ETV Bharat / bharat

ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ಐತಿಹಾಸಿಕ ಕ್ಷಣ: ಬಿಆರ್​ಎಸ್​ ನಾಯಕಿ ಕವಿತಾ ಶ್ಲಾಘನೆ

author img

By ETV Bharat Karnataka Team

Published : Sep 22, 2023, 1:36 PM IST

Updated : Sep 22, 2023, 2:46 PM IST

ಮಹಿಳಾ ಮೀಸಲಾತಿ ಅಂಗೀಕಾರವಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಬಿಆರ್​ಎಸ್ ನಾಯಕಿ ಕೆ. ಕವಿತಾ, ಇದೊಂದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದಾರೆ.

passage of the Womens Reservation Bill is historic BRS MP K Kavitha Description

ನವದೆಹಲಿ: ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿರುವುದನ್ನು ಶ್ಲಾಘಿಸಿರುವ ಬಿಆರ್​ಎಸ್​ ನಾಯಕಿ ಕೆ. ಕವಿತಾ, ಒಬಿಸಿ ಮಹಿಳೆಯರ ಹಿತಾಸಕ್ತಿಗಳ ರಕ್ಷಣೆಗೆ ಮತ್ತು ಅವರಿಗೆ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದರು. ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವನ್ನು 'ಐತಿಹಾಸಿಕ' ಎಂದು ಬಣ್ಣಿಸಿದ ಅವರು, ಇದು ಪ್ರಜಾಪ್ರಭುತ್ವ, ಸಮಾನತೆ ಮತ್ತು ಪ್ರತಿಯೊಬ್ಬ ಭಾರತೀಯ ಮಹಿಳೆಯ ಸಾಮರ್ಥ್ಯದ ಗೆಲುವು ಎಂದು ಹೇಳಿದರು.

ಎಕ್ಸ್​ನಲ್ಲಿ ಈ ಬಗ್ಗೆ ಪೋಸ್ಟ್​ ಮಾಡಿರುವ ಅವರು, ಮಹಿಳಾ ಮೀಸಲಾತಿ ಮಸೂದೆಯು ಕೇವಲ ರಾಜಕೀಯಕ್ಕೆ ಸೀಮಿತವಾಗಿಲ್ಲ, ಬದಲಾಗಿ ಇದು ಮಹಿಳೆಯರ ಪ್ರಗತಿ, ಪ್ರಾತಿನಿಧ್ಯ ಮತ್ತು ಅಡೆತಡೆಗಳನ್ನು ನಿವಾರಿಸುವ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ. ನಮ್ಮ ಬಹುಸಂಖ್ಯೆಯ ಮಹಿಳೆಯರ ಧ್ವನಿಗಳು ನಮ್ಮ ಪ್ರೀತಿಯ ತಾಯ್ನಾಡಿನ ಉಜ್ವಲ ಭವಿಷ್ಯವನ್ನು ರೂಪಿಸುವ ಹೆಜ್ಜೆ ಇದಾಗಿದೆ ಎಂದು ಅವರು ಹೇಳಿದ್ದಾರೆ. ಸಂಸದೆ ಕೆ. ಕವಿತಾ ಅನೇಕ ದಿನಗಳ ಹಿಂದಿನಿಂದಲೂ ಮಹಿಳಾ ಮೀಸಲಾತಿ ಮಸೂದೆಯ ಪರವಾಗಿ ಮಾತನಾಡುತ್ತಿರುವ ದೇಶದ ಮಹಿಳಾ ನಾಯಕಿಯರಲ್ಲೊಬ್ಬರಾಗಿದ್ದಾರೆ.

  • Historic Moment! A long struggle has finally found its due course and recognition! The Women's Reservation Bill has finally passed in Parliament!

    Today, we celebrate the triumph of equality, democracy, and the power of every Indian woman.
    This victory isn't just about…

    — Kavitha Kalvakuntla (@RaoKavitha) September 21, 2023 " class="align-text-top noRightClick twitterSection" data=" ">

Historic Moment! A long struggle has finally found its due course and recognition! The Women's Reservation Bill has finally passed in Parliament!

Today, we celebrate the triumph of equality, democracy, and the power of every Indian woman.
This victory isn't just about…

— Kavitha Kalvakuntla (@RaoKavitha) September 21, 2023

"ಭಾರತದ ಅದ್ಭುತ ಸಾಮರ್ಥ್ಯದ ಮಹಿಳೆಯರಿಗೆ ಇದು ಸಮರ್ಪಿತ. ನಮ್ಮ ಉತ್ಸಾಹವನ್ನು ಯಾರೂ ತಡೆಯಲಾರರು! ನಮ್ಮ ಶಕ್ತಿ, ತಾಳ್ಮೆ ಮತ್ತು ಅಚಲ ಮನೋಭಾವವು ಸಶಕ್ತ ಭಾರತಕ್ಕೆ ದಾರಿ ಮಾಡಿಕೊಟ್ಟಿದೆ. ಒಬಿಸಿ ಮಹಿಳೆಯರ ಹಿತಾಸಕ್ತಿ ರಕ್ಷಣೆಗೆ ಪ್ರಾತಿನಿಧ್ಯ ಸಿಗುವಂತೆ ಹೋರಾಟವನ್ನು ಮುಂದುವರಿಸುತ್ತೇವೆ! #WomensReservationBill" ಎಂದು ಅವರು ಬರೆದಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಮಸೂದೆಗಾಗಿ ಒಗ್ಗೂಡುವಂತೆ ಅವರು ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದ್ದರು. ಮಸೂದೆಯನ್ನು ಬೆಂಬಲಿಸಿ ಈ ವರ್ಷದ ಮಾರ್ಚ್​​ನಲ್ಲಿ ಕವಿತಾ ನವದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದು ಗಮನಾರ್ಹ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಕಾಯ್ದಿರಿಸುವ ಬಹುನಿರೀಕ್ಷಿತ ಮಸೂದೆಗೆ ರಾಜ್ಯಸಭೆ ಗುರುವಾರ ಸರ್ವಾನುಮತದಿಂದ ಅನುಮೋದನೆ ನೀಡಿದೆ.

ಆದರೆ ಮುಂದಿನ ಚುನಾವಣೆಯಿಂದಲೇ ಮಹಿಳಾ ಮೀಸಲಾತಿ ಜಾರಿಗೆ ಬರುತ್ತಿಲ್ಲ ಎಂಬ ವಿಚಾರದಲ್ಲಿ ಕವಿತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿ ನೀಡುವ ಮಹಿಳಾ ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ ದೊರೆತಿದ್ದಕ್ಕಾಗಿ ಅವರು ದೇಶಾದ್ಯಂತದ ಮಹಿಳೆಯರನ್ನು ಅಭಿನಂದಿಸಿದ್ದು, ಜಗತ್ತಿನಲ್ಲಿ ಅರ್ಧದಷ್ಟು ಇರುವ ಮತ್ತು ಅರ್ಧದಷ್ಟು ಅವಕಾಶಗಳನ್ನು ಹೊಂದಿರುವ ಮಹಿಳೆಯರಿಗೂ ಅರ್ಧದಷ್ಟು ಅಧಿಕಾರ ಇರಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ನಾರಿ ಶಕ್ತಿ ವಂದನ ಅಧಿನಿಯಮ್ ನವಭಾರತದ ಪ್ರಜಾಪ್ರಭುತ್ವ ಬದ್ಧತೆಯ ಸಂಕೇತ: ಪ್ರಧಾನಿ ಮೋದಿ

Last Updated : Sep 22, 2023, 2:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.