ಪಾಟ್ನಾ(ಬಿಹಾರ) : ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ್ದ ಆರೋಪಿಗೆ ವಿಚಿತ್ರ ಷರತ್ತಿನ ಮೇಲೆ ಜಾಮೀನು ನೀಡಿದ್ದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರನ್ನ ಸೇವೆಯಿಂದ ತಾತ್ಕಾಲಿಕ ವಜಾಗೊಳಿಸಿದೆ.
ದೌರ್ಜನ್ಯ ಪ್ರಕರಣದ ಆರೋಪಿಗೆ ಆತನ ಊರಿನ ಎಲ್ಲಾ ಮಹಿಳೆಯರ ಬಟ್ಟೆ ತೊಳೆದು ಇಸ್ತ್ರಿ ಮಾಡುವ ಷರತ್ತು ವಿಧಿಸಿ ಜಾಮೀನು ನೀಡಲಾಗಿತ್ತು. ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಕೆಳ ನ್ಯಾಯಾಲಯದ ನ್ಯಾಯಾಧೀಶರನ್ನ ಮುಂದಿನ ಆದೇಶದವರೆಗೂ ಸೇವೆಯಿಂದ ತಾತ್ಕಾಲಿಕ ವಜಾ ಮಾಡಿ ಪಾಟ್ನಾ ಹೈಕೋರ್ಟ್ ಆದೇಶ ಹೊರಡಿಸಿದೆ.
ಹೈಕೋರ್ಟ್ ಮೂಲಗಳ ಪ್ರಕಾರ, ಶುಕ್ರವಾರ ನೀಡಿದ ಆದೇಶದಲ್ಲಿ, ಮಧುಬನಿ ಜಿಲ್ಲೆಯ ಉಪ ವಿಭಾಗದಲ್ಲಿ ನಿಯೋಜಿಸಲಾದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಅವಿನಾಶ್ ಕುಮಾರ್ ಅವರಿಗೆ ಹೈಕೋರ್ಟ್ ಈ ಆದೇಶ ನೀಡಿದೆ.
ಆದರೆ, ಇದಕ್ಕೂ ಮೊದಲು ಹಲವು ಪ್ರಕರಣಗಳಿಗೆ ಇಂತಹ ಷರತ್ತು ವಿಧಿಸಿ ಜಾಮೀನು ನೀಡಿರುವ ಆರೋಪ ಸಹ ಕೇಳಿ ಬಂದಿದೆ.
ಇದನ್ನೂ ಓದಿ: ಚಹಾ ಮಾರುತ್ತಿದ್ದ ಬಾರಾಮತಿಯ ಬಾಲಕ ಈಗ ಐಪಿಎಸ್ ಅಧಿಕಾರಿ