ನವದೆಹಲಿ: ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಬಜೆಟ್ಗೂ ಮೊದಲು ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ಜನವರಿ 31 ರಂದು ಈ ಸಭೆ ವರ್ಚುಯಲ್ ಮೂಲಕ ನಡೆಯಲಿದೆ. ಸುಗಮ ಕಲಾಪಗಳು ನಡೆಯುವಂತೆ ಎಲ್ಲ ಪಕ್ಷಗಳ ಸಹಕಾರವನ್ನು ಕೇಂದ್ರ ಸಚಿವರು ಈ ವೇಳೆ ಕೋರಲಿದ್ದಾರೆ.
ಫೆಬ್ರವರಿ 1 ರಂದೇ ಬಜೆಟ್ ಮಂಡನೆ ಮಾಡಲು ಸರ್ಕಾರ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆ ಮಹತ್ವ ಪಡೆದುಕೊಂಡಿದೆ. ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಸಂಸತ್ ಕಲಾಪ ಸುಗಮವಾಗಿ ನಡೆಯುಂತಾಗಲು ಎಲ್ಲರ ಸಹಕಾರ ಅಗತ್ಯ ಇದೆ. ಈ ಬಗ್ಗೆ ಚರ್ಚಿಸುವ ಉದ್ದೇಶದಿಂದ ಎಲ್ಲ ರಾಜಕೀಯ ಪಕ್ಷಗಳ ನಾಯಕರನ್ನು ಸಭೆಗೆ ಆಹ್ವಾನಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಉಭಯ ಸದನಗಳ ಕಾರ್ಯ ಕಲಾಪಗಳು ಸರಳವಾಗಿ ಹಾಗೂ ಸುಗಮವಾಗಿ ನಡೆಯಲು ತಮ್ಮೆಲ್ಲರ ಸಹಕಾರ ಕೋರುತ್ತೇನೆ. ಈ ಸಂಬಂಧದ ಸಭೆ ಜನವರಿ 31 ರ ಮಧ್ಯಾಹ್ನ 3 ಗಂಟೆಗೆ ವರ್ಚುಯಲ್ ಮೂಲಕ ನಡೆಯಲಿದ್ದು, ಎಲ್ಲ ನಾಯಕರು ಭಾಗವಹಿಸುವಂತೆ ಸಚಿವರು ಕೋರಿದ್ದಾರೆ.
ಬಜೆಟ್ ಅಧಿವೇಶನ ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತ ಜನವರಿ 31ರಿಂದ ಫೆಬ್ರವರಿ 11 ರವರೆಗೂ ಹಾಗೂ ಎರಡನೇ ಹಂತ ಮಾರ್ಚ್ 14 ರಿಂದ ಏಪ್ರಿಲ್ 8 ರವರೆಗೆ ನಡೆಯಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ ರಾಜ್ಯಸಭಾ ಕಲಾಪ ಹಾಗೂ ಲೋಕಸಭಾ ಕಲಾಪಗಳು ಮಧ್ಯಾಹ್ನ 4 ಗಂಟೆಯಿಂದ ರಾತ್ರಿ 9 ರವರೆಗೆ ನಡೆಯಲಿದೆ.
ಇದನ್ನು ಓದಿ:ರತ್ನ, ಚಿನ್ನಾಭರಣ ರಫ್ತು ಶೇ. 71ರಷ್ಟು ಹೆಚ್ಚಳ