ETV Bharat / bharat

ಪರೀಕ್ಷಾ ಕೇಂದ್ರದ 2ನೇ ಮಹಡಿಯಲ್ಲಿ ಪರೀಕ್ಷಾ ಕೇಂದ್ರ​: ಪಾರ್ಶ್ವವಾಯು ಪೀಡಿತ ವಿದ್ಯಾರ್ಥಿನಿಯ ಸ್ಟ್ರೆಚರ್​ನಲ್ಲಿ ಹೊತ್ತುತಂದ ಆಂಬ್ಯಲೆನ್ಸ್​ ಚಾಲಕ - ಪಾರ್ಶ್ವವಾಯು ಪೀಡಿತ ವಿದ್ಯಾರ್ಥಿನಿ

ಪಾರ್ಶ್ವವಾಯು ಪೀಡಿತ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಸರಿಯಾದ ವ್ಯವಸ್ಥೆ ಮಾಡದ ಶಿಕ್ಷಣ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Paralytic girl carried on stretcher to 2nd floor for exam
ಪಾರ್ಶ್ವವಾಯು ಪೀಡಿತ ವಿದ್ಯಾರ್ಥಿನಿಯ ಸ್ಟ್ರೆಚರ್​ನಲ್ಲಿ ಹೊತ್ತುತಂದ ಆಂಬ್ಯಲೆನ್ಸ್​ ಚಾಲಕ
author img

By

Published : Mar 17, 2023, 2:42 PM IST

Updated : Mar 17, 2023, 4:25 PM IST

ಪಾರ್ಶ್ವವಾಯು ಪೀಡಿತ ವಿದ್ಯಾರ್ಥಿನಿಯ ಸ್ಟ್ರೆಚರ್​ನಲ್ಲಿ ಹೊತ್ತುತಂದ ಆಂಬ್ಯಲೆನ್ಸ್​ ಚಾಲಕ

ಭಾವನಗರ (ಗುಜರಾತ್): ಸೊಂಟದ ಕೆಳಗಿನ ಭಾಗ ನಿಶ್ಚಲವಾಗಿರುವ ಪಾರ್ಶ್ವವಾಯು ಪೀಡಿತ ವಿದ್ಯಾರ್ಥಿನಿಯೊಬ್ಬಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಆಂಬ್ಯುಲೆನ್ಸ್‌ನಲ್ಲಿ ಆಗಮಿಸಿದ ಘಟನೆ ಗುಜರಾತ್‌ನ ಭಾವನಗರದಲ್ಲಿ ನಡೆದಿದೆ. ವಿದ್ಯಾರ್ಥಿನಿಯ ಹೆಸರು ಇಶಿತಾ. ಇಶಿತಾಳಿಗೆ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರದಲ್ಲಿ ಎರಡನೇ ಮಹಡಿಯ ಕೊಠಡಿಯಲ್ಲಿ ಸ್ಥಳ ನಿಗದಿಯಾಗಿತ್ತು. ಆಂಬ್ಯಲೆನ್ಸ್​ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಂದರೂ ತನಗೆ ನಿಗದಿಯಾಗಿದ್ದ ಎರಡನೇ ಮಹಡಿಗೆ ತಲುಪುವುದು ಅವಳಿಗೆ ಕಷ್ಟವಾಗಿತ್ತು. ಈ ವೇಳೆ ಆಂಬ್ಯುಲೆನ್ಸ್​ ಚಾಲಕ ಸಹಾಯ ಮಾಡಿದ್ದಾರೆ.

ಪರೀಕ್ಷಾ ಕೇಂದ್ರಕ್ಕೆ ಆಂಬ್ಯಲೆನ್ಸ್​ನಲ್ಲಿ ಬಂದ ಇಶಿತಾಳನ್ನು ಆಂಬ್ಯುಲೆನ್ಸ್​ ಚಾಲಕ ಸಲೀಂಭಾಯ್​ ಅವರು ತಮ್ಮ ಸಹಚರರೊಂದಿಗೆ ಸ್ಟ್ರೆಚರ್​ನಲ್ಲಿ ಮಲಗಿಸಿ, ಆಕೆಗೆ ನಿಗದಿಯಾಗಿದ್ದ, ಎರಡನೇ ಮಹಡಿಯಲ್ಲಿದ್ದ ಪರೀಕ್ಷಾ ಕೊಠಡಿಗೆ ಕೊಂಡೊಯ್ದಿದ್ದಾರೆ. ಈ ಮೂಲಕ ಇಶಿತಾ ಪರೀಕ್ಷೆ ಬರೆಯಲು ಸಹಕರಿಸಿದ್ದಾರೆ. ಸೌರಾಷ್ಟ್ರ ಪ್ರಾಂತ್ಯದ ಭಾವನಗರ ನಗರದಲ್ಲಿ ನಡೆದಿರುವ ಈ ಘಟನೆ ವ್ಯಾಪಕವಾಗಿ ಜನರ ಗಮನ ಸೆಳೆದಿದೆ.

