ಮಿರ್ಜಾಪುರ: ಸರ್ಕಾರವು ಆರೋಗ್ಯ ಸೇವೆಗಾಗಿ ಪ್ರತಿ ವರ್ಷ ಕೋಟಿ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದರೂ ಅದು ಗ್ರಾಮೀಣ ಪ್ರದೇಶಕ್ಕೆ ತಲುಪುತ್ತಿಲ್ಲವೋ ಅಥವಾ ಜನರೇ ಆ ಸೇವೆಯನ್ನು ಬಳಸಿಕೊಳ್ಳುತ್ತಿಲ್ಲವೋ ಎನ್ನುವ ಅನುಮಾನ ಉದ್ಭವಿಸಿದೆ. ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಸಲುವಾಗಿ, ಕೃತಕ ಸ್ಟ್ರೆಚರ್ (ಮಂಚಕ್ಕೆ ಹಗ್ಗ ಕಟ್ಟಿ ಹೊತ್ತೊಯ್ದಿದ್ದಾರೆ) ನಿರ್ಮಿಸಿದ ಕಟುಂಬಸ್ಥರು, ಅದನ್ನು ಹೊತ್ತೊಯ್ದು ಕಾಲ್ನಡಿಗೆ ಮೂಲಕ ಆಸ್ಪತ್ರೆ ತಲುಪಿರುವ ಘಟನೆ ಮಿರ್ಜಾಪುರದಲ್ಲಿ ನಡೆದಿದೆ.
![patient reached hospital on cot](https://etvbharatimages.akamaized.net/etvbharat/prod-images/12110206_hytjk.jpg)
ತಿಲಾಂವ್ ಗ್ರಾಮದ ಸತ್ತು ಮುಸಾಹರ್ ಅವರಿಗೆ ಶುಕ್ರವಾರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ನೋವು ಹೆಚ್ಚಾಗಿದೆ. ಈ ಕಾರಣದಿಂದಾಗಿ, ಸಾಟ್ಟು ಅವರ ಜೀವವನ್ನು ಉಳಿಸಲು, ಕುಟುಂಬ ಸದಸ್ಯರು ಹಗ್ಗ ಕಟ್ಟಿ ಅದನ್ನು ಹೊತ್ತು ನಡೆದಿದ್ದಾರೆ. ಬಿಸಿಲಿನಲ್ಲೇ ಎಂಟು ಕಿಲೋ ಮೀಟರ್ ದೂರದಲ್ಲಿರುವ ಲಾಲ್‌ಗಂಜ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಈ ಕುರಿತು ಸಂಬಂಧಿಕರು ಪ್ರತಿಕ್ರಿಯಿಸಿದ್ದು, ನಮ್ಮ ಬಳಿ ಫೋನ್ ಇರಲಿಲ್ಲ. ಉಚಿತ ಆ್ಯಂಬುಲೆನ್ಸ್ ಸೇವೆ ಇದೆಯೆಂಬುದು ಕೂಡ ನಮಗೆ ತಿಳಿದಿಲ್ಲ. ಯಾರೂ ಕೂಡ ಆ್ಯಂಬುಲೆನ್ಸ್ಗೆ ಕರೆ ಮಾಡಲಿಲ್ಲ ಮತ್ತು ನಮಗೆ ಸಹಾಯ ಹಸ್ತ ಚಾಚಲಿಲ್ಲ. ಬಿಸಿಲಿನಲ್ಲೇ 8 ಕಿ.ಮೀ ಸಂಚರಿಸಿದೆವು ಎಂದು ತಿಳಿಸಿದರು.