದೆ. ಹೀಗಾಗಿ ಜನರು ಭಯದಿಂದ ನಿದ್ರೆಯಿಲ್ಲದೆ ರಾತ್ರಿ ಕಳೆದಿದ್ದಾರೆ.

ಇದನ್ನೂ ಓದಿ: ಅಸ್ಸಾಂನಲ್ಲಿ 6.4 ತೀವ್ರತೆಯ ಭೂಕಂಪನ: ಈಶಾನ್ಯ ಭಾರತ, ಬಂಗಾಳದಲ್ಲಿ ನಡುಗಿದ ಭೂಮಿ

ಮಧ್ಯ ಅಸ್ಸಾಂನ ಬ್ರಹ್ಮಪುತ್ರದ ಎರಡೂ ಬದಿಗಳಲ್ಲಿ ಭೂಮಿ ನಡುಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: WATCH: ಅಸ್ಸಾಂ ಸೇರಿ ಈಶಾನ್ಯ ರಾಜ್ಯಗಳಲ್ಲಿ ಸಂಭವಿಸಿದ ಭೂಕಂಪನದ ಪರಿಣಾಮ

ಬುಧವಾರ ರಾತ್ರಿಯಿಂದ ಒಟ್ಟು 15 ಬಾರಿ ಭೂಮಿ ಕಂಪಿಸಿದ್ದು, ರಾಜ್ಯವನ್ನು ತಲ್ಲಣಗೊಳಿಸಿದೆ. ನಸುಕಿನ ಜಾವ 1.20ಕ್ಕೆ 4.6ರಷ್ಟು ತೀವ್ರತೆಯಲ್ಲಿ ಕಂಪನವಾಗಿದೆ. ಇದರಿಂದ ಭಯಭೀತರಾದ ಜನರು ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಇದಲ್ಲದೆ ಕ್ರಮವಾಗಿ 2.8, 2.6, 2.9, 2.3, 2.7, 2.7 ಮತ್ತು 2.8 ಒಟ್ಟು 15 ಬಾರಿ ಭೂಮಿ ಕಂಪಿಸಿದೆ.

ಇದನ್ನೂ ಓದಿ: ಅಸ್ಸಾಂನಲ್ಲಿ ಮತ್ತೆ ಕಂಪಿಸಿತು ಭೂಮಿ: ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲು

ಭೂಕಂಪನವಾದ ಬಳಿಕ ಜನರು ಆಘಾತದಿಂದ ರಾತ್ರಿ ಜಾಗರಣೆ ಕುಳಿತಿದ್ದರು. ಈಶಾನ್ಯ ಭಾಗ, ಪಶ್ಚಿಮ ಬಂಗಾಳದ ಕೆಲವು ಭಾಗಗಳು, ಭೂತಾನ್ ಮತ್ತು ಬಾಂಗ್ಲಾದೇಶದಾದ್ಯಂತ ಭೂಕಂಪನವಾಗಿದೆ.

Last Updated : Apr 29, 2021, 12:06 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.