ಇಶಿತಾಳ ಈ ಕಥೆ ಎಲ್ಲೆಡೆ ಸುದ್ದಿಯಾಗುತ್ತಿದ್ದಂತೆ, ಗುಜರಾತ್​ ಸರ್ಕಾರದ ಶಿಕ್ಷಣ ಇಲಾಖೆ, ಪರೀಕ್ಷಾ ಕೊಠಡಿಗಳಲ್ಲಿ ವಿಕಲಚೇತನರು ಹಾಗೂ ಪಾರ್ಶ್ವವಾಯು ಪೀಡಿತರಾದವರಿಗೆ ಪರೀಕ್ಷೆ ಬರೆಯಲು ಅಗತ್ಯ ವ್ಯವಸ್ಥೆಗಳನ್ನು ಮಾಡದೇ ಇರುವುದು ಬಯಲಾಗಿದೆ. ಅದರ ಬೆನ್ನಲ್ಲೇ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ವಿದ್ಯಾರ್ಥಿನಿ ಇಶಿತಾಳಿಗೆ ಎರಡೂ ಕಾಲುಗಳು ಮತ್ತು ಸೊಂಟದ ಕೆಳಗಿನ ಭಾಗ ಸಾಮಾನ್ಯರಂತೆ ಕೆಲಸ ಮಾಡುತ್ತಿಲ್ಲ. ಈ ಕಾರಣದಿಂದಾಗಿ ಆಕೆಗೆ ಕಳೆದ ವರ್ಷ ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ. ಒಂದೆಡೆ ಅಂಗವಿಕಲರಿಗೆ ವಿಶೇಷ ವ್ಯವಸ್ಥೆ ಕಲ್ಪಿಸುವುದಾಗಿ ಸರ್ಕಾರ ಹೇಳುತ್ತಿದೆ, ಆದರೆ ಇನ್ನೊಂದೆಡೆ ಭಾವನಗರದ ಪರೀಕ್ಷಾ ಕೇಂದ್ರದ ಎರಡನೇ ಮಹಡಿಯಲ್ಲಿ ಪಾರ್ಶ್ವವಾಯು ಪೀಡಿತ ಬಾಲಕಿ ಇಶಿತಾಗೆ ಪರೀಕ್ಷೆ ಬರೆಯಲು ಸೀಟ್ ವ್ಯವಸ್ಥೆ ಮಾಡಲಾಗಿದೆ.

ಭಾವನಗರದಲ್ಲಿರುವ ನಂದ್ ಕುನ್ವರ್ ಬಾ ಬಾಲಕಿಯರ ಹಾಸ್ಟೆಲ್‌ನಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾಳೆ. ಔಷಧದ ಅಡ್ಡ ಪರಿಣಾಮದಿಂದಾಗಿ ಆಕೆಯ ಸೊಂಟದ ಕೆಳಭಾಗವು ಕೆಲಸ ಮಾಡುವುದನ್ನು ನಿಲ್ಲಿಸಿತ್ತು. ಪಾರ್ಶ್ವವಾಯು ಪೀಡಿತ ಬಾಲಕಿಯನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಮನೆಗೆ ಬಿಡುವ ಜವಾಬ್ದಾರಿಯನ್ನು ಸಲೀಂಭಾಯ್ ವಹಿಸಿಕೊಂಡಿದ್ದಾರೆ. ಸಲೀಂಭಾಯ್ ಅವರು ಇಶಿತಾಗೆ ಸಕಾಲಿಕ ಸಹಾಯವನ್ನು ನೀಡಿದ್ದಾರೆ. ಇಶಿತಾಳನ್ನು ಎರಡನೇ ಮಹಡಿಗೆ ಕರೆದೊಯ್ಯಲು ಸಲಿಂಭಾಯ್ ತಮ್ಮ ಜೊತೆಗೆ ಇನ್ನೂ ಕೆಲವು ಸಹಾಯಕರ ವ್ಯವಸ್ಥೆ ಮಾಡಿದ್ದಾರೆ.

ತನಗೆ ನ್ಯೂರೋಮೈಲಿಟಿಸ್ ಆಪ್ಟಿಕಾ ಇದೆ ಎಂದು ಇಶಿತಾ ಹೇಳಿದ್ದಾಳೆ. ಆಕೆ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಚೇತರಿಸಿಕೊಳ್ಳಲು ಇನ್ನೂ ಸ್ವಲ್ಪ ಸಮಯ ಹಿಡಿಯಬಹುದು ಎಂದು ವೈದ್ಯರು ಹೇಳಿದ್ದಾರೆ. ಆಕೆಯ ಎರಡೂ ಕಾಲುಗಳು ಕೆಲಸ ಮಾಡುತ್ತಿಲ್ಲ ಎನ್ನುತ್ತಾರೆ ಸರ್ವಧರ್ಮ ಆಂಬ್ಯುಲೆನ್ಸ್ ಸೇವೆಯ ಸಲೀಂಭಾಯ್. ಆಕೆಯ ಎಲ್ಲಾ ಪರೀಕ್ಷೆಗಳು ಪೂರ್ಣಗೊಳ್ಳುವವರೆಗೂ, ಅವರು ಇಶಿತಾಗೆ ಪರೀಕ್ಷಾ ಕೇಂದ್ರಕ್ಕೆ ಹೋಗಲು ಹಾಗೂ ಪರೀಕ್ಷಾ ಕೇಂದ್ರದಿಂದ ಮತ್ತೆ ಮನೆಗೆ ಮರಳಲು ಸ್ವಯಂ ಪ್ರೇರಿತರಾಗಿ ಸಹಾಯ ಮಾಡಲು ಮುಂದಾದವರು ಸಲೀಂಭಾಯ್​. 'ನಾನು ಅವಳಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧನಿರುತ್ತೇನೆ, ಅವಳನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾದರೂ, ನಾನು ಕರೆದುಕೊಂಡು ಹೋಗುತ್ತೇನೆ' ಎಂದು ಸಲೀಂಭಾಯ್ ಹೇಳಿದರು.

ಇದನ್ನೂ ಓದಿ: ಆಂಧ್ರಪ್ರದೇಶ: ಅಂಗವಿಕಲತೆಯಿಂದ ಬಳಲುತ್ತಿರುವ ಯುವಕನಿಗೆ ಅಮೆಜಾನ್​ನಲ್ಲಿ ಉದ್ಯೋಗ

Last Updated : Mar 17, 2023, 4:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.